ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅಮಾನುಷವಾಗಿ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ನಂತರ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ‘ತುರ್ತು ಸಹಾಯವಾಣಿ’ ಎಂದು ಫೋನ್‌ ನಂಬರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Fact Check | ಇವರೆಲ್ಲಾ ಜೆಎನ್‌ಯುನಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ?

ಅದರಲ್ಲಿ ‘ಈ ನಿರ್ಭಯಾ ಫೋನ್‌ ನಂಬರ್‌ ಅನ್ನು ನಿಮ್ಮ ಪತ್ನಿ, ಮಗಳು, ಸಹೋದರಿ, ತಾಯಿ, ಸ್ನೇಹಿತೆ ಎಲ್ಲರಿಗೂ ಕಳುಹಿಸಿ. ಮತ್ತು ಅವರ ಮೊಬೈಲ್‌ನಲ್ಲಿ ಸೇವ್‌ ಮಾಡಿಟ್ಟುಕೊಳ್ಳುವಂತೆ ಹೇಳಿ. ಯಾವುದೇ ತುರ್ತು ಸಂದರ್ಭದಲ್ಲಿ ಮಹಿಳೆಯರು 9833312222 ಸಂಖ್ಯೆಗೆ ಖಾಲಿ ಸಂದೇಶ ರವಾನಿಸಿದರೆ ಅಥವಾ ಮಿಸ್ಡ್‌ ಕಾಲ್‌ ಕೊಟ್ಟರೆ ಪೊಲೀಸರು ಅವರ ಲೊಕೇಶನ್‌ ಪತ್ತೆ ಹಚ್ಚಿ, ನೆರವಿಗೆ ಧಾವಿಸುತ್ತಾರೆ’ ಎಂದು ಹೇಳಲಾಗಿದೆ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಈ ಸಂದೇಶ ಬಾರೀ ವೈರಲ್‌ ಆಗುತ್ತಿದೆ. 2018 ರಲ್ಲೂ ಇದೇ ಸಂದೇಶ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು.

 

ಆದರೆ ಈ ಸಂಖ್ಯೆ ನಿಜಕ್ಕೂ ತುರ್ತು ನೆರವಿಗೆ ಲಭ್ಯವಿದೆಯೇ ಎಂದು ಆಲ್ಟ್‌ ನ್ಯೂಸ್‌ ಪರಿಶೀಲಿಸಿದಾಗ ಇದೊಂದು ಸುಳ್ಳು ಸಂದೇಶ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ 2015ರ ಮುಂಬೈ ರೈಲ್ವೆ ಪೊಲೀಸ್‌ ಇಲಾಖೆ ಈ ಸಹಾಯವಾಣಿಯನ್ನು ಜಾರಿ ಮಾಡಿತ್ತು. ರೈಲ್ವೆ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಈ ಸಹಾಯವಾಣಿ ಇತ್ತು.

Fact Check: ರಾಮಮಂದಿರ ನಿರ್ಮಾಣಕ್ಕೆ ತಿರುಪತಿಯಿಂದ 100 ಕೋಟಿ ದೇಣಿಗೆ!

ಅಂದಹಾಗೆ ಈ ಸಹಾಯವಾಣಿ ಆಗ ಮುಂಬೈಗೆ ಮಾತ್ರ ಸೀಮಿತವಾಗಿತ್ತು. ಸದ್ಯ ಈ ಸಹಾಯವಾಣಿಯನ್ನು ಫೆಬ್ರವರಿ 2018ರಲ್ಲಿಯೇ ರದ್ದುಪಡಿಸಲಾಗಿದೆ. ಹಾಗಾಗಿ ಈ ಸಂದೇಶ ಸುಳ್ಳು ಎಂಬುದುದು ಸ್ಪಷ್ಟ.

ಒಂದು ವೇಳೆ ಮಹಿಳೆಯರು ಅಪಾಯದಲ್ಲಿದ್ದರೆ 100 ಸಂಖ್ಯೆಗೆ ಕರೆ ಮಾಡಬಹುದು. ಇದು ಸ್ಥಳೀಯ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕನೆಕ್ಟ್ ಆಗುತ್ತದೆ. ಹಾಗೆಯೇ ಈ ಸಂಖ್ಯೆಯು ಎಲ್ಲಾ ರಾಜ್ಯ ಮತ್ತು ನಗರಗಳಿಗೆ ಅನ್ವಯವಾಗುತ್ತದೆ.

- ವೈರಲ್ ಚೆಕ್