* ಗೋಸಾಗಣೆ ಮಾಡುತ್ತಿರುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು* ಇಂಧನ ಖಾತೆ ಸಚಿವ ಹರ್‌ದೀಪ್‌ಸಿಂಗ್‌ ಚುನಾವಣಾ ಆಯೋಗಕ್ಕೆ ಸಲಹೆ* ಗೋವು ಸಾಕಲು ನಿರಾಕರಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಕಾನೂನು 

ಭೋಪಾಲ್‌(ಆ.17): ಗೋಸಾಗಣೆ ಮಾಡುತ್ತಿರುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು ಎಂಬ ಕಾನೂನು ರೂಪಿಸಬೇಕೆಂದು ಎಂದು ಮಧ್ಯಪ್ರದೇಶ ನವೀಕರಿಸಬಹುದಾದ ಇಂಧನ ಖಾತೆ ಸಚಿ ಹರ್‌ದೀಪ್‌ಸಿಂಗ್‌ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.

ಗೋವು ಸಾಕಲು ನಿರಾಕರಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಕಾನೂನು ರೂಪಿಸಬೇಕು. ಕೃಷಿ ಉತ್ಪನ್ನಗಳನ್ನ ಮಾರುವ ಮತ್ತು ಕೊಳ್ಳುವ ಜನರಿಗೆ ಗೋ ಸಾಕಣೆ ಕಡ್ಡಾಯಗೊಳಿಸಬೇಕು.

ಹಸು ಸಾಕಲು ಸಾಕಲು ಸರ್ಕಾರಿ ಉದ್ಯೋಗಿಗಳಿಗೆ ಸಾಧ್ಯವಿಲ್ಲ ಹಾಗಾಗಿ ಮಾಸಿಕ 25 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಸರ್ಕಾರಿ ಉದ್ಯೋಗಿಗಳಿಂದ ಮಾಸಿಕ 500 ರು.ಗಳನ್ನು ಸಂಗ್ರಹಿಸಿ ಗೋವು ಸಾಕುವವರಿಗೆ ನೀಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.