ನವದೆಹಲಿ(ಫೆ.26): ಚುನಾವಣಾ ಆಯೋಗ ಶುಕ್ರವಾರ ಸಂಜೆ 4.30ಕ್ಕೆ ಸುದ್ದಿಗೋಷ್ಠಿ ಆಯೋಜಿಸಲಿದೆ. ಈ ಸಂದರ್ಭದಲ್ಲಿ ಆಯೋಗವು ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಸಾಧ್ಯತೆಗಳಿವೆ.

"

ಬುಧವಾರದಂದು ಮಹತ್ವದ ಸಭೆ

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಿರುವಾಗ ಬುಧವಾರದಂದು ಚುನಾವಣಾ ಆಯೊಗ ಮಹತ್ವದ ಸಭೆಯೊಂದನ್ನು ನಡೆಸಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅಧ್ಯಕ್ಷತೆಯಲ್ಲಿ  ನಡೆದ ಈ ಸಭೆಯಲ್ಲಿ ಪಂಚ ರಾಜ್ಯಗಳ ಚುನಾವಣಾ ದಿನಾಂಕದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಚುನಾವಣಾ ಹೊಸ್ತಿಲಲ್ಲಿ ರಾಜ್ಯಗಳಿಗೆ ನಾಯಕರ ಭೇಟಿ

ಇನ್ನು ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ರಾಷ್ಟ್ರೀಯ ಪಕ್ಷಗಳು ಈ ಐದು ರಾಜ್ಯಗಳ ಮತದಾರರನ್ನು ಓಲೈಸುವ ಕಾರ್ಯಕ್ಕಿಳಿದಿದ್ದಾರೆ. ರಾಷ್ಟ್ರ ನಾಯಕರು ರಾಜ್ಯಗಳಿಗೆ ಭೇಟಿ ನೀಡಿ ಜನರ ಮನ ಗೆಲ್ಲುವ ಯತ್ನ ನಡೆಸುತ್ತಿದ್ದಾರೆ. ಅಲ್ಲದೇ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಯೂ ಮುಂದುವರೆದಿದೆ.