The Elephant Whisperers ಚಿತ್ರದ ಬೊಮ್ಮನ್ - ಬೆಳ್ಳಿ ದಂಪತಿ ಸಾಕಿದ್ದ 4 ತಿಂಗಳ ಆನೆ ಮರಿ ಅನಾರೋಗ್ಯಕ್ಕೆ ಬಲಿ

ಮಾರ್ಚ್ 9 ರಂದು ತಮಿಳುನಾಡಿನ ಧರ್ಮಪುರಿಯಲ್ಲಿ ಬಾವಿಯೊಳಗೆ ಆನೆ ಮರಿ ಪತ್ತೆಯಾಗಿತ್ತು. ಅರಣ್ಯ ಪಶುವೈದ್ಯರು ಮತ್ತು ಬೊಮ್ಮನ್ ಅವರು ಅಲ್ಲಿಗೆ ತೆರಳಿ ಒಂದು ವಾರ ಕಾಲ ಆನೆ ಮರಿಯನ್ನು ಆರೈಕೆ ಮಾಡಿದ್ದರು. ಬಳಿಕ ಅವರು ಅದನ್ನು ಅದರ ಹಿಂಡಿಗೆ ಹಿಂದಿರುಗಿಸಲು ಪ್ರಯತ್ನಿಸಿದರೂ, ಅದು ವ್ಯರ್ಥವಾಯಿತು. ನಂತರ ಆನೆ ಮರಿಯನ್ನು ನೋಡಿಕೊಳ್ಳಲು ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.

elephant calf cared for by bomman and bellie dies in tamil nadu ash

ಉದಗಮಂಡಲಂ( ಏಪ್ರಿಲ್ 1, 2023): ಇತ್ತೀಚೆಗೆ ಆಸ್ಕರ್‌ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ದಿ ಎಲಿಫೆಂಟ್‌ ವಿಸ್ಪರರ್ಸ್‌ ನಲ್ಲಿ ಕಾಣಿಸಿಕೊಂಡಿರುವ ಬೊಮ್ಮನ್‌ ಮತ್ತು ಬೆಳ್ಳಿ ದಂಪತಿ ಬಗ್ಗೆ ನೀವು ಕೇಳಿರಬಹುದು. ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಶುಕ್ರವಾರ ಈ ದಂಪತಿ ಸಾಕಿದ್ದ ಆನೆ ಮರಿಯೊಂದು ಮೃತಪಟ್ಟಿದೆ. 4 ತಿಂಗಳ ವಯಸ್ಸಿನ ಆನೆ ಮರಿ ಲ್ಯಾಕ್ಟೋಜೆನ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಮತ್ತು ತನ್ನ ಹಿಂಡಿನಿಂದ ಬೇರ್ಪಟ್ಟ ಒತ್ತಡದ ಕಾರಣದಿಂದಾಗಿ ಮೃತಪಟ್ಟಿದೆ. 

ಮಾರ್ಚ್ 9 ರಂದು ತಮಿಳುನಾಡಿನ ಧರ್ಮಪುರಿಯಲ್ಲಿ ಬಾವಿಯೊಳಗೆ ಆನೆ ಮರಿ ಪತ್ತೆಯಾಗಿತ್ತು. ಅರಣ್ಯ ಪಶುವೈದ್ಯರು ಮತ್ತು ಬೊಮ್ಮನ್ ಅವರು ಅಲ್ಲಿಗೆ ತೆರಳಿ ಒಂದು ವಾರ ಕಾಲ ಆನೆ ಮರಿಯನ್ನು ಆರೈಕೆ ಮಾಡಿದ್ದರು. ಬಳಿಕ ಅವರು ಅದನ್ನು ಅದರ ಹಿಂಡಿಗೆ ಹಿಂದಿರುಗಿಸಲು ಪ್ರಯತ್ನಿಸಿದರೂ, ಅದು ವ್ಯರ್ಥವಾಯಿತು. ನಂತರ ಆನೆ ಮರಿಯನ್ನು ನೋಡಿಕೊಳ್ಳಲು ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನು ಓದಿ: ಆಸ್ಕರ್‌ ಹಿಡಿದು ಪೋಸ್‌ ಕೊಟ್ಟ The Elephant Whisperers ಬೊಮ್ಮನ್‌, ಬೆಳ್ಳಿ: ಕಾರ್ತಿಕಿಗೆ ಭೇಷ್‌ ಎಂದ ನೆಟ್ಟಿಗರು
.
ಗುರುವಾರ ಮಧ್ಯಾಹ್ನದವರೆಗೆ ಆನೆ ಮರಿಯ ಆರೋಗ್ಯ ಸಾಮಾನ್ಯವಾಗಿತ್ತು ಎಂದು ಎಂಟಿಆರ್ ಕ್ಷೇತ್ರ ನಿರ್ದೇಶಕ ಡಿ.ವೆಂಕಟೇಶ್ ತಿಳಿಸಿದ್ದಾರೆ. ಆದರೆ ಸಂಜೆಯ ಹೊತ್ತಿಗೆ ಬೇಧಿ ಉಂಟಾಗಿದ್ದು, ರಾತ್ರಿಯವರೆಗೂ ಹಾಗೇ ಇತ್ತು. "ಪಶುವೈದ್ಯರ ತಂಡವು ಆನೆ ಮರಿಗೆ ಚಿಕಿತ್ಸೆ ನೀಡಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದೆ" ಎಂದು ವೆಂಕಟೇಶ್ ತಿಳಿಸಿದರು.

ತನ್ನ ಹಿಂಡಿನಿಂದ ಬೇರ್ಪಡುವಿಕೆ, ಹೊಸ ಪರಿಸರ ಮತ್ತು ಕೃತಕ ಹಾಲಿನ ಕಾರಣದಿಂದಾಗಿ ಜೀರ್ಣ ಸಾಮರ್ಥ್ಯದಲ್ಲಿ ತೊಂದರೆಯುಂಟಾಗಿ ಆನೆ ಮರಿ ಜೀರ್ಣಕಾರಿ ಸಾಮರ್ಥ್ಯದ ರಾಜಿಯು ಸಾವಿಗೆ ಕಾರಣವಾಯಿತು ಎಂದು ಪ್ರಾಥಮಿಕ ಶವಪರೀಕ್ಷೆ ವರದಿ ಹೇಳಿದೆ. ಇನ್ನು, ಪಶುವೈದ್ಯರು ಶ್ವಾಸಕೋಶದಲ್ಲಿ ನ್ಯುಮೋನಿಯಾದ ಲಕ್ಷಣಗಳನ್ನು ಸಹ ಕಂಡುಕೊಂಡಿದ್ದಾರೆ. ಲ್ಯಾಬ್ ಪರೀಕ್ಷೆಗಾಗಿ ಮೃತದೇಹದ ಪ್ರಮುಖ ಭಾಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನಂತರ, ಬೊಮ್ಮನ್ ಮತ್ತು ಅರಣ್ಯ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಶವವನ್ನು ಸುಡುವ ಮೊದಲು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದಾರೆ. 

ಇದನ್ನೂ ಓದಿ: Oscars 2023: ಭಾರತಕ್ಕೆ ಮೊದಲ ಗೆಲುವು: ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಶಾರ್ಟ್‌ ಫಿಲ್ಮ್ ಪ್ರಶಸ್ತಿ

Latest Videos
Follow Us:
Download App:
  • android
  • ios