ಕೇಂದ್ರ ಸಚಿವೆ ಸ್ಮೃತಿ ಇರಾನಿ ಅತ್ಯಾಚಾರ ಆರೋಪಿಗೆ ಕೈಮುಗಿಯುತ್ತಿದ್ದಾರೆಂದು ಹೇಳಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಹುಲ್‌ ಗಾಂಧಿ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆ ನೀಡಿದ್ದನ್ನು ಸ್ಮೃತಿ ಇರಾನಿ ತೀವ್ರವಾಗಿ ಖಂಡಿಸಿ, ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಅದಾದ ಬಳಿಕ ಸ್ಮೃತಿ ಇರಾನಿ ಅತ್ಯಾಚಾರ ಆರೋಪಿಗೆ ನಮಸ್ಕರಿಸುತ್ತಿದ್ದಾರೆ ಎಂಬರ್ಥದಲ್ಲಿ ಫೋಟೋವೊಂದು ವೈರಲ್‌ ಆಗಿತ್ತು.

Fact Check: ಮೋದಿಗೆ ಕೆಟ್ಟಹೆಸರು ತರಲು ಈರುಳ್ಳಿ ಟ್ರಕ್‌ ತಡೆದ್ರಾ ಮಮತಾ?

ಮಹಾರಾಷ್ಟ್ರ ಕಾಂಗ್ರೆಸ್‌ನ ನ್ಯಾಷನಲ್‌ ಸೆಕ್ರೆಟರಿ ಇಂದ್ರಾಣಿ ಮಿಶ್ರಾ ಫೋಟೋವೊಂದನ್ನು ಪೋಸ್ಟ್‌ ಮಾಡಿ ‘ಇಲ್ಲಿ ನೋಡಿ ಮೇಡಂ. ಸ್ಮೃತಿ ಇರಾನಿ ‘ರೇಪ್‌ ಗುರು’ವಿನ ಎದುರು ಕೈಮುಗಿದು ನಿಂತಿದ್ದಾರೆ’ ಎಂದು ಒಕ್ಕಣೆ ಬರೆದಿದ್ದರು. ಇಂದ್ರಾಣಿ ಮಿಶ್ರಾ ಬಳಿಕ ಟ್ವೀಟನ್ನು ಡಿಲೀಟ್‌ ಮಾಡಿದ್ದಾರೆ.

ಆದಾಗ್ಯೂ ಈ ಪೋಸ್ಟ್‌ ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ವೈರಲ್‌ ಆಗಿದೆ. ಈ ಫೋಟೋದಲ್ಲಿರುವ ವ್ಯಕ್ತಿ ಬಿಜೆಪಿ ಸಂಸದ, ಅತ್ಯಾಚಾರ ಆರೋಪಿ ಚಿನ್ಮಯಾನಂದ ಎಂದು ಹೇಳಲಾಗಿದೆ.

Fact Check: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಕೀಲರು ಟೋಲ್‌ ಕಟ್ಟಬೇಕಿಲ್ಲ!

ಆದರೆ ನಿಜಕ್ಕೂ ಸ್ಮೃತಿ ಇರಾನಿ ನಮಸ್ಕರಿಸುತ್ತಿರುವುದು ಅತ್ಯಾಚಾರ ಆರೋಪಿ ಚಿನ್ಮಯಾನಂದನಿಗೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ವಾಸ್ತವವಾಗಿ ಸ್ಮೃತಿ ಇರಾನಿ ಕೈ ಮುಗಿಯುತ್ತಿರುವುದು ಬಿಹಾರದ ಸಂಸದರಾದ ಹುಕುಮ್‌ದೇವ್‌ ನಾರಾಯಣ್‌ ಯಾದವ್‌ ಅವರಿಗೆ. ಇವರ ಮೇಲೆ ಯಾವುದೇ ಆರೋಪಗಳಿಲ್ಲ. ಇಂದ್ರಾಣಿ ಮಿಶ್ರಾ ಅವರ ಟ್ವೀಟ್‌ಗೆ ಸ್ವತಃ ಸ್ಮೃತಿ ಇರಾನಿ ಅವರೇ ಪ್ರತಿಕ್ರಿಯಿಸಿ, ‘ಪೋಟೋದಲ್ಲಿರುವುದು ಪದ್ಮಭೂಷಣ ಪುರಸ್ಕೃತ ಹುಕುಮ್‌ದೇವ್‌ ನಾರಾಯಣ್‌ ಯಾದವ್‌. ದಲಿತ ಮತ್ತು ಬಡವರ ಏಳಿಗೆಗಾಗಿ ದುಡಿಯುತ್ತಿರುವವರು ಇವರು’ ಎಂದು ಹೇಳಿದ್ದಾರೆ. ಅಲ್ಲಿದೆ ಸ್ಮೃತಿ ಇರಾನಿ ಅತ್ಯಾಚಾರ ಆರೋಪಿ ಎದುರು ಕೈಮುಗಿದು ನಿಂತಿದ್ದಾರೆ ಎಂಬ ಸುದ್ದಿ ಸುಳ್ಳಿ.

- ವೈರಲ್ ಚೆಕ್