Asianet Suvarna News Asianet Suvarna News

ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಹಣದ ಲೂಟಿ: ಸಚಿವ ರಾಜೀವ್‌ ಚಂದ್ರಶೇಖರ್‌ ವಾಗ್ದಾಳಿ

ಪಶ್ಚಿಮ ಬಂಗಾಳದ ಶಿಕ್ಷಣ ನೇಮಕಾತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಇದೇ ವೇಳೆ ಬಿಜೆಪಿ, ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಹಣ ಲೂಟಿಯಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ನಿಂದಿಸಲಾಗುತ್ತಿದೆ. ಅಲ್ಲದೇ ಕಳ್ಳರು ಗಲಾಟೆ ಮಾಡುತ್ತಿದ್ದಾರೆ, ಕಳ್ಳತನದ ಸಾಕ್ಷ್ಯ ಜನರಿಗೆ ತಲುಪದೇ ಇರುವಂಥ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Education Recruitment Scam BJP Rajiv Chandrashekhar attack on TMC says loot of government money in West Bengal san
Author
Bengaluru, First Published Jul 23, 2022, 3:40 PM IST

ಕೋಲ್ಕತ್ತಾ (ಜುಲೈ 23): ಪಶ್ಚಿಮ ಬಂಗಾಳದ ಶಿಕ್ಷಣ ನೇಮಕಾತಿ ಹಗರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದರೊಂದಿಗೆ ಅವರ ಆತ್ಯಾಪ್ತೆ ಎನಿಸಿಕೊಂಡಿರುವ ಅರ್ಪಿತಾ ಮುಖರ್ಜಿಯನ್ನೂ ವಶಕ್ಕೆ ಪಡೆಯಲಾಗಿದೆ. ಇಡಿ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಬಿಜೆಪಿ ಈ ವಿಚಾರದಲ್ಲಿ ಮಮತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಕಳ್ಳರೇ ಸದ್ದು ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ಬಂಗಾಳದಲ್ಲಿ ಸರ್ಕಾರದ ಹಣ ಲೂಟಿಯಾಗಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಬಂಗಾಳದಲ್ಲಿ ಏಜೆನ್ಸಿಗಳು ಸಾಕಷ್ಟು ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿವೆ. ಇವರುಗಳ ಮೇಲೆ ದೀರ್ಘಕಾಲದಿಂದ ಭ್ರಷ್ಟಾಚಾರದ ಆರೋಪಗಳಿದ್ದವು. ಅಲ್ಲದೆ ಮಮತಾ ಬ್ಯಾನರ್ಜಿ ಅವರು ಬಹುಪಕ್ಷೀಯ ಪ್ರಚಾರ ಮಾಡುವ ಮೂಲಕ ಸಂಸ್ಥೆಗಳ ಮಾನಹಾನಿ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. ತನಿಖಾ ಸಂಸ್ಥೆಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಈ ಇಡೀ ಆಟವನ್ನು ಮರೆಮಾಚುವ ಪ್ರಯತ್ನವೂ ನಡೆಯುತ್ತಿತ್ತು ಎಂದು ಕಿಡಿಕಾರಿದ್ದಾರೆ. ಪಂಜಾಬ್, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಇಡಿ ಕ್ರಮ ಕೈಗೊಂಡಿದ್ದ ವೇಳೆ ಎಲ್ಲರನ್ನೂ ದಾಖಲೆಯ ಸಮೇತ ಹಿಡಿಯಲಾಗಿದೆ. ಆ ಕಾರಣಕ್ಕಾಗಿಯೇ ಬಿಜೆಪಿ ಈ ಸಂಸ್ಥೆಗಳನ್ನು ಸ್ವತಂತ್ರವಾಗಿರಿಸಿದೆ ಎಂದು ಹೇಳಿದ್ದಾರೆ.

ಪುರಾವೆಗಳನ್ನು ಜನರಿಗೆ ಸಿಗದೇ ಇರುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ: ಪಾರ್ಥ ಚಟರ್ಜಿ (Partha Chatterjee) ಈ ವಿಚಾರದಲ್ಲಿ ಟಿಎಂಸಿ ಮೌನ ವಹಿಸಿದೆ ಎಂದು ರಾಜೀವ್ ಚಂದ್ರಶೇಖರ್ (Rajiv Chandrashekhar) ಹೇಳಿದ್ದಾರೆ. ಅಲ್ಲದೆ 21 ಕೋಟಿ ವಶ ಪಡಿಸಿಕೊಂಡಿರುವುದು ಈ ಪ್ರಕರಣದಲ್ಲಿ ಸರ್ಕಾರವೂ (west bengal government) ಕೂಡ ಭಾಗಿಯಾಗಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಂಗಾಳದಲ್ಲಿ ಕಳ್ಳರೇ ಸುದ್ದಿ ಮಾಡುತ್ತಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಇವರ ಕಳ್ಳತನದ ಯಾವುದೇ ಪುರಾವಗಳು ಜನರಿಗೆ ತಲುಪದೇ ಇರುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. . ಇದೇ ವೇಳೆ ತನಿಖಾ ಸಂಸ್ಥೆಗಳ ಮಾನಹಾನಿ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಮಾಹಿತಿ ಪ್ರಕಾರ ಶನಿವಾರವೂ ಅರ್ಪಿತಾ ಮನೆಯಲ್ಲಿ ನೋಟು ಎಣಿಕೆ ಕಾರ್ಯ ನಡೆಯುತ್ತಿದೆ. ಇನ್ನೂ ಎರಡು ನೋಟು ಎಣಿಕೆ ಯಂತ್ರಗಳನ್ನು ಅವರ ಮನೆಗೆ ತರಲಾಗಿದೆ. ಹಾಗಾಗಿ ಅರ್ಪಿತಾ ಚಟರ್ಜಿ (Arpita Mukherjee) ಅವರ ಮನೆಯಲ್ಲಿ ಇನ್ನೂ ದೊಡ್ಡ ಪ್ರಮಾಣದ ನಗದು ವಶವಾಗುವ ನಿರೀಕ್ಷೆ ಇದೆ.

'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?

ರಾಜಕೀಯ ಭ್ರಷ್ಟಾಚಾರದ ಬಗ್ಗೆ ಮಮತಾ ಮಾತನಾಡಬೇಕು: ಪಶ್ವಿಮ ಬಂಗಾಳದ ಸಚಿವರೊಬ್ಬರ ಆಪ್ತರ ಮನೆಯಲ್ಲಿ ಸಿಕ್ಕಿರುವ ಹಣದ ಕಟ್ಟುಗಳ ಪರ್ವತವನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಇದು ಪಶ್ಚಿಮ ಬಂಗಾಳದಲ್ಲಿರುವ ರಾಜಕೀಯ ಭ್ರಷ್ಟಾಚಾರದ  (political corruption) ಬಗ್ಗೆ ಬೆಳಕು ಚೆಲ್ಲಿದೆ ಎಂದಿದ್ದಾರೆ. ತನಿಖಾ ಸಂಸ್ಥೆಗಳು ಹಾಗೂ ಅವರ ಕಾರ್ಯವೈಖರಿಗಳ ಬಗ್ಗೆ ಪದೇ ಪದೇ ಟೀಕೆ ಮಾಡುವ ಮೂಡಲ ರಾಜಕೀಯ ಬಣ್ಣ ಬಳಿಯುವ ಮಮತಾ ಬ್ಯಾನರ್ಜಿ ರಾಜಕೀಯ ಭ್ರಷ್ಟಾಚಾರ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಿಕ್ಷಕರ ನೇಮಕ ಹಗರಣ: ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಬಂಧನ!

ಹಗರಣ ಬೆಳಕಿಗೆ ಬಂದಾಗಲೆಲ್ಲ ಸುಮ್ಮನಾಗುವ ಮಮತಾ: ಸಿಎಂ ಬ್ಯಾನರ್ಜಿ(mamata banerjee)  ಇಡಿ (enforcement directorate) ಮತ್ತು ಸಿಬಿಐ (central bureau of investigation) ವಿರುದ್ಧ ಮಾತನಾಡುತ್ತಾರೆ, ಆದರೆ ಈ ಏಜೆನ್ಸಿಗಳು ರಾಜಕೀಯ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದಾಗಲೆಲ್ಲ ಬಾಯಿ ಮುಚ್ಚಿಕೊಳ್ಳುತ್ತಾರೆ. ಅವರು ತಮ್ಮ ತನಿಖೆಯನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳನ್ನು ಬೆದರಿಸಲು ಪ್ರಯತ್ನಿಸುತ್ತಾರೆ. , ಆದ್ದರಿಂದ ಅವರ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ

Follow Us:
Download App:
  • android
  • ios