ನಾಸಿಕ್( ನ. 10)  ಭಾರತೀಯ ಯಾವ ಮಹಿಳೆಯರಿಗೆ ಚಿನ್ನ ಇಷ್ಟವಿಲ್ಲ ಹೇಳಿ. ಬಂಗಾರ ಅಂದರೆ ಅವರಿಗೆ ಪಂಚ ಪ್ರಾಣ. ಆದರೆ ಇಲ್ಲೊಬ್ಬ ಮಾಜಿ ಎಂಎಲ್‌ ಸಿ ದೇಶಭಕ್ತಿಗಾಗಿ ಬಂಗಾರವನ್ನೆಲ್ಲ ದಾನ ಮಾಡಿದ್ದಾರೆ.

ಸುಮಾರು  20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹುತಾತ್ಮ ಸೈನಿಕರ ಪತ್ನಿಯರು ಮತ್ತು ನಿವೃತ್ತ ಸೈನಿಕರ ಕಲ್ಯಾಣಕ್ಕೆ ನೀಡಿದ್ದಾರೆ.  ಪ್ರಧಾನಿ ನರೇಂದ್ರ  ಮೋದಿ ಅವರೇ ಖುದ್ದಾಗಿ ಈ ನಾಯಕಿಯ ಕಾರ್ಯಕ್ಕೆ ಮೆಚ್ಚುಗೆ ಪತ್ರ ಕಳಿಸಿದ್ದಾರೆ.

ತಮ್ಮ  75  ನೇ ಜನ್ಮದಿನ ಆಚರಿಸಿಕೊಂಡ ನಿಶಿಗಂಧಾ ಮೊಗಲ್ ಸೇನೆಯಲ್ಲಿ ಸೇವೆ ಮಾಡಿದವರ ಒಳಿತಿಗೆ ಈ ದಾನ ಮಾಡಿದ್ದಾರೆ.

ನಾನು ಒಬ್ಬ ರಾಜಕಾರಣಿಯಾಗಿ ಸೇವೆ  ಮಾಡಿದ್ದೆ. ಸೈನಿಕರಿಗೆ, ಹುತಾತ್ಮರ ಕುಟುಂಬಕ್ಕೆ ಏನಾದರೂ ನೆರವು ನೀಡಬೇಕು ಎಂದು ಭಯಸಿದ್ದೆ. ಈ ಮೂಲಕ ಅದು ಸಾಧ್ಯವಾಗುತ್ತಿದೆ ಎಂದು ನಾಯಕಿ  ಹೇಳಿದ್ದಾರೆ. ನನ್ನ ತಾಯಿ ತುರ್ತುಪರಿಸ್ಥಿತಿ  ಸಮಯದಲ್ಲಿ ಹೋರಾಟ ಮಾಡಿದ್ದರು. ಅವರೆ ಇಂಥ ಕೆಲಸಗಳಿಗೆ ಪ್ರೇರಣೆ ಎಂದು  ಹೇಳಿದ್ದಾರೆ.