ನವದೆಹಲಿ(ಅ. 06)   ಕೇಂದ್ರ ಸರ್ಕಾರದ ಮೇಲೆ ರಾಹುಲ್ ಗಾಂಧಿ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಇಡೀ ದೇಶವನ್ನೇ ಬಡಿದು, ಹಿಂದಕ್ಕೆ ತಳ್ಳಲಾಗುತ್ತಿದೆ, ಇಂಥ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ನನ್ನನ್ನು ಹಿಂದಕ್ಕೆ ತಳ್ಳಿದ್ದು ವಿಶೇಷವೇನಲ್ಲ ಬಿಡಿ ಎಂದು ಕೇಂದ್ರ ದ ಮೇಲೆ ಚಾಟಿ ಬೀಸಿದ್ದಾರೆ.

ಪಂಜಾಬ್ ನಲ್ಲಿ ಮಾತನಾಡಿದ ಗಾಂಧಿ,  ಉತ್ತರ ಪ್ರದೇಶದ ಅತ್ಯಾಚಾರದ ಸಂತ್ರಸ್ತೆಯ ಮನೆಗೆ ಭೇಟಿ ನೀಡುವಾಗ ಪೊಲೀಸರು ನಡೆದುಕೊಂಡ ರೀತಿಯನ್ನು ಉಲ್ಲೇಖಿಸಿದರು..

ನಾವು ದೇಶದೊಂದಿಗೆ ಮುಂದೆ ನಡೆಯಬೇಕು ಹೊರತು ದೇಶಕ್ಕೆ ಮಾರಕವಾಗಿ ನಡೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಅಭಿಯಾನದ ಆರಂಭದದಲ್ಲಿ ಮಾತನಾಡಿ ಕೇಂದ್ರ ಸರ್ಕಾರ ನೀತಿಗಳನ್ನು ಟೀಕಿಸಿದ್ದಾರೆ.

ಚೀನಾ ನಮ್ಮ ಮೇಲೆ ನುಗ್ಗಿ ಬರುತ್ತಿರುವುದು ಯಾಕೆ? ಕಾರಣ ಹೇಳಿದ ರಾಹುಲ್

ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳನ್ನು ತಮಗೆ ಬೇಕಾದ ರೀತಿ ಬಳಸಿಕೊಳ್ಳುತ್ತಾರೆ. ಯಾವುದೇ ಮಾಧ್ಯಮ ಗೋಷ್ಠಿ ಮಾಡಿ ವಿವರ ನೀಡುವುದಿಲ್ಲ ಎಂದು ಆರೋಪಿಸಿದರು. 

ಚೀನಾ ನಮ್ಮ  ದೇಶದ 1,200 ಚದರ ಕಿ.ಮೀ ಭೂಮಿಯನ್ನು ಪಡೆದುಕೊಂಡಿದ್ದು ಹೇಗೇ?  ಮೋದಿ ತಮ್ಮ ಇಮೇಜ್ ಕಾಪಾಡಿಕೊಳ್ಳಲು ಮಾತ್ರ ಯತ್ನ ಮಾಡುತ್ತಾರೆ ಎಂಬುದು ಚೀನಾಕ್ಕೆ ಗೊತ್ತಿದ್ದೆ ಇಂಥ ಕೆಲಸ ಮಾಡಿತು ಎಂದಿದ್ದಾರೆ. ಯಾವುದೆ ಅಧಿಕಾರಿಯನ್ನು ಕೇಳಿ ನೋಡಿ ನಿಮಗೆ ಈ ಉತ್ತರವೇ ಸಿಗುತ್ತದೆ ಎಂದು ರಾಹುಲ್ ಹೇಳಿದ್ದರು.