ಮುತ್ತಿನ ನಗರಿ ನೋಡಲು ಹಾವಿಗೂ ಆಸೆ: ಕಾರ್ಗೋ ಟ್ರಕ್‌ ಏರಿ ಗುಜರಾತ್‌ನಿಂದ ಹೈದರಾಬಾದ್‌ಗೆ ಹಾವಿನ ಸವಾರಿ

ಹಾವೊಂದು ಟ್ರಕ್ ಏರಿ ಗುಜರಾತ್‌ನಿಂದ (Gujarat)  ಹೈದರಾಬಾದ್‌ಗೆ (Hyderabad0 ಪ್ರಯಾಣ ಬೆಳೆಸಿದೆ. ಅತೀ ಅಪರೂಪದ  ಕಪ್ಪು ತಲೆಯ ಈ ರಾಯಲ್ ಸ್ನೇಕ್ ಸರಕು ಸಾಗಣೆ ಟ್ರಕ್ ಏರಿ ಹೈದರಾಬಾದ್‌ಗೆ ಬಂದಿದೆ.

Even a snake wants to see the city of pearls  A rare black headed snake came hyderabad from Gujarat by a cargo truck akb

ಹೈದರಾಬಾದ್: ಮಳೆಗಾಲ ಶುರುವಾಗಿದ್ದು, ಇದು ಹಾವುಗಳು ಬಸ್ ಕಾರು ಬೈಕ್ ಏರುವ ಸಮಯವಾಗಿದೆ. ಏನ್ ತಮಾಷೆ ಮಾಡ್ತಿದ್ದೀರಾ ಅಂತ ಕೇಳ್ತಿದ್ದೀರಾ? ತಮಾಷೆ ಎನಿಸಿದರು ಇದು ಸತ್ಯ, ದೇಶಾದ್ಯಂತ ಎಲ್ಲೆಡೆ ಮುಂಗಾರು ಚುರುಕುಗೊಂಡಿದ್ದು,   ಬಿಲಗಳಲ್ಲಿ ಕಾಡು ಮೇಡುಗಳಲ್ಲಿ ತಣ್ಣನೆ ಮಲಗಿದ್ದ ಹಾವುಗಳು ಬೆಚ್ಚನೆಯ ತಾಣ ಅರಸಿ ಮನೆಗಳು ವಾಹನಗಳನ್ನು ಏರಿ ಕುಳಿತಕೊಳ್ಳುತ್ತವೆ. ಮುಂಗಾರು ಶುರುವಾಗುತ್ತಿದ್ದಂತೆ ಜನ ಈ ಬಗ್ಗೆ ಮತ್ತಷ್ಟು ಜಾಗರೂಕರಾಗಬೇಕಾಗಿದೆ.  ಕಾರನ್‌ ಬಾನೆಟ್, ಕಾಲಿಗೆ ಧರಿಸುವ ಶೂಗಳು, ಬೈಕ್ ಒಳಭಾಗ ಹೀಗೆ ಹಾವುಗಳು ಮಳೆಯಿಂದ ರಕ್ಷಣೆ ಪಡೆಯಲು ಅಜ್ಞಾತ ಸ್ಥಳವನ್ನು ಅರಸುತ್ತವೆ. ಹಾವುಗಳು ಕಾರು ಬೈಕ್‌ಗಳನ್ನೇರಿರುವುದನ್ನು ತಿಳಿಯದೇ ಚಾಲಕರು ವಾಹನ ಚಲಾಯಿಸಿ ಹಾವುಗಳು ಒಂದೆಡೆಯಿಂದ ಮತ್ತೊಂದೆಡೆ ತಲುಪಿದ ಹಲವು ಘಟನೆಗಳು ಮುಂಗಾರು ಸಮಯದಲ್ಲಿ ಆಗಾಗ ನಡೆಯುತ್ತಿರುತ್ತವೆ.

ಅದೇ ರೀತಿ ಈಗ ಹಾವೊಂದು ಟ್ರಕ್ ಏರಿ ಗುಜರಾತ್‌ನಿಂದ (Gujarat)  ಹೈದರಾಬಾದ್‌ಗೆ (Hyderabad0 ಪ್ರಯಾಣ ಬೆಳೆಸಿದೆ. ಅತೀ ಅಪರೂಪದ  ಕಪ್ಪು ತಲೆಯ ಈ ರಾಯಲ್ ಸ್ನೇಕ್ ಸರಕು ಸಾಗಣೆ ಟ್ರಕ್ ಏರಿ ಹೈದರಾಬಾದ್‌ಗೆ ಬಂದಿದೆ. ಹೈದರಾಬಾದ್‌ ಹೇಳಿ ಕೇಳಿ ಮುತ್ತಿನ ನಗರಿ ಪ್ರವಾಸಿ ತಾಣ ಬೇರೆ. ಬಹುಶಃ ಹಾವಿಗೂ ಮುತ್ತಿನ ನಗರಿ ನೋಡುವ ಆಸೆಯಾಯ್ತೋ ಏನೋ ಸೀದಾ ಟ್ರಕ್ ಏರಿ ಭಾಗ್ಯನಗರಿಗೆ ಬಂದಿಳಿದಿದೆ.  ಹೈದರಾಬಾದ್‌ನ ಜೀಡಿಮೆಟ್ಲದಲ್ಲಿರುವ ಸ್ಯಾನಿಟರಿ ಗೋದಾಮೊಂದರಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಗುಜರಾತ್‌ನಿಂದ ನಗರಕ್ಕೆ ಆಗಮಿಸಿದ ಟ್ರಕ್ಕೊಂದರಲ್ಲಿ ಇದು ತೂರಿಕೊಂಡಿತ್ತು ಎಂದು ತಿಳಿದು ಬಂದಿದೆ. ಗೋದಾಮಿನ ಸಿಬ್ಬಂದಿ ಫ್ರೆಂಡ್ಸ್ ಆಫ್ ಸ್ನೇಕ್ ಸೊಸೈಟಿಗೆ (friends of snake society) ಕರೆ ಮಾಡಿದ್ದು, ನಂತರ ತಂಡವೊಂದು ಹೋಗಿ ಹಾವನ್ನು ರಕ್ಷಣೆ ಮಾಡಿದ್ದಾರೆ. 

ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!

ಈ ಸ್ನೇಕ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ವಿಶ್ವನಾಥ್ (Avinash Vishwanath) ಮಾತನಾಡಿ, ಸಾಮಾನ್ಯವಾಗಿ ನಾವು ಕೆರೆ ಹಾವು ಇಲಿ ಹಿಡಿಯುವ ಹಾವು, ಕನ್ನಡಕ ಹಾವು ಮುಂತಾದವುಗಳನ್ನು ಸಾಮಾನ್ಯವಾಗಿ ನಿರೀಕ್ಷೆ ಮಾಡುತ್ತೇವೆ. ಆದರೆ ಇಲ್ಲಿ ಟ್ರಕ್‌ನಲ್ಲಿ ಅತಿ ಅಪರೂಪದ ಕಪ್ಪು ತಲೆಯ ರಾಯಲ್ ಸ್ನೇಕ್ ಕಾಣಿಸಿಕೊಂಡಿದೆ. ವಿಷಕಾರಿಯಲ್ಲದ ಈ ಹಾವಿನ ಪ್ರಭೇದ ತೆಲಂಗಾಣದಲ್ಲಿ ಎಲ್ಲೂ ಕಾಣ ಸಿಗುವುದಿಲ್ಲ,  ಸ್ಯಾನಿಟರಿ ಫಿಟ್ಟಿಂಗ್ ಉಪಕರಣಗಳ ಮಧ್ಯೆ ಸಿಲುಕಿಕೊಂಡು ಈ ಹಾವು ಟ್ರಕ್‌ನಲ್ಲಿ ಗುಜರಾತ್‌ನಿಂದ ಇಲ್ಲಿಯವರೆಗೆ ಬಂದಿದೆ. ನಮ್ಮ ಟೀಮ್‌ನ ತಜ್ಞರಾದ ಜಾನ್ ರಿನಾಲ್ಡಿ ಹಾಗೂ ಸೀನಾ ಭಾರತಿ ಇದನ್ನು ಬಹಳ ಜಾಗರೂಕವಾಗಿ ರಕ್ಷಣೆ ಮಾಡಿದ್ದಾರೆ. ಇವುಗಳು ಸಾಮಾನ್ಯವಾಗಿ ದೇಶದ ವಾಯುವ್ಯ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ. 

ಸದ್ಯದ ಮಟ್ಟಿಗೆ ಈ ಹಾವನ್ನು ರಕ್ಷಣೆ ಹಾಗೂ ಪುನರ್ವಸತಿಗಾಗಿ ಬೌರಂಪೇಟೆಯ ತಾತ್ಕಾಲಿಕ ರಕ್ಷಣಾ ತಾಣಕ್ಕೆ ಕಳುಹಿಸಲಾಗಿದೆ. ಕಪ್ಪು ತಲೆಯ ಈ ರಾಯಲ್ ಸ್ನೇಕ್‌ಗಳು (Black heded Royal snake) ತೆಲಂಗಾಣದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ, ಅವುಗಳು ಸಾಮಾನ್ಯವಾಗಿ  ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ದೇಶಗಳು, ಕೇಂದ್ರ ಏಷ್ಯಾದ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಪ್ರದೇಶಗಳಲ್ಲಿ ಇವು ನೈಸರ್ಗಿಕವಾಗಿ ಕಾಣ ಸಿಗದ ಕಾರಣ ಇದನ್ನು ನಾವು ಇದನ್ನು ನೆಹರೂ ಜೀವವಿಜ್ಞಾನ ಪಾರ್ಕ್‌ಗೆ ಕಳುಹಿಸುತ್ತೇವೆ. ಈ ಕಪ್ಪು ತಲೆಯ ರಾಯಲ್ ಸ್ನೇಕ್‌ಗಳು ಭಾರತದಲ್ಲಿ ಪತ್ತೆಯಾಗುವ ರಾಯಲ್ ಸ್ನೇಕ್ ಮೂರು ಪ್ರಬೇಧಗಳ ಪೈಕಿ ಒಂದಾಗಿದೆ.

 Wildlife: 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಿಸಿದ ಸ್ನೇಕ್‌ ಗಗನ್‌

 

Latest Videos
Follow Us:
Download App:
  • android
  • ios