Asianet Suvarna News Asianet Suvarna News

ಹರಿದುಬಂದು ನೆರವಿನ ಹಸ್ತ: ಭಾರತಕ್ಕೆ ವೈದ್ಯಕೀಯ ಉಪಕರಣ ರವಾನೆ!

ಹರಿದುಬಂದು ನೆರವಿನ ಹಸ್ತ| ವಿವಿಧ ರಾಷ್ಟ್ರಗಳಿಗೆ ಭಾರತಕ್ಕೆ ವೈದ್ಯಕೀಯ ಉಪಕರಣ ರವಾನೆ

European Union member countries rushing medical supplies to India pod
Author
Bangalore, First Published Apr 28, 2021, 9:35 AM IST

ನವದೆಹಲಿ(ಏ.28): ಕೊರೋನಾದ 2ನೇ ಅಲೆಯಿಂದ ಆರೋಗ್ಯದ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಬ್ರಿಟನ್‌, ಅಮೆರಿಕ, ಸೌದಿ ಅರೇಬಿಯಾ ಹಾಗೂ ದುಬೈ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಟ್ಟದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ತನ್ಮೂಲಕ ಜಗತ್ತಿನ ಇತರೆ ರಾಷ್ಟ್ರಗಳು ಭಾರತದ ಕೊರೋನಾ ಹೋರಾಟಕ್ಕೆ ಕೈ ಜೋಡಿಸುತ್ತಿವೆ.

ಬ್ರಿಟನ್‌: 495 ಆಮ್ಲಜನಕ ಸಾಧನ, 120 ವೆಂಟಿಲೇಟರ್‌, 20 ಮ್ಯಾನುವೆಲ್‌ ವೆಂಟಿಲೇಟರ್‌.

ಫ್ರಾನ್ಸ್‌: ಆಮ್ಲಜನಕ ಉತ್ಪಾದಿಸುವ 8 ಬೃಹತ್‌ ಘಟಕ, ದ್ರವರೂಪದ ಆಮ್ಲಜನಕದ 28 ಉಸಿರಾಟಕಾರಕಗಳು, 200 ಎಲೆಕ್ಟ್ರಿಕ್‌ ಸಿರಂಜ್‌ ಪಂಪ್‌

ಐರ್ಲೆಂಡ್‌: 700 ಆಮ್ಲಜನಕದ ಸಾಧನಗಳು

ಜರ್ಮನಿ: ಸಾಗಣೆ ಮಾಡಬಹುದಾದ ಆಮ್ಲಜನಕ ಉತ್ಪಾದಕ ಘಟಕಗಳು, 120 ವೆಂಟಿಲೇಟರ್‌ಗಳು, 8 ಕೋಟಿ ಕೆಎನ್‌-95 ಮಾಸ್ಕ್‌ಗಳು

ಆಸ್ಪ್ರೇಲಿಯಾ: 500 ವೆಂಟಿಲೇಟರ್‌ಗಳು, 10 ಲಕ್ಷ ಸರ್ಜಿಕಲ್‌ ಮಾಸ್ಕ್‌ಗಳು, 5 ಲಕ್ಷ ಪಿ-2 ಮತ್ತು ಎನ್‌-95 ಮಾಸ್ಕ್‌ಗಳು, 1 ಲಕ್ಷ ಕನ್ನಡಕಗಳು, 1 ಲಕ್ಷ ಜೊತೆ ಗ್ಲೋಸ್‌ಗಳು, 20 ಸಾವಿರ ಫೇಸ್‌ಶೀಲ್ಡ್‌ಗಳು.

ಸಿಂಗಾಪುರ: 500 ಬಿಐಪಿಎಪಿ ವ್ಯವಸ್ಥೆಗಳು, 250 ಆಮ್ಲಜನಕ ಸಾಧನಗಳು, 4 ಕ್ರಯೋಜನಿಕ್‌ ಆಮ್ಲಜನಕದ ಕಂಟೇನರ್‌ಗಳು ಹಾಗೂ ಇನ್ನಿತರ ವೈದ್ಯಕೀಯ ಸಲಕರಣೆಗಳು.

ಸೌದಿ ಅರೇಬಿಯಾ: 80 ಮೆಟ್ರಿಕ್‌ ಟನ್‌ನಷ್ಟುದ್ರವರೂಪದ ಆಮ್ಲಜನಕ ಪೂರೈಕೆ ಭರವಸೆ. ಅಲ್ಲದೆ, ಇನ್ನಿತರ ದೇಶಗಳಿಂದಲೂ ಭಾರತಕ್ಕೆ ಭಾರೀ ವೈದ್ಯಕೀಯ ನೆರವು ಲಭ್ಯವಾಗಿದೆ.

Follow Us:
Download App:
  • android
  • ios