Sanjay Raut to Narayan Rane : ಬೆದರಿಕೆ ಹಾಕೋದ್ರಲ್ಲಿ ನಾವು ನಿಮ್ಮಪ್ಪ, ಎಚ್ಚರಿಕೆಯಿಂದಿರಿ!

ನೀವು ಕೇಂದ್ರ ಸಚಿವರಾಗಿರಬಹುದು ಇದು ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಬೆದರಿಕೆ ಹಾಕ್ರೋದಲ್ಲಿ ನಾವು ನಿಮ್ಮಪ್ಪ
ಶಿವಸೇನೆ ಸಂಸದ ಸಂಜಯ್ ರಾವತ್ ಹಾಗೂ ಕೇಂದ್ರ ಸಚಿವ ನಾರಾಯಣ್ ರಾಣೆ ನಡುವೆ ವಾಕ್ಸಮರ

Enforcement Directorate notice We Are Your Baap says shiv Sena MP Sanjay Raut to Union Minister Narayan Rane san

ಮುಂಬೈ (ಫೆ. 19): ಠಾಕ್ರೆ ಕುಟುಂಬ (Thackeray family) ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ (Maharashtra government) "ಬೆದರಿಕೆ" ಒಡ್ಡಿದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ನಾರಾಯಣ್ ರಾಣೆಗೆ (Union Minister Narayan Rane) ಶಿವಸೇನಾ ಸಂಸದ ಸಂಜಯ್ ರಾವತ್ (Shiv Sena MP Sanjay Raut)ತಿರುಗೇಟು ನೀಡಿದ್ದಾರೆ. ನಾರಾಯಣ್ ರಾಣೆಗೆ ನೀಡಿದ ಎಚ್ಚರಿಕೆಯಲ್ಲಿ ಸಂಜಯ್ ರಾವತ್, "ಠಾಕ್ರೆ ಕುಟುಂಬಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕಾಗಿ ಬೆದರಿಕೆ ಒಡ್ಡುವುದನ್ನು ನಿಲ್ಲಿಸಿ' ಎಂದು ಹೇಳಿದ್ದಲ್ಲದೆ, ಮುಂಬೈಯಲ್ಲಿರುವ ಸುಲಿಗೆ ವ್ಯವಸ್ಥೆಯನ್ನು ಬಹಿರಂಗಪಡಿಸುವ ಸೂಕ್ಷ್ಮ ಎಚ್ಚರಿಕೆಯನ್ನೂ ಈ ವೇಳೆ ನೀಡಿದ್ದಾರೆ.
ನೀವು ಕೇಂದ್ರದ ಸಚಿವರಾಗಿರಬಹುದು. ಆದರೆ, ಇದು ಮಹಾರಾಷ್ಟ್ರ. ಇದನ್ನ ಮರೆಯೋಕೆ ಹೋಗ್ಬೇಡಿ. ಇಲ್ಲಿ ನಾವು ನಿಮ್ಮಪ್ಪ. ನಾನು ಹೇಳುತ್ತಿರುವ ಅರ್ಥ ಏನೆಂಬುದು ನಿಮಗೆ ಈಗಾಗಲೇ ತಿಳಿದಿರಬೇಕು' ಎಂದು ಸಂಜಯ್ ರೌತ್ ಮುಂಬೈಯಲ್ಲಿ ಹೇಳಿದ್ದಾರೆ. 

ಶುಕ್ರವಾರ ಮುಂಬೈನಲ್ಲಿ ಮಾತನಾಡಿದ ಕೇಂದ್ರ ಸಚಿವ ನಾರಾಯಣ್ ರಾಣೆ, ಮಾತೋಶ್ರೀಯಲ್ಲಿರುವ (Matoshree) ನಾಲ್ವರಿಗೆ ಈಗಾಗಲೇ ಜಾರಿ ನಿರ್ದೇಶನಾಲಯದಲ್ಲಿ(Enforcement Directorate) ನೋಟಿಸ್ ರೆಡಿಯಾಗಿದೆ ಎಂದು ಹೇಳಿದ್ದರು. ಮಾತೋಶ್ರೀ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸವಾಗಿದ್ದು. ಸಬರ್ಬನ್ ಬಾಂದ್ರಾದಲ್ಲಿದೆ. "ನಮ್ಮ ಜಾತಕ ಅವರ ಕೈಯಲ್ಲಿದೆ ಎಂದು ನಾರಾಯಣ್ ರಾಣೆ ಬೆದರಿಸುತ್ತಿದ್ದಾರೆ. ಅವರ ಜಾತಕವೂ ನಮ್ಮ ಕೈಯಲ್ಲಿದೆ ಎನ್ನುವುದನ್ನು ಅವರಿಗೆ ತಿಳಿಸಲು ಬಯಸುತ್ತೇನೆ' ಎಂದು ಸಂಜಯ್ ರಾವತ್ ಹೇಳಿದ್ದಾರೆ.

ರಾವತ್ ಅವರು, ಇತ್ತೀಚೆಗೆ ಶಿವಸೇನಾ ನಾಯಕರು ಮತ್ತು ರಾಜ್ಯದಲ್ಲಿ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ವಿವಾದಾತ್ಮಕ ಬಿಜೆಪಿ ಸಂಸದ ಕಿರೀಟ್ ಸೋಮಯ್ಯ (BJP MP Kirit Somaiya ) ಅವರ ವಿರುದ್ಧವೂ ಕಿಡಿಕಾರಿದರು. ರಾವುತ್ ಮತ್ತು  ಸೋಮಯ್ಯ ಇಬ್ಬರೂ ಪರಸ್ಪರರ ಪಕ್ಷಗಳ ವಿರುದ್ಧ ಭ್ರಷ್ಟಾಚಾರ ಮತ್ತು ಸುಲಿಗೆಯ ಪುರಾವೆಗಳನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳುವ ಮೂಲಕ ಬಿಜೆಪಿ-ಶಿವಸೇನೆ ನಡುವಿನ ಕೆಸರೆರಚಾಟ ತೀವ್ರಗೊಂಡಿದೆ.

Karnataka Politics ಈಶ್ವರಪ್ಪಗೆ ಸೆಟ್ಲ್‌ಮೆಂಟ್ ಮಾಡ್ತೀನಿ, ಡಿಕೆಶಿ ಸ್ಫೋಟಕ ಹೇಳಿಕೆ
ಕಿರೀಟ್ ಸೋಮಯ್ಯ ಅವರೇ ನಮ್ಮ ಹಗರಣಗಳ ದಾಖಲೆಗಳನ್ನು ನೀವು ಕೇಂದ್ರದ ಏಜೆನ್ಸಿಗಳಿಗೆ ನೀಡಿ. ನಾನು ನಿಮ್ಮ ಹಗರಣಗಳ ದಾಖಲೆ ನೀಡುತ್ತೇನೆ. ಬೆದರಿಕೆ ಹಾಕಬೇಡಿ. ನಿಮ್ಮ ಬೆದರಿಕೆಗೆ ನಾವು ಹೆದರೋದಿಲ್ಲ' ಎಂದು ರಾವತ್ ಹೇಳಿದ್ದಾರೆ. ಶಿವಸೇನೆಯ ಅಗ್ರ ನಾಯಕರ ಅವ್ಯವಹಾರದ ಆರೋಪಗಳ ಬಗ್ಗೆ ನನ್ನಲ್ಲಿ ದಾಖಲೆಗಳಿದ್ದು, ಈ ಎಲ್ಲಾ ದಾಖಲೆಗಳನ್ನು ನಾನು ಕೇಂದ್ರದ ಏಜೆನ್ಸಿಗಳಿಗೆ ನೀಡಲಿದ್ದೇನೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸಂಜಯ್ ರಾವತ್, ಕಿರೀಟ್ ಸೋಮಯ್ಯ ಅವರು 300 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದ್ದಾರೆ ಅದಲ್ಲದೆ, ಅಮಿತ್ ಷಾ ಹೆಸರು ಹೇಳಿ ಸುಲಿಗೆಯನ್ನೂ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪೊವಾಯ್‌ನ ಪೆರು ಬಾಗ್‌ನಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯ ಮೂಲಕ ಸೋಮಯ್ಯ ₹ 300 ಕೋಟಿಗೂ ಹೆಚ್ಚು ಸುಲಿಗೆ ಮಾಡಿದ್ದಾರೆ ಎಂದು ರಾವತ್ ಗುರುವಾರ ಹೇಳಿಕೊಂಡಿದ್ದರು. ಇಂದು, ಅವರು ಪಾಲ್ಘರ್‌ನಲ್ಲಿ ಮತ್ತೊಂದು ಯೋಜನೆಯನ್ನು ತೋರಿಸಿದ್ದಾರೆ.

Punjab Election: ಖಲಿಸ್ತಾನದ ಪ್ರಧಾನಿ ಆಗುವೆ ಎಂದಿದ್ದರಾ ಕೇಜ್ರಿವಾಲ್..?
"ಪಾಲ್ಘರ್‌ನಲ್ಲಿ ಅವರ ₹ 260 ಕೋಟಿ ಮೌಲ್ಯದ ಯೋಜನೆಯ ಕೆಲಸ ನಡೆಯುತ್ತಿದೆ. ಅದು ಅವರ ಮಗನ ಹೆಸರಿನಲ್ಲಿದೆ, ಅವರ ಪತ್ನಿ ನಿರ್ದೇಶಕರಾಗಿದ್ದಾರೆ. ಅವರು ಹಣವನ್ನು ಹೇಗೆ ಪಡೆದರು ಎಂದು ತನಿಖೆ ಮಾಡಬೇಕು" ಎಂದು ಶಿವಸೇನಾ ಸಂಸದ ಆರೋಪಿಸಿದ್ದರು. ಪಾಲ್ಘರ್ ಆರೋಪಕ್ಕೆ ಸಂಬಂಧಿಸಿದಂತೆ ಕಿರೀಟ್ ಸೋಮಯ್ಯಗೆ,  ರಾವತ್  ಮೂರು ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದರು. ಅವರು ಟ್ವೀಟ್‌ನಲ್ಲಿ ಪ್ರಧಾನಿ ಕಚೇರಿಯನ್ನೂ ಟ್ಯಾಗ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios