Asianet Suvarna News Asianet Suvarna News

ಉತ್ತರ ಪ್ರದೇಶ, ಬಿಹಾರ ಸೇರಿ 5 ರಾಜ್ಯಗಳ ಲೋಕಸಭಾ, ವಿಧಾನಸಭಾ ಉಪಚನಾವಣೆ ದಿನಾಂಕ ಘೋಷಣೆ!

ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಬಾ ಚುನಾವಣೆ ಘೋಷಣೆ ಬೆನ್ನಲ್ಲೇ ಇದೀಗ 5 ರಾಜ್ಯಗಳಲ್ಲಿನ  ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗಳ ದಿನಾಂಕ ಘೋಷಣೆಯಾಗಿದೆ. 
 

EC announces By polls to Mulayam Singh Yadav Lok Sabha constituency and 5 Assembly seats in 5 states on December 5 ckm
Author
First Published Nov 5, 2022, 11:46 AM IST

ನವದೆಹಲಿ(ನ.05): ಭಾರತದಲ್ಲೀಗ ಯಾವುದೇ ರಾಜ್ಯಕ್ಕೆ ತೆರಳಿದರೂ ಚುನಾವಣಾ ಚರ್ಚೆ. ಸದ್ಯದಲ್ಲಿ ಹಿಮಾಚಲ ಪ್ರದೇಶ ಹಾಗೂ ಗುುಜರಾತ್ ಚುನಾವಣೆ ನಡೆಯಲಿದೆ. ಇದೀಗ ಉತ್ತರ ಪ್ರದೇಶ, ಬಿಹಾರ ಸೇರಿದಂತೆ 5 ರಾಜ್ಯಗಳ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗ ಡಿಸೆಂಬರ್ 5 ರಂದು ಉಪಚುನಾವಣೆ ನಡೆಸಲು ನಿರ್ಧರಿಸಿದೆ. ಸವಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾಗಿರುವ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. ಇದೇ ದಿನ ಒಡಿಶಾ, ಬಿಹಾರ, ಉತ್ತರ ಪ್ರದೇಶ ಹಾಗೂ ಚತ್ತೀಸಘಡದಲ್ಲಿ ತೆರವಾಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡಯೆಲಿದೆ ಎಂದು ಆಯೋಗ ಘೋಷಿಸಿದೆ.

ಒಡಿಶಾದ ಪದಂಪುರ ವಿಧಾನಸಭಾ ಕ್ಷೇತ್ರ, ರಾಜಸ್ಥಾನದ ಸರ್ದರ್ಶಹಾರ್ ವಿಧಾನಸಭಾ ಕ್ಷೇತ್ರ, ಬಿಹಾರದ ಕುರ್ಹಾನಿ ವಿಧಾನಸಭಾ ಕ್ಷೇತ್ರ, ಉತ್ತರ ಪ್ರದೇಶದ ರಾಂಪುರು ವಿಧಾನಸಭಾ ಕ್ಷೇತ್ರ ಹಾಗೂ ಚತ್ತೀಸಘಡದ ಭಾನುಪ್ರತಾಪ್‌ಪುರ ವಿಧಾನಸಭಾ ಕ್ಷೇತ್ರಕ್ಕೆ(Assembly seat by polls) ಉಪ ಚನಾವಣೆ ನಡೆಯಲಿದೆ.  ಇದರೊಂದಿಗೆ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾಗಿರುವ ಲೋಕಸಭಾ ಕ್ಷೇತ್ರಕ್ಕೂ(Lok Sabha constituency) ಉಪಚುನಾವಣೆ(By polls) ನಡೆಯಲಿದೆ.

Gujarat Election 2022: ಗುಜರಾತ್‌ನಲ್ಲಿ ಡಿಸೆಂಬರ್‌ 1, 5ಕ್ಕೆ ಎರಡು ಹಂತದ ಮತದಾನ, 8ಕ್ಕೆ ಫಲಿತಾಂಶ!

ನವೆಂಬರ್ 10ಕ್ಕೆ ಗಜೆಟೆಡ್ ಅಧಿಸೂಚನೆ ಹೊರಡಿಸಲಾಗುತ್ತದೆ. ಇನ್ನು ಉಪಚುನಾವಣೆಗೆ ಅಭ್ಯರ್ಥಿಗಳು ನಾಪಪತ್ರ(Nomination) ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 17. ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆಯನ್ನು ನವೆಂಬರ್ 18 ರಂದು ಮಾಡಲಾಗುತ್ತದೆ. ಇನ್ನು ನಾಮಪತ್ರ ಹಿಂತೆಗಯಲು ಕೊನೆಯ ದಿನಾಂಕ ನವೆಂಬರ್ 21. ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 8ಕ್ಕೆ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ(Election Commission of India) ಪ್ರಕಟಿಸಿದೆ.

Assembly Elections 2022 ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಣೆ, ನ.12ಕ್ಕೆ ಎಲೆಕ್ಷನ್!

ಮುಲಾಂಯ ಕ್ಷೇತ್ರ ಗೆಲ್ಲಲು ಸಮಾಜವಾದಿ ಪಾರ್ಟಿ ಕಸರತ್ತು
ಐದೂವರೆ ದಶಕಗಳ ಕಾಲ ಸಕ್ರಿಯ ರಾಜಕೀಯಲ್ಲಿದ್ದ ಮುಲಾಯಂ ಈ ಅವಧಿಯಲ್ಲಿ 5 ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. ಸಮಾಜವಾದಿ ನಾಯಕನಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಮುಲಾಯಂ(Mulayam Singh yadav) ತಮ್ಮ 6 ದಶಕಗಳ ರಾಜಕೀಯ ಜೀವನದಲ್ಲಿ ಲೋಹಿಯಾರ ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ, ಚರಣ್‌ಸಿಂಗ್‌ರ ಭಾರತೀಯ ಕ್ರಾಂತಿ ದಳ, ಭಾರತೀಯ ಲೋಕ ದಳ ಮತ್ತು ತಾವೇ ಸ್ಥಾಪಿಸಿದ ಸಮಾಜವಾದಿ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿದ್ದರು. 1967ರಲ್ಲಿ ಮೊದಲ ಬಾರಿ ಜಸ್ವಂತ್‌ ನಗರದಿಂದ ವಿಧಾನಸಭೆಗೆ ಆಯ್ಕೆಯಾದ ಮುಲಾಯಂ ನಂತರ 7 ಬಾರಿ ಇದೇ ಕ್ಷೇತ್ರದಿಂದ ಒಮ್ಮೆ ಸಹಸ್ವಾನ್‌ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿಬಂದಿದ್ದರು. ಈ ಅವಧಿಯಲ್ಲಿ 3 ಬಾರಿ ಮುಖ್ಯಮಂತ್ರಿ ಹುದ್ದೆ ಏರಿದ್ದರು. ರಾಷ್ಟ್ರ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುವ ಕನಸಿನೊಂದಿಗೆ ಮುಲಾಯಂ 1996ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ರಕ್ಷಣಾ ಸಚಿವರಾಗಿದ್ದ ಮುಲಾಯಂ ನಂತರ ಒಟ್ಟು 6 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

Follow Us:
Download App:
  • android
  • ios