ಆಂಬುಲೆನ್ಸ್ ಇಲ್ಲ | ಸೋಂಕಿತೆಯ ಮೃತದೇಹ ಬೈಕಲ್ಲಿ ಒಯ್ದ ಸಂಬಂಧಿಕರು | ವಿಡಿಯೋ ವೈರಲ್ 

ನವದೆಹಲಿ(ಏ.): ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ವಿಫಲವಾದ ಹಿನ್ನೆಲೆಯಲ್ಲಿ ಮೃತ ಸೋಂಕಿತೆಯ ಮೃತದೇಹವನ್ನು ಬೈಕ್‌ನಲ್ಲಿ ಶವಸಂಸ್ಕಾರಕ್ಕೆ ಕರೆದೊಯ್ದ ಘಟನೆ ನಡೆದಿದೆ.

ಘಟನೆಯ ವಿಡಿಯೋ ವೈರಲ್ ಆಗಿದ್ದು, ಇಬ್ಬರು ಮಹಿಳೆಯ ಮೃತದೇಹವನ್ನು ತಮ್ಮ ಮಧ್ಯೆ ಬೈಕ್‌ನಲ್ಲಿ ಕೂರಿಸಿಕೊಂಡು ಶವಾಗಾರಕ್ಕೆ ಕೊಂಡೊಯ್ಯುತ್ತಿರುವುದು ಕಂಡುಬಂದಿದೆ. ಶ್ರೀಕಾಕುಲಂ ಜಿಲ್ಲೆಯ ಮಂಡಾಸ ಮಂಡಲ್ ಗ್ರಾಮದ 50 ವರ್ಷದ ಮಹಿಳೆ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿದ್ದರು.

ಅತಿಯಾಯ್ತು ಕೊರೋನಾ ಕೆಲಸದ ಹೊರೆ: ಪರಸ್ಪರ ಹೊಡೆದಾಡಿಕೊಂಡ ವೈದ್ಯರು..!

ಮಾರಕ ಕಾಯಿಲೆಯಿಂದ ಮೃತಪಟ್ಟಾಗ ಕುಟುಂಬ ಆಕೆಯ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಶ್ರೀಕಾಕುಲಂ ಜಿಲ್ಲೆಯ ಮಂಡಾಸ ಮಂಡಲ್ ಗ್ರಾಮದ 50 ವರ್ಷದ ಮಹಿಳೆ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿದ್ದರು. ಮಾರಕ ಕಾಯಿಲೆಯಿಂದ ಮೃತಪಟ್ಟಾಗ ಕುಟುಂಬ ಆಕೆಯ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

Scroll to load tweet…

ಕುಟುಂಬವು ಆಂಬ್ಯುಲೆನ್ಸ್ ಅಥವಾ ಬೇರೆ ವಾಹನಕ್ಕಾಗಿ ಕಾಯುತ್ತಲೇ ಇತ್ತು. ಆಸ್ಪತ್ರೆಯಿಂದ ಯಾವುದೇ ಸಹಾಯ ಸಿಗದಿದ್ದಾಗ, ಮೃತ ಮಹಿಳೆಯ ಮಗ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಲು ನಿರ್ಧರಿಸಿದ್ದಾರೆ.