ದೆಹಲಿ ಹಿಂಸೆ ಭೀಕರತೆಗೆ ಯಮನೂ ರಾಜೀನಾಮೆ ನೀಡುತ್ತಿದ್ದ| ದೆಹಲಿ ಹಿಂಸಾಚಾರ ಖಂಡಿಸಿ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರಹ

ಮುಂಬೈ[ಮಾ.09]: ದೆಹಲಿ ಹಿಂಸಾಚಾರದ ಭೀಕರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಅದನ್ನು ಕಂಡು ಯಮರಾಜ ಕೂಡ ತನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದ ಎಂದು ಶಿವಸೇನೆ ಖೇದ ವ್ಯಕ್ತಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿ ಹಿಂಸಾಚಾರ ಖಂಡಿಸಿ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ದೆಹಲಿ ಹಿಂಸಾಚಾರದಲ್ಲಿ ಹಿಂದು ಹಾಗೂ ಮುಸ್ಲಿಂ ಕುಟುಂಬದ ಮುಗ್ಧ ಮಕ್ಕಳು ಅನಾಥರಾಗಿದ್ದಾರೆ. ನಾವು ಅನಾಥರ ಹೊಸ ಸಮಾಜ ನಿರ್ಮಿಸಲು ಹೊರಟಿದ್ದೇವೆ. ತಂದೆಯ ಶವದ ಮುಂದೆ ಅಳುತ್ತಿರುವ ಬಾಲಕನ ಫೋಟೋ ಇದಕ್ಕೊಂದು ಉದಾಹರಣೆ.

50ಕ್ಕೂ ಹೆಚ್ಚು ಜನರ ಪ್ರಾಣ ತೆಗೆಯಲು ಗಲಭೆಕೋರರಿಗೆ ಅಧಿಕಾರ ನೀಡಿದವರು ಯಾರು? ಇದು ಮಾನವೀಯತೆಯ ಸಾವೇ? ಎಂದು ಪ್ರಶ್ನಿಸಲಾಗಿದೆ.