* ಕೊರೋನಾ ಸೋಂಕು ವಿರುದ್ಧದ ಹೋರಾಟ* ಡ್ರೋನ್‌ ಮೂಲಕ ಲಸಿಕೆ ಸಾಗಣೆಗೆ ಅನುಮೋದನೆ* ತೆಲಂಗಾಣದಲ್ಲಿ ಯೋಜನೆ ಜಾರಿ

ನವದೆಹಲಿ(ಮೇ.09): ಕೊರೋನಾ ಸೋಂಕು ವಿರುದ್ಧದ ಹೋರಾಟದ ಭಾಗವಾಗಿ, ಪ್ರಾಯೋಗಿಕವಾಗಿ ಡ್ರೋನ್‌ ಮೂಲಕ ಕೊರೋನಾ ಲಸಿಕೆಯನ್ನು ವಿತರಿಸಲು ಕೇಂದ್ರ ಸರ್ಕಾರ ಶನಿವಾರ ಷರತ್ತುಬದ್ಧ ಅನುಮೋದನೆ ನೀಡಿದೆ. ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಲಸಿಕೆಯನ್ನು ಡ್ರೋನ್‌ ಮೂಲಕ ವಿತರಿಸಲು ತೆಲಂಗಾಣ ಸರ್ಕಾರಕ್ಕೆ ಅನುಮತಿ ನೀಡಿವೆ.

ಕೊರೋನಾ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ

‘ಮಾನವರಹಿತ ವಿಮಾನಯಾನ ವ್ಯವಸ್ಥೆ ಕಾಯ್ದೆ-2021ರ ಅಡಿಯಲ್ಲಿ ಈ ಅನುಮತಿ ನೀಡಲಾಗಿದೆ. ಈ ವಿನಾಯಿತಿಯು ಅನುಮೋದನೆಯ ದಿನಾಂಕದಿಂದ 1 ವರ್ಷದ ವರೆಗೆ ಮಾನ್ಯವಾಗಿರುತ್ತದೆ. ವೈದ್ಯಕೀಯ ವ್ಯವಸ್ಥೆಯ ಸುಧಾರಣೆಯ ಮೂಲಕ ಲಸಿಕೆಯನ್ನು ವೇಗವಾಗಿ ತಲುಪಿಸುವುದು ಮತ್ತು ನಾಗರಿಕ ಮನೆ ಬಾಗಿಲಿಗೇ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ’ ಎಂದು ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಡ್ರೋನ್‌ ಬಳಕೆಯಿಂದ ಮಾನವ ಸೋಂಕಿನಿಂದಲೂ ಪಾರಾಗಬಹುದು ಮತ್ತು ಜೊತೆಗೆ, ಕುಗ್ರಾಮಗಳಿಗೂ ಲಸಿಕೆ ತಲುಪಲಿದೆ ಎಂದು ತಿಳಿಸಿದೆ. ಈ ಪ್ರಯೋಗ ಮೇ ಅಂತ್ಯದ ಬಳಿಕ ಆರಂಭವಾಗಬಹುದು.

ಇದಕ್ಕೂ ಮೊದಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಐಟಿ ಕಾನ್ಪುರದ ಸಹಯೋಗದಲ್ಲಿ ಡ್ರೋನ್‌ ಬಳಸಿಕೊಂಡು ಲಸಿಕೆ ವಿತರಣೆಯ ಕಾರ‍್ಯಸಾಧ್ಯತೆ ಕುರಿತು ಅಧ್ಯಯನ ನಡೆಸಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona