ಭುವನೇಶ್ವರ[ಜ.07]: ಸೋಶಿಯಲ್ ಮೀಡಿಯಾದಲ್ಲಿ ಆನೆಯೊಂದರ ವಿಡಿಯೋ ವೈರಲ್ ಆಗುತ್ತಿದ್ದು, ಇದು ಜನರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋದಲ್ಲಿ ಮಹಿಳಾ ಫೋಟೋಗ್ರಾಫರ್ ಒಬ್ಬರು ಆನೆಯ ಫೋಟೋ ಸೆರೆ ಹಿಡಿಯಲು ಅದೆಷ್ಟು ಹತ್ತಿರ ಹೋಗಿದ್ದರೆಂದರೆ, ಇದರಿಂದ ಆಕೆಯ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇತ್ತು. ಆದರೆ ಆನೆ ಬಹಳ ಬುದ್ಧಿವಂತಿಗೆ ಪ್ರದರ್ಶಿಸಿದೆ. ಹೀಗಾಗಿ ಫೋಟೋಗ್ರಾಫರ್ ತಪ್ಪೇನು ಎಂದು ತೋರಿಸಿಕೊಟ್ಟಿದೆ. ಸದ್ಯ ಒಡಿಶಾದ ಅರಣ್ಯಾಧಿಕಾರಿ, ಸುಸಂತ ನಂದ ಟ್ವೀಟ್ ಮಾಡಿದ್ದಾರೆ.

ವಿಡಿಯೋ ಶೇರ್ ಮಾಡಿರುವ ಅರಣ್ಯಾಧಿಕಾರಿ 'ಈ ಆನೆ ಬಹಳ ಶಾಂತ ಸ್ವಭಾವದ್ದು. ಹೀಗಾಗಿ ಬಹಳ ಸಭ್ಯತೆಯಿಂದ ಅದು ಮಹಿಳಾ ಫೋಟೋಗ್ರಾಫರ್‌ಗೆ ಎಲ್ಲಿ ನಿಲ್ಲಬೇಕು ಎಂದು ತೋರಿಸಿಕೊಟ್ಟಿದೆ. ಆದರೆ ಎಲ್ಲರೂ ಇಷ್ಟು ಅದೃಷ್ಟವಂತರಾಗಿರುವುದಿಲ್ಲ. ವನ್ಯಜೀವಿಗಳಿಂದ ಅಂತರ ಕಾಪಾಡಿಕೊಳ್ಳಿ' ಎಂದಿದ್ದಾರೆ.

ಏನಿದೆ ವಿಡಿಯೋದಲ್ಲಿ?

ಮಹಿಳೆ ಕೈಯ್ಯಲ್ಲಿ ಕ್ಯಾಮೆರಾ ಹಿಡಿದು ನಿಂತಿರುತ್ತಾರೆ. ಹೀಗಿರುವಾಗ ಆನೆ ಅವರ ಬಳಿ ಬರಲಾರಂಭಿಸುತ್ತದೆ. ಆದರೆ ಹತ್ತಿರ ಬಂದ ಆನೆ ನೋಡ ನೋಡುತ್ತಿದ್ದಂತೆ ಮಹಿಳೆಯನ್ನು ತಳ್ಳುತ್ತದೆ. ಸದ್ಯ ಸೋಶಿಯಲ್ ಮೀಡಿದಯಾದಲ್ಲಿ ಆ ಛಾಯಾಗ್ರಾಹಕಿಯನ್ನು ನೆಟ್ಟಿಗರು ಅದೃಷ್ಟವಂತೆ ಎಂದು ಬಣ್ಣಿಸುತ್ತಿದ್ದಾರೆ.