Fact Check: 400 ವರ್ಷಕ್ಕೊಮ್ಮೆ ಅರಳುವ ಅಪರೂಪದ ಹೂವು!

ಚಿಕ್ಕ ಚಿಕ್ಕ ಹೂಕೋಸನ್ನು ಮಂಟಪದಂತೆ ಜೋಡಿಸಿಟ್ಟಂತೆ ಕಾಣುವ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಇದು ಹೂಕೋಸಲ್ಲ. ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ಎಂದು ಹೇಳಲಾಗಿದೆ. ಇದರ ಹೆಸರು ಪಗೋಡ ಅಂದರೆ ಗೋಪುರ ಎಂದರ್ಥ.

Fact Check of Rare Pagoda Flower in Himalayas blooms once in 400 years

ಚಿಕ್ಕ ಚಿಕ್ಕ ಹೂಕೋಸನ್ನು ಮಂಟಪದಂತೆ ಜೋಡಿಸಿಟ್ಟಂತೆ ಕಾಣುವ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಇದು ಹೂಕೋಸಲ್ಲ. ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ಎಂದು ಹೇಳಲಾಗಿದೆ. ಇದರ ಹೆಸರು ಪಗೋಡ ಅಂದರೆ ಗೋಪುರ ಎಂದರ್ಥ. ಕೆನೆ ಬಣ್ಣದ ಕೋನ್‌ ಆಕಾರದಲ್ಲಿ ಹೂವಿನ ಸುತ್ತ ಹಸಿರು ಎಲೆಗಳು ಆವರಿಸಿಕೊಂಡಿದ್ದು, ನೋಡಲು ಸುಂದರವಾಗಿದೆ.

#FactCheck: PF ಸಂಸ್ಥೆಯಿಂದ ಕಾರ್ಮಿಕರಿಗೆ 80,000 ಬಂಪರ್ ಕೊಡುಗೆ!

ಆದರೆ ನಿಜಕ್ಕೂ ಇದು ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಮಾತ್ರ ಅರಳುವ ಪಗೋಡ ಹೂವೇ ಎಂದು ಪರಿಶೀಲಿಸಿದಾಗ ಇದು ಪಗೋಡಾ ಅಲ್ಲ, ಅಥವಾ ಅಪರೂಪಕ್ಕೆ ಅರಳುವ ಹೂವೂ ಅಲ್ಲವೆಂದು ತಿಳಿದುಬಂದಿದೆ. ಈ ಹಿಂದೆಯೂ ಇದೇ ಫೋಟೋವನ್ನು ಪೋಸ್ಟ್‌ ಮಾಡಿ, 400 ವರ್ಷಗಳಿಗೊಮ್ಮೆ ಹಿಮಾಲಯದಲ್ಲಿ ಮಾತ್ರ ಅರಳುವ ಮಹಾಮೇರು ಪುಷ್ಪ ಎಂದು ಸುಳ್ಳುಸುದ್ದಿ ಹರಡಲಾಗಿತ್ತು.

ವಾಸ್ತವವಾಗಿ ವೈರಲ್‌ ಆಗಿರುವ ಹೂವು ಹಿಮಾಲಯದ ಸ್ಥಳೀಯ ದೈತ್ಯ ಮೂಲಿಕೆಯ ಸಸ್ಯವಾದ ರೇಯುಮ್‌ ನೋಬಲ… ಸಸ್ಯದ್ದು. ಭೂತಾನ್‌, ಅಷ್ಘಾನಿಸ್ತಾನ, ಮ್ಯಾನ್ಮಾರ್‌, ಪಾಕಿಸ್ತಾನ ಭಾರತದ ಸಿಕ್ಕಿಂ, ನೇಪಾಳದಲ್ಲಿ ಬೆಳೆಯುತ್ತದೆ.

 

4000-4800 ಮೀಟರ್‌ ಎತ್ತರದ ಪ್ರದೇಶಗಳಲ್ಲಿ 1-2 ಮೀಟರ್‌ ಎತ್ತರದ ವರೆಗೆ ಬೆಳೆಯುತ್ತದೆ. ಆದರೆ ಇದೇನು ಅಪರೂಪದ ಹೂವಿನ ಜಾತಿಯಲ್ಲ, ಆಗಾಗ ಬೆಳೆಯುತ್ತಿರುತ್ತದೆ. 2019ರ ಜುಲೈನಲ್ಲಿ ‘ಆಲ್ಫಿನ್‌ ಗಾರ್ಡನ್‌ ಸೊಸೈಟಿ’ ರೇಯುಮ್‌ ನೊಬೆಲ್‌ ಸಸ್ಯದ ಫೋಟೋವನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿತ್ತು.

- ವೈರಲ್ ಚೆಕ್ 

Latest Videos
Follow Us:
Download App:
  • android
  • ios