National Herald case: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್  ಜಾರಿ ಮಾಡಿದೆ.
 

ED summons Rahul Gandhi and  Sonia Gandhi in the National Herald case Enforcement Directorate money laundering case san

ನವದೆಹಲಿ (ಜೂ.1): ನ್ಯಾಷನಲ್ ಹೆರಾಲ್ಡ್‌ಗೆ (National Herald ) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (money laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 8 ರಂದು ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (sonia gandhi) ಮತ್ತು ಅವರ ಪುತ್ರ ರಾಹುಲ್ ಗಾಂಧಿಗೆ (Rahul Gandhi) ಸಮನ್ಸ್ ಕಳುಹಿಸಿದೆ.
 
ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ( Abhishek Manu Singhvi )  ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದು, ಸೋನಿಯಾ ಗಾಂಧಿ ಅವರು ಹೇಳಿದ ದಿನಾಂಕದಂದು ಅಗತ್ಯವಿದ್ದಲ್ಲಿ ಹಾಜರಾಗುತ್ತಾರೆ ಆದರೆ ಪಕ್ಷವು ತನಿಖಾ ಸಂಸ್ಥೆಗೆ ಪತ್ರ ಬರೆದು ರಾಹುಲ್ ಗಾಂಧಿಗೆ ಕೆಲವು ಸೌಕರ್ಯಗಳನ್ನು ಕೋರುತ್ತದೆ. ಮನಿ ಲಾಂಡರಿಂಗ್ ಅಥವಾ ಯಾವುದೇ ಹಣ ವಿನಿಮಯದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸಿಂಘ್ವಿ ಹೇಳಿದರು.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಹಾಗೂ ವಕ್ತಾರ ರಣದೀಪ್ ಸುರ್ಜೇವಾಲಾ ( Randeep Surjewala ), ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಗಿದ್ದು 1942ರಲ್ಲಿ. ಅಂದು ಬ್ರಿಟಿಷರು ಪತ್ರಿಕೆಯನ್ನು ಹತ್ತಿಕ್ಕಲು ಪ್ರಯತ್ನ ಮಾಡಿದರು. ಇಂದು ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ ಮತ್ತು ಇದಕ್ಕೆ ಇಡಿ ಬಳಸಲಾಗುತ್ತಿದೆ. ಇಡಿ ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ ಎಂದಿದ್ದಾರೆ.

2015 ರಲ್ಲಿ ತನಿಖಾ ಸಂಸ್ಥೆಯಿಂದ ಮುಕ್ತಾಯವಾಗಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದೊಂದಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ. ಜೂನ್ 2 ರಂದು ರಾಹುಲ್ ಗಾಂಧಿ ಮತ್ತು ಜೂನ್ 8 ರಂದು ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಆದರೆ, ರಾಹುಲ್ ಗಾಂಧಿ ಅವರು ದೇಶದಲ್ಲಿ ಇಲ್ಲದ ಕಾರಣ ಜೂನ್ 5ರ ನಂತರ ಹಾಜರಾಗಲು ಸಮಯ ಕೇಳಿದ್ದಾರೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇಡಿ ಸಮನ್ಸ್‌ಗಳನ್ನು ಗೌರವಿಸಲು ನಿರ್ಧರಿಸಿದ್ದು, ವಿಚಾರಣೆಯಲ್ಲಿ ವಿಳಂಬ ಅಥವಾ ಮುಂದೂಡಿಕೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. "ಇದು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಕಾನೂನು ಹೋರಾಟ" ಎಂದು ಪಕ್ಷವು ಹೇಳಿದೆ. "ಇದೊಂದು ವಿಚಿತ್ರವಾದ ಮನಿ ಲಾಂಡರಿಂಗ್ ಪ್ರಕರಣವಾಗಿದೆ, ಅಲ್ಲಿ ಯಾವುದೇ ಹಣ ಹೂಡಿಕೆಯಾಗಿಲ್ಲ. ಈ ಪ್ರಕರಣವು ಕಾರ್ಡ್‌ಗಳ ಪ್ಯಾಕ್‌ಗಿಂತ ಹೆಚ್ಚು ಟೊಳ್ಳಾಗಿದೆ. ನಾವು ಅದನ್ನು ಎದುರಿಸುತ್ತೇವೆ. ನಾವು ಹೆದರುವುದಿಲ್ಲ. ಇದು ಸೇಡು, ಕ್ಷುಲ್ಲಕತೆ, ಭಯ ಮತ್ತು ಅಗ್ಗದ ರಾಜಕೀಯ ಎಂದು  ಸಿಂಘ್ವಿ ಹೇಳಿದ್ದಾರೆ.

ನ್ಯಾಷನಲ್​ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್‌ಗೆ ಭಾರಿ ಹಿನ್ನಡೆ

ಈ ಪ್ರಕರಣವು ಹಣದುಬ್ಬರ ಮತ್ತು ಇತರ ಸಮಸ್ಯೆಗಳಂತಹ ದೇಶವು ಎದುರಿಸುತ್ತಿರುವ "ನೈಜ ಸಮಸ್ಯೆಗಳಿಂದ" ಜನರನ್ನು ವಂಚಿಸುವ ತಂತ್ರ. 2015ರಲ್ಲೇ ಈ ಪ್ರಕರಣವನ್ನು ಇಡಿ ಮುಕ್ತಾಯ ಮಾಡಿದೆ. ಆದರೆ, ಸರ್ಕಾರಕ್ಕೆ ಇದು ಇಷ್ಟವಿರಲಲ್ಲ. ಆ ಅಧಿಕಾರಿಗಳನ್ನು ತೆಗೆದುಹಾಕಿ ಹೊಸ ಅಧಿಕಾರಿಗಳಿಂದ ಮತ್ತೆ ಈ ಪ್ರಕರಣವನ್ನು ಜೀವಂತ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಸಿಂಘ್ವಿ ಆರೋಪಿಸಿದ್ದಾರೆ.

ಮತ್ತೆ ಉದಯಿಸಿತು ಕಾಂಗ್ರೆಸ್ ಮುಖವಾಣಿ ನ್ಯಾಷನಲ್ ಹೆರಾಲ್ಡ್..!

ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ)  ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಲು ಸಂಸ್ಥೆ ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಯಾವುದೇ ಹಣದ ವಿನಿಮಯ ನಡೆದಿಲ್ಲ. ನೌಕರರಿಗೆ ಸಂಬಳ ಇತ್ಯಾದಿಗಳನ್ನು ಪಾವತಿಸಲು ಸಾಲವನ್ನು ಈಕ್ವಿಟಿಯನ್ನಾಗಿ ಪರಿವರ್ತನೆ ಮಾಡಲಾಗಿತ್ತು ಎಂದು ಪಕ್ಷವು ಹೇಳಿದೆ.

Latest Videos
Follow Us:
Download App:
  • android
  • ios