Asianet Suvarna News Asianet Suvarna News

ರೇಪ್‌ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಜೆಎಸ್‌ಡಬ್ಲ್ಯು ಬಾಸ್‌ ಸಜ್ಜನ್‌ ಜಿಂದಾಲ್‌!

ಜೆಎಸ್‌ಡಬ್ಲ್ಯು ಗ್ರೂಪ್ ಚೇರ್ಮನ್‌ ಮತ್ತು ಎಂಡಿ ವಿರುದ್ಧ ಐಪಿಸಿ 376 (ಅತ್ಯಾಚಾರ), ಐಪಿಸಿ 354 ಮತ್ತು ಐಪಿಸಿ 503 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

false and baseless JSW Boss Sajjan Jindal denies rape allegations san
Author
First Published Dec 17, 2023, 8:51 PM IST

ಮುಂಬೈ (ಡಿ.17): ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ತಮ್ಮ ಮೇಲಿನ ಅತ್ಯಾಚಾರದ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅವರು ನೀಡಿರುವ ಹೇಳಿಕೆಯಲ್ಲಿ ತಮ್ಮ ಮೇಲಿನ ಆರೋಗಳು "ಸುಳ್ಳು ಮತ್ತು ಆಧಾರರಹಿತ" ಎಂದು ಕೋಟ್ಯಧಿಪತಿ ಉದ್ಯಮಿ ಕರೆದಿದ್ದಾರೆ. ತನಿಖೆಯ ಉದ್ದಕ್ಕೂ ಸಂಪೂರ್ಣ ಸಹಕಾರವನ್ನು ಒದಗಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು. ತನಿಖೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಮುಂಬೈ ಪೊಲೀಸ್ ಇಲಾಖೆಯು ಜಿಂದಾಲ್ ವಿರುದ್ಧ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ. 2022ರ ಜನವರಿ 24ರಂದು ಜಿಂದಾಲ್‌ನ ಬಿಕೆಸಿ ಆವರಣದಲ್ಲಿರುವ ಪೆಂಟ್‌ಹೌಸ್‌ನಲ್ಲಿ ಅತ್ಯಾಚಾರ ಘಟನೆ ನಡೆದಿದೆ ಎಂದು ಆರೋಪಿಸಿ 30 ವರ್ಷದ ಮುಂಬೈ ಮೂಲದ ನಟಿಯೊಬ್ಬರು ದೂರು ದಾಖಲಿಸಿದ್ದಾರೆ.

ಸಜ್ಜನ್‌ ಜಿಂದಾಲ್‌ ಮೇಲೆ IPC 376 (ಅತ್ಯಾಚಾರ), IPC 354 (ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ಮೇಲೆ ಬಲಾತ್ಕಾರ ಮಾಡುವ ಉದ್ದೇಶ), ಮತ್ತು IPC 503 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಟಿಯ ರೇಪ್‌ ಮಾಡಿದ್ರಾ ಜೆಎಸ್‌ಡಬ್ಲ್ಯು ಗ್ರೂಪ್‌ ಸಿಎಂಡಿ ಸಜ್ಜನ್‌ ಜಿಂದಾಲ್‌, ಮುಂಬೈನಲ್ಲಿ ಎಫ್‌ಐಆರ್‌

ಎಫ್‌ಐಆರ್‌ನಲ್ಲಿ ದೂರುದಾರರ ಹೇಳಿಕೆಯ ಪ್ರಕಾರ, ಅವರು ಮೊದಲ ಬಾರಿಗೆ ಸಜ್ಜನ್ ಜಿಂದಾಲ್ ಅವರನ್ನು 2021ರ ಅಕ್ಟೋಬರ್ 8 ರಂದು ದುಬೈನಲ್ಲಿ ಭೇಟಿಯಾದರು, ಆಸ್ತಿ ಸಂಬಂಧಿತ ಮಾತುಕತೆಗಳನ್ನು ಮುಂದುವರಿಸುವ ಗುರಿಯೊಂದಿಗೆ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು ಎನ್ನಲಾಗಿದೆ.

ವಾರಕ್ಕೆ 70 ಗಂಟೆ ಕೆಲಸಕ್ಕೆ ಬೆಂಬಲ; ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ ಎಂದ ಸಜ್ಜನ್‌ ಜಿಂದಾಲ್‌!

Follow Us:
Download App:
  • android
  • ios