PFI ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಂಡ ಇಡಿ ಅಕ್ರಮ ಹಣ ವರ್ಗಾವಣೆ, ಬ್ಯಾಂಕ್ ಖಾತೆ ಸ್ಥಗಿತ ಉಗ್ರ ಚಟುವಟಿಕೆಗಳಿಗೆ ಹಣ ಬಳಸಿದ ಆರೋಪ

ನವದೆಹಲಿ(ಜೂ.01): ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿರುವ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಗೆ ಇಡಿ ಮತ್ತೊಂದು ಶಾಕ್ ನೀಡಿದೆ.ಅಕ್ರಮ ಹಣವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಇದೀಗ PFI ಸಂಘಟನೆಯ ಬ್ಯಾಂಕ್ ಖಾತೆಯನ್ನು ಇಡಿ ಸ್ಥಗಿತಗೊಳಿಸಿದೆ. 

ರಾಜ್ಯ ಪೊಲೀಸರು ಹಾಗೂ ಎನ್ಐ ದಾಖಲಿಸಿದ ಪ್ರಕರಣಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದೆ. ಈ ವೇಳೆ ಪಿಎಫ್ಐ ಸಂಘಟನೆಯ ಮನಿ ಲಾಂಡರಿಂಗ್ ಪತ್ತೆಯಾಗಿದೆ. ಈ ಕುರಿತು ಸಂಘಟನೆ ನಾಯಕರನ್ನು ವಿಚಾರಣೆಗೊಳಪಡಿಸಿದ್ದ ಇಡಿ ಅಧಿಕಾರಿಗಳು ಇದೀಗ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದೆ.

ಪಿಎಫ್‌ಐ ರಾರ‍ಯಲಿಯಲ್ಲಿ ಹಿಂದೂ ವಿರೋಧಿ ಘೋಷಣೆ: ಬಾಲಕನ ತಂದೆ ಸೆರೆ!

ಪಿಎಫ್ಐ ಸಂಘಟನೆ ಮತ್ತು ರಿಹ್ಯಾಬ್ ಇಂಡಿಯಾ ಫೌಂಡೇಶನ್ ಖಾತೆಯಲ್ಲಿ ಒಟ್ಟು 68,62,081 ರೂಪಾಯಿ ಇದೆ. ಈ ಖಾತೆಯನ್ನು ಫ್ರೀಜ್ ಮಾಡಲಾಗಿದೆ ಎಂದು ಇಡಿ ಹೇಳಿದೆ.

ಕೇರಳದಲ್ಲಿ ಪಿಎಫ್‌ಐ ಮೇಲೆ ಇ.ಡಿ ದಾಳಿ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ)ಗೆ ಸಂಬಂಧಿಸಿದ ಕೇರಳದ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿತ್ತು. 2021ರ ಡಿಸೆಂಬರ್ ತಿಂಗಳಲ್ಲಿ ಇಡಿ ದಾಳಿ ನಡೆಸಿತ್ತು.

ಎರ್ನಾಕುಲಂ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನಡೆದ ಈ ದಾಳಿ ವೇಳೆ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಏನೆಲ್ಲಾ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವೇಳೆ ಇ.ಡಿ ಅಧಿಕಾರಿಗಳಿಗೆ ಕೇಂದ್ರೀಯ ಪ್ಯಾರಾಮಿಟರಿ ಸಿಬ್ಬಂದಿಯ ಭದ್ರತೆ ಒದಗಿಸಲಾಗಿತ್ತು.

ಪಿಎಫ್ಐ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲು ಆಗ್ರಹಿಸಿದ ಸೂಫಿ ಇಸ್ಲಾಮಿಕ್ ಬೋರ್ಡ್!

ಪಿಎಫ್‌ಐಗೆ ಶೀಘ್ರ ಕೇಂದ್ರ ನಿಷೇಧ?
ಇತ್ತೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ರಾಮ ನವಮಿ ವೇಳೆ ನಡೆದ ಹಿಂಸಾಚಾರದಲ್ಲಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕೈವಾಡದ ಶಂಕೆ ವ್ಯಕ್ತವಾಗಿರುವಾಗಲೇ, ದೇಶವ್ಯಾಪಿ ಸಂಘಟನೆಯನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮುಂದಿನ ವಾರವೇ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಕೆಲವು ರಾಜ್ಯಗಳಲ್ಲಿ ಈಗಾಗಲೇ ಪಿಎಫ್‌ಐಗೆ ನಿಷೇಧ ಹೇರಲಾಗಿದೆಯಾದರೂ, ದೇಶವ್ಯಾಪಿ ನಿಷೇಧ ಜಾರಿಯಾದರೆ ಸಂಘಟನೆಯ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ.ಇತ್ತೀಚೆಗೆ ರಾಮನವಮಿ ವೇಳೆ ಗೋವಾ, ಗುಜರಾತ್‌, ರಾಜಸ್ಥಾನ್‌, ಮಧ್ಯಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಪಿಎಫ್‌ಐ ಕೈವಾಡವಿತ್ತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಆರೋಪಿಸಿದ್ದರು.

‘ಇನ್ನು ಕಾಂಗ್ರೆಸ್‌ ಆಡಳಿತದ ರಾಜಸ್ಥಾನದ ಕರೌಲಿಯಲ್ಲಿ ನಡೆದ ಕೋಮು ಹಿಂಸಾಚಾರದಲ್ಲೂ ಪಿಎಫ್‌ಐ ಕೈವಾಡವಿದೆ. ಘಟನಾ ಸ್ಥಳಕ್ಕೆ ತೆರಳುವ ವೇಳೆ ತಮ್ಮ ಮೇಲೆ ಕಲ್ಲು ತೂರಿದ ಘಟನೆಯ ಹಿಂದೆಯೇ ಇದೇ ಸಂಘಟನೆ ಪಾತ್ರವಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆರೋಪಿಸಿದ್ದರು.