ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ಮೇಲೆ ಮುಸುಕುದಾರಿಗಳ ಗುಂಪೊಂದು ದಾಳಿ ಮಾಡಿದ್ದಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ನಟಿ ದೀಪಿಕಾ ಪಡುಕೋಣೆ ಕೂಡ ಮೊನ್ನೆ ಜೆಎನ್‌ಯುಗೆ ಭೇಟಿ ನೀಡಿ ತಮ್ಮ ನೈತಿಕ ಬೆಂಬಲ ಘೋಷಿಸಿದ್ದರು. ಈ ಘಟನೆ ಬಳಿಕ ದೀಪಿಕಾ ಪಡುಕೋಣೆ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ದೀಪಿಕಾ ನಟನೆಯ ಚಪಕ್‌ ಸಿನಿಮಾ ಬಹಿಷ್ಕರಿಸುವಂತೆಯೂ ಕರೆ ಕೊಟ್ಟಿದ್ದರು.

ಚಪಕ್‌ ಚಿತ್ರಕ್ಕೆ ಬೆಂಬಲ: ಚಿತ್ರಮಂದಿರದ ಎಲ್ಲ ಟಿಕೆಟ್ ಬುಕ್ ಮಾಡಿದ 'ಕೈ' ಶಾಸಕ

ಇದರ ಜೊತೆಗೆ ಇದೀಗ ಆ್ಯಸಿಡ್‌ ದಾಳಿ ಸಂತಸ್ತೆ ಲಕ್ಷ್ಮೇ ಅಗರ್ವಾಲ್‌ ಅವರ ಜೀವನಾಧಾರಿಕ ಚಪಕ್‌ ಕತೆಯಲ್ಲಿ ಆ್ಯಸಿಡ್‌ ಎರಚಿದ್ದ ಅಪರಾಧಿಯ ಹೆಸರನ್ನು ರಾಜೇಶ್‌ ಎಂದು ಉಲ್ಲೇಖಿಸಲಾಗಿದೆ. ವಾಸ್ತವಾಗಿ ಆ್ಯಸಿಡ್‌ ಎರಚಿದ್ದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು. 2005ರಲ್ಲಿ ನಯೀಮ್‌ ಖಾನ್‌ ಎನ್ನುವ ವ್ಯಕ್ತಿ ಲಕ್ಷ್ಮೇ ಅಗರ್ವಾಲ್‌ ಮೇಲೆ ಆ್ಯಸಿಡ್‌ ಎರಚಿದ್ದ. ಆದರೆ ಸಿನಿಮಾ ನಿರ್ಮಾಪಕರು ಮುಸ್ಮಿಂ ಹೆಸರನ್ನು ಮರೆಮಾಚಿ ಬೇಕೆಂದೇ ಹಿಂದು ಧರ್ಮದವರ ಹೆಸರು ಇಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ನಿಜಕ್ಕೂ ಸಿನಿಮಾನದಲ್ಲಿ ಆ್ಯಸಿಡ್‌ ಎರಚಿದ ಅಪರಾಧಿಯ ಹೆಸರು ಏನೆಂದು ಪರಿಶೀಲಿಸಿದಾಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಆ್ಯಸಿಡ್‌ ಎರಚಿದ ಅಪರಾಧಿ ನಯೀಂ ಖಾನ್‌ ಹೆಸರನ್ನು ಸಿನಿಮಾದಲ್ಲಿ ಬಶೀರ್‌ ಖಾನ್‌ ಎಂದು ಇಡಲಾಗಿದೆ. ರಾಜೇಶ್‌ ಎಂಬುವವರು ಚಿತ್ರದ ನಾಯಕಿ ಮಾಲತಿ ಅಗರ್ವಾಲ್‌ ಸ್ನೇಹಿತ. ಅಲ್ಲಗೆ ವೈರಲ್‌ ಆದ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್