ಬೈಕ್‌ನಲ್ಲಿ ಕುಳಿತಾಗ ಅಮ್ಮನ ಕೈಯಿಂದ ಜಾರಿ ಬಿದ್ದ 8 ತಿಂಗಳು ಮಗು ಸಾವು
ದಿಢೀರ್ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯ ಕೈಯಲ್ಲಿದ್ದ ಕಂದಮ್ಮ ಕೆಳಗೆ ಬಿದ್ದಿದೆ. ಅಮ್ಮನ ಮುಂದೆಯೇ ಮಗು ಪ್ರಾಣ ಬಿಟ್ಟಿದೆ.
ತಿರುವನಂತಪುರ: ಬೈಕ್‌ನಲ್ಲಿ ಕುಳಿತಾಗ ಅಮ್ಮನ ಕೈಯಿಂದ ಜಾರಿ ಬಿದ್ದ 8 ತಿಂಗಳು ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಗಂಡು ಮಗು ಮುಹಮ್ಮದ್ ಎಂದು ತಿಳಿದು ಬಂದಿದೆ. ಅಲಪ್ಪುಳ ಜಿಲ್ಲೆಯ ಮನ್ನಂಚೇರಿ ಪೂವತುಮ್ ನಿವಾಸಿಯಾದ ಅಸ್ಲಂ ಎಂಬವರ ಪತ್ನಿ ಮಗುವಿನ ಜೊತೆ ಮಾವನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಮ್ಮನ ಕೈಯಲ್ಲಿದ್ದ ಮಗು ಮುಹಮ್ಮದ್ ಜಾರಿ ಕೆಳಗೆ ಬದ್ದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳಿ; ಜಾಹೀರಾತು ವೈರಲ್
ಬೈಕ್ ಅಡ್ಡಲಾಗಿ ಮತ್ತೊಂದು ವಾಹನ ಬಂದ ಕಾರಣ ದಿಢೀರ್ ಬ್ರೇಕ್ ಹಾಕಲಾಗಿದೆ. ಇದರಿಂದ ಮಹಿಳೆ ಕೈಯಲ್ಲಿದ್ದ ಮಗು ಕೆಳಗೆ ಬಿದ್ದು ಮೃತವಾಗಿದೆ. ಕಣ್ಮುಂದೆಯೇ ಪ್ರಾಣಬಿಟ್ಟ ಕಂದಮ್ಮನ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಸಂಜೆ ಈ ಅಪಘಾತ ನಡೆದಿದೆ.
ಬೈಕ್ ಹಿಂಬದಿ ಆಸನದಲ್ಲಿ ಕುಳಿತುಕೊಳ್ಳುವ ಮಹಿಳೆಯರು ತುಂಬಾನೇ ಎಚ್ಚರಿಕೆಯಿಂದಿರಬೇಕಾಗುತ್ತದೆ. ಮಹಿಳೆಯರ ಸೀರೆ ಅಂಚು, ದುಪ್ಪಟ್ಟಾ ಚಕ್ರಕ್ಕೆ ಸಿಲುಕಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಒಂದು ವೇಳೆ ಮಹಿಳೆಯರೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರೂ ಬಟ್ಟೆ ಬಗ್ಗೆ ಚಾಲನೆಗೂ ಮುನ್ನ ಬಟ್ಟೆ ಬಗ್ಗೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು. ಕೆಲ ಜನರು ಒಂದೇ ಬೈಕ್‌ನಲ್ಲಿ ಪತ್ನಿ, ಮಕ್ಕಳು ಲಗೇಜ್ ಸಮೇತ ಪ್ರಯಾಣಿಸುತ್ತಿರುವ ದೃಶ್ಯಗಳು ರಸ್ತೆಯಲ್ಲಿ ಕಂಡು ಬರುತ್ತವೆ.
ಒಂದೇ ಬೈಕ್‌ನಲ್ಲಿ ಐವರು, ನಮಸ್ಕಾರ ಮಾಡಿದ ಪೊಲೀಸ್
ಒಂದೇ ಬೈಕ್‌ನಲ್ಲಿ ಐವರು ತೆರಳುತ್ತಿದ್ದನ್ನು ಕಂಡು ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿ ಸವಾರನಿಗೆ ನಮಸ್ಕರಿಸಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸವಾರ ಸೇರಿದಂತೆ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಬೈಕ್‌ನಲ್ಲಿ ತೆರಳುತ್ತಿದ್ದರು. ಮಕ್ಕಳಿಬ್ಬರನ್ನು ಇಂಜಿನ್ ಮೇಲೆ ಕೂರಿಸಲಾಗಿತ್ತು. ಮಹಿಳೆಯರು ಸವಾರನ ಹಿಂದೆ ಕುಳಿತಿದ್ದರು. ಒಂದೇ ಬೈಕ್‌ನಲ್ಲಿ ಐವರ ಪ್ರಯಾಣ ಕಂಡು ಶಾಕ್ ಆದ ಪೊಲೀಸ್ ಅಧಿಕಾರಿ ನಮಸ್ಕಾರ ಮಾಡಿದ್ದರು. ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ಈ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
6 ತಾಸಲ್ಲಿ 30 ಸೆಂ.ಮೀ. ಮಳೆಗೆ ಮುಂಬೈ ತತ್ತರ: ರೈಲು ಸ್ಥಗಿತಗೊಂಡು ಹಳಿ ಮೇಲೆ 2 ಕಿ.ಮೀ. ನಡೆದ ಸಚಿವ