Asianet Suvarna News Asianet Suvarna News

ಪಂಚರಾಜ್ಯ ಚುನಾವಣೆ: ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕಂಡೀಷನ್ ಹಾಕಿದ ಆಯೋಗ!

ಕೊರೋನಾ ವೈರಸ್ ದೇಶದ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಪರಿಣಿಮಿಸಿದೆ. ಇದರ ನಡುವೆ ಚುನಾವಣೆ ಆಯೋಗ ಪರ ವಿರೋಧದ ನಡುವೆ ಪಂಚ ರಾಜ್ಯಗಳ ಚುನಾವಣೆಯನ್ನೂ ನಡೆಸಿದೆ. ಇದೀಗ ಮೇ.02 ರಂದು ಮತ ಎಣಿಕೆ ಪ್ರಕ್ರಿಯೆ ನಡೆಲಿದೆ. ಈ ಮತ ಎಣಿಕೆ ಪ್ರಕ್ರಿಯೆ ಪರಿಶೀಲಿಸಲು ಅಭ್ಯರ್ಥಿಗಳ ಪ್ರವೇಶಕ್ಕೆ ಚುನಾವಣಾ ಆಯೋಗ ಮಹತ್ವದ ಕಂಡೀಷನ್ ಹಾಕಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

Election 2021 Candidates Must Show negative Covid report or two covid vaccine doses ckm
Author
Bengaluru, First Published Apr 28, 2021, 5:30 PM IST

ನವದೆಹಲಿ(ಏ.28): ಕೊರೋನಾ ನಡುವೆ ಪಂಚ ರಾಜ್ಯ ಚುನಾವಣೆ ನಡೆದಿದೆ. ಇದೀಗ ಎಲ್ಲರ ಚಿತ್ತ ಕೊರೋನಾ ಪ್ರಕರಣ ಸಂಖ್ಯೆಯ ಜೊತೆಗೆ ಮತ ಎಣಿಕೆ ಮೇಲೆ ನೆಟ್ಟಿದೆ. ಮೇ.02 ರಂದು ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಮೇ.2ರಂದು ನಡೆಯಲಿರುವ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅಭ್ಯರ್ಥಿಗಳು ಹಾಗೂ ಎಜೆಂಟ್‌ಗಳಿಗೆ ಚುನಾವಣಾ ಆಯೋಗ ಕಂಡೀಷನ್ ಹಾಕಿದೆ.

ಕೊರೋನಾ ಅಬ್ಬರ: ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದು!

ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕೊರೋನಾ ನೆಗಟೀವ್ ರಿಪೋರ್ಟ್ ಅಥವಾ ಕೊರೋನಾ ಲಸಿಕೆ 2 ಡೋಸ್ ತೆಗೆದುಕೊಂಡ ಪ್ರಮಾಣ ಪತ್ರ ಇರಲೇಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.  ಇನ್ನು ಮತ ಎಣಿಕೆ ಹೊರಗಡೆ ಜನ ಸೇರುವುದು, ಬೆಂಬಲಿಗರು ಸೇರುವುದನ್ನು ನಿಷೇಧಿಸಲಾಗಿದೆ.

ಕೊರೋನಾ ನೆಗಟೀವ್ ರಿಪೋರ್ಟ್ 48 ಗಂಟೆ ಮೀರಿರಬಾರದು ಎಂದು ಆಯೋಗ ಹೇಳಿದೆ. ಅಭ್ಯರ್ಥಿಗಳಿಗೆ ಗೆಲುವಿನ ಸಂಭ್ರಮಾಚರಣೆಗೂ ಬ್ರೇಕ್ ಹಾಕಲಾಗಿದೆ. ಗೆಲವಿನ ಹೆಸರಲ್ಲಿ ಯಾರೂ ಸೇರುವಂತಿಲ್ಲ.  3 ದಿನ ಮುಂಚಿತವಾಗಿ ಕೌಂಟಿಂಗ್ ಎಜೆಂಟ್ ಕುರಿತ ಮಾಹಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕಿದೆ. 

ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ - ನ್ಯಾಯಾಲಯ

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿದ ಪ್ರದೇಶ ಪುದುಚೇರಿಗೆ ಚುನಾವಣೆ ನಡೆದಿದೆ. ಪಶ್ಚಿಮ ಬಂಗಾಳ 8ನೇ ಹಾಗೂ ಅಂತಿಮ ಹಂತದ ಮತಾನದ ನಾಳೆ(ಏ.29) ನಡಯೆಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

Follow Us:
Download App:
  • android
  • ios