* ಕಣಿವೆ ನಾಡಿನಲ್ಲಿ ನಡುಗಿದ ಭೂಮಿ* ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಸೋಮವಾರ ಸಂಜೆ ಭೂಕಂಪನ* ರಿಕ್ಟರ್ ಮಾಪಕದಲ್ಲಿ 5.0ರಷ್ಟು ತೀವ್ರತೆ ದಾಖಲು
ಲಡಾಖ್(ಡಿ.27): ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಸೋಮವಾರ ಸಂಜೆ ಭೂಕಂಪನದ ಅನುಭವವಾಗಿದೆ. ಲಡಾಖ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.0 ಎಂದು ಅಳೆಯಲಾಗಿದೆ. ಭಾರತೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸೋಮವಾರ ಸಂಜೆ 7.01 ಗಂಟೆಗೆ ಲಡಾಖ್‌ನಲ್ಲಿ ಭೂಕಂಪನದ ಅನುಭವವಾಯಿತು.
NCS ಪ್ರಕಾರ, ಭೂಕಂಪದ ಕಂಪನವು ರಾತ್ರಿ 7.01 ಕ್ಕೆ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಲಡಾಖ್‌ನ ಕಾರ್ಗಿಲ್‌ನಿಂದ 146 ಕಿ.ಮೀ. ಇದರ ಆಳ 137 ಕಿ.ಮೀ. ಈ ಕಂಪನದಿಂದ ಚೇತರಿಸಿಕೊಳ್ಳಲು ಲಡಾಖ್‌ನ ಜನರಿಗೆ ಸಾಧ್ಯವಾಗಿಲ್ಲ, ಕೆಲವು ನಿಮಿಷಗಳ ನಂತರ ಮತ್ತೆ ಭೂಕಂಪದಿಂದ ಭೂಮಿ ಕಂಪಿಸಿತು.
ಆದಾಗ್ಯೂ, ಎರಡನೇ ಬಾರಿಗೆ ಭೂಕಂಪನ ಅಷ್ಟೊಂದು ತೀವ್ರವಾಗಿರಲಿಲ್ಲ. NCS ಪ್ರಕಾರ, ಭೂಕಂಪದ ಕಂಪನವನ್ನು ಎರಡನೇ ಬಾರಿಗೆ ರಾತ್ರಿ 7.07 ಕ್ಕೆ ಕಂಡು ಬಂದಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.8 ಎಂದು ಅಳೆಯಲಾಗಿದೆ. ಭೂಕಂಪದ ಕೇಂದ್ರಬಿಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ 130 ಕಿ.ಮೀ ದೂರದಲ್ಲಿದೆ.
ಭೂಕಂಪದ ಆಳ 212 ಕಿ.ಮೀ. ಲಡಾಖ್ ಭೂಕಂಪಗಳಿಗೆ ಬಹಳ ಸೂಕ್ಷ್ಮವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಜೂನ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲೂ ಲಡಾಖ್‌ನಲ್ಲಿ ಭೂಕಂಪನದ ಅನುಭವವಾಗಿತ್ತು.
