ಪೆಟ್ರೋಲ್‌ ದರ ಏರಿಕೆಯಿಂದ ಕಾಂಗ್ರೆಸ್‌ ಪಕ್ಷದ ಬೂಟಾಟಿಕೆ ಬಯಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಟೀಕಿಸಿದ್ದಾರೆ.

ನವದೆಹಲಿ (ಜೂ.17): ಪೆಟ್ರೋಲ್‌ ದರ ಏರಿಕೆಯಿಂದ ಕಾಂಗ್ರೆಸ್‌ ಪಕ್ಷದ ಬೂಟಾಟಿಕೆ ಬಯಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಟೀಕಿಸಿದ್ದಾರೆ. ಭಾನುವಾರ ಟ್ವೀಟ್‌ ಮಾಡಿರುವ ಅವರು, ‘ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 8500 ರು, ವರ್ಗಾಯಿಸುವ ಭರವಸೆಯನ್ನು ಈಡೇರಿಸದ ಕಾಂಗ್ರೆಸ್‌, ತನ್ನ ಆಡಳಿತದ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ದರವನ್ನು 3 ರು. ಹೆಚ್ಚಿಸಿ ಕರ್ನಾಟಕದ ಜನರಿಗೆ ಹೊರೆ ಮಾಡಿದೆ ಇಂಧನ ಬೆಲೆಗಳು ಎಲ್ಲಾ ಸರಕುಗಳ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಕರ್ನಾಟಕದ ಜನರು ಆಹಾರ ಪದಾರ್ಥಗಳು, ಬಟ್ಟೆ, ಔಷಧಿಗಳು ಮತ್ತು ಮೂಲಭೂತ ಅಗತ್ಯಗಳ ಎಲ್ಲಾ ವಸ್ತುಗಳಿಗೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ’ ಎಂದಿದ್ದಾರೆ.

‘ಚುನಾವಣೆಗಳು ಮುಗಿದ ನಂತರ ಇಂತಹ ನಿರ್ಧಾರವು ಬಿಜೆಪಿ ಆಡಳಿತದ ರಾಜ್ಯಗಳಿಗೆ ಹೋಲಿಸಿದರೆ ಬೆಲೆ ಏರಿಕೆ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ. ಬಿಜೆಪಿ ಆಡಳಿತದ ಗುಜರಾತ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ವ್ಯಾಟ್‌ 8ರಿಂದ 12 ರು. ಹೆಚ್ಚಿದೆ. ಬಿಜೆಪಿ ಆಳ್ವಿಕೆಯ ಅರುಣಾಚಲಕ್ಕಿಂತ ಕರ್ನಾಟಕದಲ್ಲಿ ಪೆಟ್ರೋಲ್‌ ದರ 12 ರು. ಹಾಗೂ ಡೀಸೆಲ್‌ ದರ 8.5 ರು. ಹೆಚ್ಚಿದೆ’ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಏರಿಕೆ ಮಾಡಿದೆ. ಗರಿಷ್ಠ 3.50 ರೂಪಾಯಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಸದ್ಯದ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಆದಾಯ ಕ್ರೋಡಿಕರಿಸಲು ರಾಜ್ಯ ಸರ್ಕಾರ ಹಲವು ಮೂಲಗಳನ್ನು ಹುಡುಕುತ್ತಿದೆ. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನೇರವಾಗಿ ಜನಸಾಮಾನ್ಯರಿಗೆ ತಟ್ಟಲಿದೆ.

ದರ್ಶನ್ ಬಂಧನ ಬೆನ್ನಲ್ಲೇ ಖ್ಯಾತ ಸ್ಯಾಂಡಲ್‌ವುಡ್‌ನ ಸ್ಟಾರ್ ಹಾಸ್ಯ ನಟ ಚಿಕ್ಕಣ್ಣನಿಗೆ ಢವ ಢವ ಶುರು!

ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಆಸಕ್ತಿ ವ್ಯಕ್ತಪಡಿಸಿತ್ತು. ಈ ಕುರಿತು ನೂತನ ಪೆಟ್ರೋಲ್ ಹಾಗೂ ನೈಸರ್ಗಿಕ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. 2020ರಲ್ಲಿ ಕೇಂದ್ರ ಸರ್ಕಾರ ಈ ಪ್ರಸ್ತಾಪ ಇಡಲಾಗಿತ್ತು. ಆದರೆ ಬಹುತೇಕ ರಾಜ್ಯಗಳು ಈ ಪ್ರಸ್ತಾಪ ತಿರಸ್ಕರಿಸಿತ್ತು. ಕಾರಣ ಹಲವು ರಾಜ್ಯಗಳು ಪೆಟ್ರೋಲ್ ಡೀಸೆಲ್ ಮೇಲಿನ ರಾಜ್ಯ ತೆರಿಗೆಯಿಂದಲೇ ಆದಾಯ ಕ್ರೋಡಿಕರಿಸುತ್ತಿರುವ ಕಾರಣ ಈ ಪ್ರಸ್ತಾಪಕ್ಕೆ ಮನ್ನಣೆ ಸಿಗಲಿಲ್ಲ ಎಂದು ಪುರಿ ಹೇಳಿದ್ದರು.