ದುಬೈನ ಎಮಿರೇಟ್ಸ್ ಏರ್ಲೈನ್ಸ್‌ನ ಏರ್ ಹೋಸ್ಟೆಸ್ ಆಗಿರುವ ಯುವತಿ ತನ್ನ ಅಜ್ಜಿಯ ಹುಟ್ಟುಹಬ್ಬಕ್ಕೆ ಊರಿಗೆ ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ.

ತಿರುವನಂತಪುರ (ಜ.19): ಸಾಮಾಜಿಕ ಜಾಲತಾಣದಲ್ಲಿ ಒಂದು ಹೃದಯಸ್ಪರ್ಶಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಅದರಲ್ಲಿ ಸಾಮಾನ್ಯ ಮನೆಯಲ್ಲಿ ಬೆಳೆದ ಬಡತನದ ಹುಡುಗಿಯೊಬ್ಬಳು ವಿಶ್ವದ ಅತ್ಯಂತ ದುಬಾರಿ ಏರ್‌ಲೈನ್ಸ್ ಆಗಿರುವ ದುಬೈ ಎಮಿರೇಟ್ಸ್‌ನ ಏರ್ ಹೋಸ್ಟಸ್ ಆಗಿದ್ದಾಳೆ. ಇದೀಗ ತನ್ನ ಜನ್ಮಭೂಮಿಯನ್ನು ಮರೆಯದೇ ಅಜ್ಜಿಯ ಮನೆಗೆ ಬಂದು ಸರ್ಪೈಸ್ ಕೊಟ್ಟಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಎಷ್ಟೋ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು, ನಾವು ನೀವೆಲ್ಲರೂ ದುಡಿಮೆಗೆ ಎಷ್ಟೇ ದೂರ ಹೋದರೂ ಹೃದಯಕ್ಕೆ ಹತ್ತಿರುವಾಗಿರುವ ಪ್ರೀತಿಪಾತ್ರರು ತಮ್ಮ ಸ್ವಂತ ಸ್ಥಳದಲ್ಲಿಯೇ ಇರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರ ಸಂತೋಷಕ್ಕಾಗಿ ಸರ್ಪ್ರೈಸ್ ಕೊಡೋರು ಕೂಡ ಇರುತ್ತಾರೆ. ಅಂಥದ್ದೇ ಒಂದು ಸರ್ಪ್ರೈಸ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗುತ್ತಿದೆ. ಅದರಲ್ಲಿಯೂ ಒಂದು ಹಂತಕ್ಕೆ ನಾವು ಬೆಳೆದು ತಮ್ಮನ್ನು ಕಷ್ಟಪಟ್ಟು ಬೆಳೆಸಿದ ಹಿರಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದು ಮಾತ್ರ ಜೀವನದ ಅತ್ಯಂತ ಸಂತಸದ ಮತ್ತು ಸಾರ್ಥಕ ಕ್ಷಣಗಳಲ್ಲಿ ಒಂದು ಎಂದೇ ಹೇಳಬಹುದು.

ದುಬೈನ ಎಮಿರೇಟ್ಸ್ ಏರ್ಲೈನ್ಸ್‌ನ ಏರ್ ಹೋಸ್ಟೆಸ್ ಆಗಿರುವ ಮಲಯಾಳಿ ಯುವತಿ ತನ್ನ ಅಜ್ಜಿಯ ಹುಟ್ಟುಹಬ್ಬಕ್ಕೆ ಊರಿಗೆ ಬಂದು ಸರ್ಪ್ರೈಸ್ ಕೊಟ್ಟಿದ್ದು ಈ ವಿಡಿಯೋದಲ್ಲಿದೆ. ಜನವರಿ 6ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಈ ವಿಡಿಯೋ ಇದೀಗ ಭಾರೀ ದೊಡ್ಡ ಮಟ್ಟದಲ್ಲಿ ವೈರಲ್ ಆಗ್ತಿದೆ. ದುಬೈ ಎಮಿರೇಟ್ಸ್ ಯೂನಿಫಾರ್ಮ್‌ನಲ್ಲಿ ಬಂದ ಈ ಯುವತಿ ತನ್ನ ಅಜ್ಜಿಯ ಹುಟ್ಟುಹಬ್ಬ ಅಂತ ಹೇಳ್ತಾ ಮನೆ ಮುಂದೆ ನಿಂತಿದ್ದಾಳೆ. ಒಳಗೆ ಹೋದಾಗ ಅಜ್ಜಿ ತೋರಿಸಿದ ಸಂತೋಷ, ಪ್ರೀತಿ ಎಲ್ಲಾ ವಿಡಿಯೋದಲ್ಲಿದೆ.

ಇದನ್ನೂ ಓದಿ: ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾಗೆ ಉಂಟು ಮೈಸೂರಿನ ನಂಟು!

View post on Instagram

ಎಮಿರೇಟ್ಸ್ ಏರ್ಲೈನ್ಸ್‌ನ ಏರ್ ಹೋಸ್ಟೆಸ್ ಆಗಿರೋ ಸೈನಬ್ ರೋಶ್ನಾ ಈ ವಿಡಿಯೋ ಹಾಕಿದ್ದು, ಈಗಾಗಲೇ ಸಾಕಷ್ಟು ಜನ ನೋಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸೈನಬ್‌ಗೆ 81,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಕಳೆದ ವರ್ಷ ಅಜ್ಜಿಯ ಹುಟ್ಟುಹಬ್ಬಕ್ಕೆ ಯೂನಿಫಾರ್ಮ್ ಹಾಕೊಂಡು ವಿಡಿಯೋ ಕಾಲ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದಳಂತೆ. ಆಗ ಮೊದಲ ಬಾರಿ ಯೂನಿಫಾರ್ಮ್‌ನಲ್ಲಿ ನೋಡಿದಾಗ ಅಜ್ಜಿ ತೋರಿಸಿದ ಸಂತೋಷವನ್ನೂ ಸೈನಬ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಳು. ಇದೀಗ ಅಜ್ಜಿಯ ಹುಟ್ಟು ಹಬ್ಬಕ್ಕೆ ಅದೇ ಡ್ರೆಸ್ ಧರಿಸಿಕೊಂಡು ಬಂದು ಅಜ್ಜಿಗೆ ಶುಭಾಶಯ ಕೋರಿರುವುದು ಭಾರೀ ವೂರಲ್ ಆಗುತ್ತಿದೆ.