Asianet Suvarna News Asianet Suvarna News

Assembly Election 2022 : ಸಮಾವೇಶ, ಪಾದಯಾತ್ರೆ ಮೇಲಿನ ನಿಷೇಧ ಮುಂದುವರಿಸಿದ ಚುನಾವಣಾ ಆಯೋಗ!

ಜ. 22ರವರೆಗೆ ಸಮಾವೇಶ, ಪಾದಯಾತ್ರೆ ರೋಡ್ ಶೋಗೆ ಇಲ್ಲ ಅನುಮತಿ
ಇದಕ್ಕೂ ಮುನ್ನ ಜ.15ರವರೆಗೆ ಈ ಎಲ್ಲವುಗಳಿಗೂ ನಿಷೇಧ ವಿಧಿಸಿತ್ತು ಚುನಾವಣಾ ಆಯೋಗ
ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕ್ರಮ

Election Commission further bans poll rallies and roadshows in poll bound states till 22nd January san
Author
Bengaluru, First Published Jan 15, 2022, 5:48 PM IST | Last Updated Jan 15, 2022, 6:37 PM IST

ನವದೆಹಲಿ ( ಜ. 15): ದೇಶದಲ್ಲಿ ಕೊವಿಡ್-19 ಪ್ರಕರಣಗಳಲ್ಲಿ (Covid-19 Cases) ಸಂಖ್ಯೆಗಳಲ್ಲಿ ವ್ಯಾಪಕವಾಗಿ ಏರಿಕೆ ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಚುನಾವಣಾ ಆಯೋಗ (Election Commission ) ಚುನಾವಣೆಗೆ ಸಿದ್ಧವಾಗಿರುವ ಪಂಚ ರಾಜ್ಯಗಳಲ್ಲಿ ಸಮಾವೇಶ (Rally), ಪಾದಯಾತ್ರೆ ಹಾಗೂ ರೋಡ್ ಶೋ (RoadShow) ಗಳ ಮೇಲಿನ ನಿಷೇಧವನ್ನು ಜನವರಿ 22ರವರೆಗೆ ಮುಂದುವರಿಕೆ ಮಾಡಿದ್ದಾಗಿ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಕೋವಿಡ್ -19 ಕಾರಣದಿಂದಾಗಿ ಈ ರಾಜ್ಯಗಳಲ್ಲಿ ಜನವರಿ 15ರವರೆಗೆ ಇವುಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು. ಈ ನಡುವೆ ಈ ರಾಜ್ಯಗಳಲ್ಲಿ ಕೊರೋನಾ ಪ್ರಕರಣದಲ್ಲಿ ಸಾಕಷ್ಟು ಏರಿಕೆ ಆಗಿರುವುದರಿಂದ ಈ ತೀರ್ಮಾನ ಮಾಡಲಾಗಿದೆ.

ಈ ನಡುವೆ ಒಳಾಂಗಣ ಸಭೆಗಳನ್ನು (Indoor Meeting) ನಡೆಸಲು ಅನುಮತಿ ನೀಡಿದೆ. ಗರಿಷ್ಠ 300 ಮಂದಿಯನ್ನು ಸೇರಿಸಿ ರಾಜಕೀಯ ಪಕ್ಷಗಳು ಸಭೆಗಳನ್ನು ನಡೆಸಬಹುದಾಗಿದೆ ಅಥವಾ ಒಳಾಂಗಣ ಸಭೆಯ ನಡೆಯುವ ಹಾಲ್ ನಲ್ಲಿ ಶೇ. 50ರಷ್ಟು ಜನರನ್ನು ಸೇರಿಸಿ ಸಭೆಗಳನ್ನು ನಡೆಸಲು ಅನುಮತಿ ನೀಡಿದೆ. ಕೋವಿಡ್-19 ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪ್ರತಿ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ, ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಕಾರ್ಯದರ್ಶಿ, ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕೇಂದ್ರ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಸಾಧ್ಯವಾದಷ್ಟು ಸುರಕ್ಷಿತವಾಗಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ ಚುನಾವಣಾ ಆಯೋಗ, 16 ಅಂಶಗಳ ಪಟ್ಟಿಯ ಭಾಗವಾಗಿ ಸಮಾವೇಶ ಹಾಗೂ ರೋಡ್ ಶೋಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕಾರ ಮಾಡಲಾಗಿದೆ.

ನೌಕದ್ ಸಭೆಗಳು, ರಸ್ತೆ ಬದಿಯಲ್ಲಿ ಸಭೆಗಳನ್ನು ನಡೆಸುವುದು ಹಾಗೂ ಮನೆ ಮನೆ ಪ್ರಚಾರಕ್ಕಾಗಿ ಜನರ ಸಂಖ್ಯೆಯನ್ನು ಸೀಮಿತಗೊಳಿಸುವುದು ಕೂಡ ಸೇರಿದೆ. ಆದರೆ, ಶುಕ್ರವಾರ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ (Samajwadi Party ) ಬಿಜೆಪಿಯ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya), ಧರಮ್ ಸಿಂಗ್ ಸೈನಿ (Dharam Singh Saini) ಹಾಗೂ ಇತರ ಆರು ಮಾಜಿ ಶಾಸಕರು ಸೇರ್ಪಡೆಯಾಗುವ ಸಮಾರಂಭದಲ್ಲಿ ಸಾಕಷ್ಟು ಜನರು ಸೇರಿದ್ದರು. ಈ ವೇಳೆ ಮಾಸ್ಕ್ ಗಳನ್ನು ಹಾಕದೇ ಇರುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇರುವುದು ಕೂಡ ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಅಖಿಲೇಶ್ ಯಾದವ್ ಸೇರಿದಂತೆ 2500 ಮಂದಿಯ ಮೇಲೆ ಎಫ್ ಐಆರ್ (FIR) ದಾಖಲು ಮಾಡಲಾಗಿದ್ದಲ್ಲದೆ, ಸಮಾಜವಾದಿ ಕಚೇರಿಗೆ ನೋಟಿಸ್ ಕೂಡ ನೀಡಲಾಗಿದೆ.
 


ಶನಿವಾರ ಈ ಕುರಿತಾಗಿ ಮಾತನಾಡಿದ ಅಖಿಲೇಶ್ ಯಾದವ್, ಎಲ್ಲರೂ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು. ನಮ್ಮ ಕಚೇರಿಗೆ ಬರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿದ್ದರು. ಈ ವಾರದ ಆರಂಭದಲ್ಲಿಯೇ ಉತ್ತರ ಪ್ರದೇಶದಲ್ಲಿ ದಾಖಲೆಯ ಶೇ.1300ರಷ್ಟು ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದರೆ, ಪಂಜಾಬ್ ನ 22 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಾಗಿದೆ.

Assembly Election 2022 : ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ!
ಉತ್ತರ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 90 ಸಾವಿರ ಆಗಿದ್ದರೆ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಾಖಂಡದಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಈ ಎಲ್ಲಾ ರಾಜ್ಯಗಳಿಂದ 60 ಸಾವಿರ ಪ್ರಕರಣಗಳಿವೆ. ವೈದ್ಯಕೀಯ ತಜ್ಞರು ಮತ್ತು ನಾಗರಿಕ ಸಮಾಜ ಗುಂಪುಗಳು ಹಾಗೂ ಅಲಹಾಬಾದ್ ಹೈಕೋರ್ಟ್ ಚುನಾವಣೆಯನ್ನು ಮುಂದೂಡುವಂತೆ ಕರೆ ನೀಡಿತ್ತು, ಆದರೆ ಚುನಾವಣಾ ಆಯೋಗವು "ಸಕಾಲಿಕ" ರೀತಿಯಲ್ಲಿ ಚುನಾವಣೆಗಳನ್ನು ನಡೆಸುವುದು ಸಂವಿಧಾನಾತ್ಮಕವಾಗಿ ಬದ್ಧವಾಗಿದೆ ಎಂದು ಹೇಳಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿರುವುದಾಗಿ ತಿಳಿಸಿದೆ.

Latest Videos
Follow Us:
Download App:
  • android
  • ios