ಒಂದು ವೇಳೆ ಯುಪಿಯಲ್ಲಿ ನಮ್ಮ ಪಕ್ಷ 80ಕ್ಕೆ 80 ಕ್ಷೇತ್ರ ಗೆದ್ದರೂ ಇವಿಎಂ ನಂಬಲ್ಲ : ಅಖಿಲೇಶ್ ಯಾದವ್
ಉತ್ತರ ಪ್ರದೇಶದಲ್ಲಿ ಒಂದು ವೇಳೆ ನಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ 80 ಕ್ಕೆ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಕೂಡ ನಾವು ಇವಿಎಂ ನಂಬುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದಲ್ಲಿ ಒಂದು ವೇಳೆ ನಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ 80 ಕ್ಕೆ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಕೂಡ ನಾವು ಇವಿಎಂ ನಂಬುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.
ನಿನ್ನೆ ಸಂಸತ್‌ನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅಖಿಲೇಶ್, ನಾನು ನಿನ್ನೆ ಇವಿಎಂಗಳನ್ನು ನಂಬುತ್ತಿರಲಿಲ್ಲ. ಇಂದೂ ನಂಬುವುದಿಲ್ಲ ಮತ್ತು ನಾನು ಯುಪಿಯಲ್ಲಿ ಎಲ್ಲ 80 ಕ್ಕೆ 80 ಸ್ಥಾನಗಳನ್ನು ಗೆದ್ದಿದ್ದರೂ ಕೂಡ ವಿದ್ಯುನ್ಮಾನ ಮತಯಂತ್ರವನ್ನು ನಂಬುತ್ತಿರಲಿಲ್ಲ. ಇವಿಎಂ ಮೇಲಿನ ಸಮಸ್ಯೆಗಳು ಸತ್ತಿಲ್ಲ. ಸಮಾಜವಾದಿ ಪಕ್ಷ ಅದು ಸರಿ ಇಲ್ಲ ಎಂಬ ತನ್ನ ನಿರ್ಧಾರದ ಮೇಲೆ ಅಚಲವಾಗಿ ಉಳಿಯುತ್ತದೆ ಎಂದರು.
ಇಬ್ಬರಲ್ಲ ಮೂವರಲ್ಲ ಇಂದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಅಖಿಲೇಶ್ ಯಾದವ್ ಕುಟುಂಬದ ಐವರು...!
ಅಲ್ಲದೇ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ನಂತರ ಇವಿಎಂಗಳನ್ನು ತೆಗೆದು ಹಾಕುತ್ತದೆ. ಕಳೆದ ಚುನಾವಣೆ ಕೋಮುವಾದಿ ಪಕ್ಷಗಳನ್ನು ಸೋಲಿಸಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದು ಎಸ್‌ಪಿ ನಾಯಕ ಯಾದವ್ ಹೇಳಿದರು. ಆದರೆ ವಿಪರ್ಯಾಸ ಎಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಇದೇ ಅಖಿಲೇಶ್ ಯಾದವ್ ಅವರ ಹೆಂಡತಿಯೂ ಸೇರಿದಂತೆ ಕುಟುಂಬದ ಐವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 37 ಸೀಟುಗಳನ್ನು ಇಲ್ಲಿ ಸಮಾಜವಾದಿ ಪಕ್ಷ ಗಳಿಸಿದೆ.
ಜೈಲಲ್ಲಿರುವ ಎಂಜಿನಿಯರ್ ರಶೀದ್ ಶಪಥಕ್ಕೆ 2 ತಾಸು ಅನುಮತಿ
ನವದೆಹಲಿ: ಭಯೋತ್ಪಾದನೆ ಕೇಸಿನಲ್ಲಿ ತಿಹಾರ್ ಜೈಲಿನಲ್ಲಿರುವ ಬಾರಾಮುಲ್ಲಾ ಕ್ಷೇತ್ರದ ನೂತನ ಸಂಸದ ಎಂಜಿನಿಯರ್ ರಶೀದ್ ಅಲಿಯಾಸ್ ಶೇಖ್ ಅಬ್ದುಲ್ ರಶೀದ್‌ಗೆ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ದಿಲ್ಲಿ ಕೋರ್ಟು 2 ತಾಸು ಕಸ್ಟಡಿ ಪೆರೋಲ್ ನೀಡಿದೆ. ಕೋರ್ಟ್, ತಾನು ಸೋಮವಾರ ಕಾಯ್ದಿರಿಸಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿದ್ದು, ಜು.5 ರಂದು ಲೋಕಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು 2 ಗಂಟೆಗಳ ಕಾಲ ಅನುಮತಿ ನೀಡಿದೆ.
ಉಗ್ರವಾದದ ಕೇಸಲ್ಲಿ ಬಂಧಿತರಾಗಿರುವ ರಶೀದ್ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಜೈಲಿಂದಲೇ ಸ್ಪರ್ಧಿಸಿದ್ದರು ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಬಳಿಕ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಜಾಮೀನು ಕೋರಿದ್ದರು.
ಅಯೋಧ್ಯೆ ಗೆಲುವಿನ ಬಗ್ಗೆ ಕವಿತೆ ಹೇಳಿ ಬಿಜೆಪಿಗೆ ಟಾಂಗ್ ಕೊಟ್ಟ ಅಖಿಲೇಶ್ ಯಾದವ್
ಶೇ.65ಕ್ಕೆ ಮೀಸಲು ಹೆಚ್ಚಳ ರದ್ದತಿ ಪ್ರಶ್ನಿಸಿ ಸುಪ್ರೀಂಗೆ ಬಿಹಾರ ಸರ್ಕಾರ ಮೊರೆ
ನವದೆಹಲಿ: ದಲಿತ, ಆದಿವಾಸಿ ಮತ್ತು ಹಿಂದುಳಿದವರ ಮೀಸಲಾತಿಯನ್ನು ಶೇ.50ರಿಂದ ಶೇ.65ಕ್ಕೆ ಎರಿಸಲು ನಿತೀಶ್ ಕುಮಾರ್ ಸರ್ಕಾರಕ್ಕೆ ಅನುವು ಮಾಡಿಕೊಟ್ಟ ತಿದ್ದುಪಡಿ ಮಾಡಿದ ಮೀಸಲಾತಿ ಕಾನೂನುಗಳನ್ನು ರದ್ದುಗೊಳಿಸಿದ ಪಟನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಶಾಸಕಾಂಗದ ತಿದ್ದುಪಡಿ ಸಂವಿಧಾನದ ಅಧಿಕಾರವನ್ನು ಮೀರಿದ್ದು, ಕೆಟ್ಟ ಕಾನೂನು, ಸಮಾನತೆಯ ಷರತ್ತಿನ ಉಲ್ಲಂಘನೆ ಮಾಡಿದೆ ಎಂದು ಹೈಕೋರ್ಟ್ ಜು.20ರಂದು ತೀರ್ಪಿನಲ್ಲಿ ಹೇಳಿತ್ತು. ಇದನ್ನು ವಿರೋಧಿಸಿ ವಕೀಲ ಮನೀಶ್ ಕುಮಾರ್ ಮೂಲಕ ಸುಪ್ರೀಂ ಕೋರ್ಟ್‌ಗೆ ಬಿಹಾರದ ಮನವಿ ಸಲ್ಲಿಸಲಾಗಿದೆ.