ದೇವಸ್ಥಾನದ ಹೊರಗೆ ವಿವಾದಾತ್ಮಕ ಬ್ಯಾನರ್| ಹಿಂದೂಗಳಲ್ಲದವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ| ಉತ್ತರಾಖಂಡ್‌ ದೇವಸ್ಥಾನದ ಹೊರಗಿದ್ದ ಬ್ಯಾನರ್ ತೆರವು

ಡೆಹ್ರಾಡೂನ್(ಮಾ.22): ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ದೇವಸ್ಥಾನದ ಹೊರಭಾಗದಲ್ಲಿ ಹಾಕಲಾದ ಹಿಂದೂಗಳಲ್ಲದವರಿಗೆ ಇಲ್ಲಿ ಪ್ರವೇಶವಿಲ್ಲ ಎಂಬ ಬ್ಯಾನರ್ ಸದ್ಯ ಭಾರೀ ಸದ್ದು ಮಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು 'ಇದು ಹಿಂದೂಗಳ ಪವಿತ್ರ ಕ್ಷೇತ್ರ, ಇಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ' ಎಂದು ಈ ಬ್ಯಾನರ್‌ನಲ್ಲಿ ಮುದ್ರಿಸಲಾಗಿದೆ. ರಾಜ್ಯದ ಇನ್ನೂ ಹಲವಾರು ದೇವಸ್ಥಾನಗಳ ಹೊರಗೆ ಇಂತಹುದೇ ಬ್ಯಾನರ್‌ಗಳನ್ನು ಹಾಕಲಾಗಿದೆ ಎಂದು ಅನೇಕ ವರದಿಗಳು ಉಲ್ಲೇಖಿಸಿವೆ.

ಇನ್ನು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಲ್ಲಿ ವಿಚಾರಿಸಿದಾಗ, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. 

ಇನ್ನು ಹಿಂದೂ ಯುವ ವಾಹಿನಿ ಸಂಘಟನೆ ಹೆಸರಲ್ಲಿ ಹಾಕಲಾದ ಈ ಬ್ಯಾನರ್‌ನ್ನು ಸದ್ಯ ತೆರವುಗೊಳಿಸಲಾಗಿದ್ದು, ಬ್ಯಾನರ್‌ನಲ್ಲಿ ಹಾಕಲಾದ ಫೋನ್‌ ನಂಬರ್‌ ಮಾಲೀಕರ ವಿರುದ್ಧ ಸೆಕ್ಷನ್ 153Aರಡಿ ಕೇಸ್‌ ದಾಖಲಿಸಲಾಗಿದೆ.

ಇನ್ನು ಉತ್ತರಾಖಂಡ್‌ನ ಗಾಜಿಯಾಬಾದ್‌ನ ದೇವಸ್ಥಾನದಲ್ಲಿ ಮುಸ್ಲಿಂ ಬಾಲಕನೊಬ್ಬ ನೀತರು ಕುಡಿದನೆಂಬ ಕಾರಣಕ್ಕಾಗಿ ಆತನಿಗೆ ಥಳಿಸಿದ ಪ್ರಕರಣ ಸದ್ದು ಮಾಡಿದ ಒಂದು ವಾರದಲ್ಲಿ ಬೆಳಕಿಗೆ ಬಂದಿದೆ.