* ಮುಗಿದಿಲ್ಲ ಪಾಂಡೋರಾ ಪೇಪರ್ಸ್‌ನಲ್ಲಿರುವ ಹೆಸರು, ಮತ್ತೆ ನಾಲ್ವರಿಗೆ ಕಂಟಕ* ಖೈತಾನ್‌ ಕುಟುಂಬ, ಗೋವಾ ಗಣಿ ಉದ್ಯಮಿ ಟಿಂಬ್ಲೋರಿಂದ ವಿದೇ​ಶ​ದಲ್ಲಿ ‘ಅ​ಕ್ರಮ ಹೂಡಿ​ಕೆ​’

ನವದೆಹಲಿ(ಅ.06): ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ್ದಾರೆಂದು ‘ಪಂಡೋರಾ ಪೇಪರ್ಸ್‌’ನಿಂದ(Pandora Papers) ಬೆಳಕಿಗೆ ಬಂದ ತೆರಿಗೆ(tax) ವಂಚಕರ ಪಟ್ಟಿಯಿಂದ ಮಂಗಳವಾರ ಮತ್ತೆ 4 ಮಂದಿ ಗಣ್ಯರ ಹೆಸರು ಬಹಿರಂಗಗೊಂಡಿದೆ. ಇವರಲ್ಲಿ ಖ್ಯಾತ ಉದ್ಯಮಿಗಳು ಸೇರಿದ್ದಾರೆ.

ಖೈತಾನ್‌ ಕುಟುಂಬ:

ಭಾರತದ ಮದ್ಯ ಉತ್ಪಾದಕ ಕಂಪನಿ ರಾರ‍ಯಡಿಕೋ ಖೈತಾನ್‌ ಕಂಪನಿಯ ಮಾಲೀಕರಾದ ಲಲಿತ್‌ ಖೈತಾನ್‌ ಮತ್ತು ಅವರ ಕುಟುಂಬ ಸದಸ್ಯರು ತೆರಿಗೆ ಸ್ವರ್ಗದ ರಾಷ್ಟ್ರಗಳಲ್ಲಿ ಆಸ್ತಿ ಹೊಂದಿದ್ದಾರೆ. ಮದ್ಯ ಉತ್ಪಾದಕ ಕಂಪನಿ ರಾರ‍ಯಡಿಕೋ ಖೈತಾನ್‌ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಲಲಿತ್‌ ಖೈತಾನ್‌ ಮತ್ತು ಅವರ ಪುತ್ರ ಅಭಿಷೇಕ್‌ ಅವರು ಬೀಕೂಲ್‌ ಗ್ಲೋಬಲ್‌ ಹೋಲ್ಡಿಂಗ್ಸ್‌ ಲಿ.ನಲ್ಲಿ 50 ಸಾವಿರ ಷೇರುಗಳನ್ನು ಹೊಂದಿದ್ದಾರೆ.

ನಿವೃತ್ತ ಸೇನಾ​ಧಿ​ಕಾ​ರಿ​ಯಿಂದ ಕಂಪ​ನಿ!:

2016ರಲ್ಲಿ ಪನಾಮಾ ಪೇಪ​ರ್‍ಸ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರತದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಆಗಿರುವ ರಾಕೇಶ್‌ ಕುಮಾರ್‌ ಲೂಂಬಾ ಅವರು ಪೂರ್ವ ಆಫ್ರಿಕಾದ ಸೀಷೆಲ್ಸ್‌ ಎಂಬ ದೇಶದಲ್ಲಿ ಇಂಟರ್‌ ನ್ಯಾಷನಲ್‌ ಬ್ಯುಸಿನೆಸ್‌ ಕಂಪನಿ ಎಂಬ ಉದ್ಯಮ ಆರಂಭಿಸಿದ್ದರು.

ಗೋವಾ ಗಣಿ ಕುಟುಂಬದಿಂದ ಹೂಡಿಕೆ:

ಗೋವಾ ಮೂಲದ ಗಣಿ ಉದ್ಯಮಿ ರಾಧಾ ಟಿಂಬ್ಲೋ ಅವರ ಮಗ ರೋಹನ್‌ ಟಿಂಬ್ಲೋ ಅವರು ವಿದೇಶವೊಂದರಲ್ಲಿ ಟ್ರಸ್ಟ್‌ ಹೊಂದಿದ್ದು, ಇಬ್ಬರು ಬಲ್ಗೇರಿಯಾ ನಾಗರಿಕರ ಜತೆ ನಡೆಸಿದ ಆರ್ಥಿಕ ಚಟುವಟಿಕೆಗಳು ಪಂಡೋರಾ ಪೇಪ​ರ್‍ಸ್ನಲ್ಲಿ ಬಯಲಾಗಿದೆ.

2 ಐಪಿ​ಎ​ಲ್‌ ತಂಡ​ಗ​ಳ​ಲ್ಲೂ ವಿದೇಶಿ ಹೂಡಿಕೆ!:

ಈ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್‌ ತಂಡಗಳ ಮಾಲಿಕತ್ವದ ಕಂಪನಿಗಳಲ್ಲಿ ವಿದೇಶಿ ಹೂಡಿಕೆಯೂ ನಡೆದಿತ್ತು. ಅಲ್ಲದೆ ಇದೇ ಕಾರಣಕ್ಕೆ 2010ರಲ್ಲಿ ಈ ಎರಡೂ ತಂಡಗಳನ್ನು ತಾತ್ಕಾಲಿಕವಾಗಿ ಐಪಿಎಲ್‌ನಿಂದ ಹೊರಗಿಡ​ಲಾಗಿತ್ತು ಪಂಡೋರಾದಲ್ಲಿ ಹೇಳಲಾಗಿದೆ. ಆದರೆ, ತಾವು ಈ ಆರೋ​ಪ​ದಿಂದ ಹಿಂದೆಯೇ ದೋಷ​ಮು​ಕ್ತ​ರಾ​ಗಿ​ದ್ದೇವೆ ಎಂದು ಈ ತಂಡ​ಗಳ ಮಾಲೀ​ಕರು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಈ ಐಪಿಎಲ್‌ ತಂಡಗಳ ಪ್ರಾಂಚೈಸಿಯು ಪೂರ್ತಿ ಅಥವಾ ಭಾಗಶಃ ಮಾಲಿಕತ್ವವು ಅನಿವಾಸಿ ಭಾರತೀಯರ ಬಳಿಯಿದ್ದು, ಅವರೆಲ್ಲರೂ ಐಪಿಎಲ್‌ ಸಂಸ್ಥಾಪಕ ಲಲಿತ್‌ ಮೋದಿ ಅವರ ಸಂಬಂಧಿಕರಾಗಿದ್ದಾರೆ. ಡಾಬರ್‌ನ ವಂಶದ ಬುರ್ಮಾನ್‌ ಕುಟುಂಬದ 5ನೇ ಕುಡಿಯಾದ ಗೌರವ್‌ ಬರ್ಮನ್‌ ಅವರು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನ ಪ್ರಾಂಚೈಸಿಯಾಗಿದ್ದು, ಇವರು ಲಲಿತ್‌ ಮೋದಿ ಅವರ ಮಗಳ ಪತಿ. ರಾಜಸ್ಥಾನ ರಾಯಲ್ಸ್‌ ಪ್ರಾಂಚೈಸಿ ಹೊಂದಿರುವ ನೈಜೀರಿಯಾದಲ್ಲಿರುವ ಭಾರತೀಯ ಉದ್ಯಮಿ ಸುರೇಶ್‌ ಚೆಲ್ಲರಾಂ ಅವರ ಪತ್ನಿ ಕವಿತಾ ಅವರು ಲಲಿತ್‌ ಮೋದಿ ಅವರ ಪತ್ನಿ ಮಿನಾಲ್‌ ಅವರ ಸೋದರಿ.