Asianet Suvarna News Asianet Suvarna News

ದೇಶದ 284 ನಗರಗಳಲ್ಲಿ 808 ಎಫ್‌ಎಂ ರೇಡಿಯೋ ಆರಂಭ, ಇ-ಹರಾಜು ಪ್ರಕ್ರಿಯೆ ಶೀಘ್ರ

ರೇಡಿಯೊ ಸಂವಹನದ ಹೆಜ್ಜೆಗುರುತನ್ನು ಇನ್ನಷ್ಟು ಬಲಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು 284 ನಗರಗಳಲ್ಲಿ 808 ಎಫ್‌ಎಂ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.

E auction of 808 FM radio stations soon says  Minister Anurag Thakur gow
Author
First Published Jul 24, 2023, 8:50 AM IST

ನವದೆಹಲಿ (ಜು.24): ರೇಡಿಯೊ ಸಂವಹನದ ಹೆಜ್ಜೆಗುರುತನ್ನು ಇನ್ನಷ್ಟು ಬಲಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು 284 ನಗರಗಳಲ್ಲಿ 808 ಎಫ್‌ಎಂ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು, ಇದರ ಇ-ಹರಾಜು ಪ್ರಕ್ರಿಯೆ ಶೀಘ್ರದಲ್ಲೇ ನಡೆಸಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಭಾನುವಾರ ಹೇಳಿದ್ದಾರೆ. 

ಪ್ರಾದೇಶಿಕ ಸಮುದಾಯ ರೇಡಿಯೊ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್,   ಸಮುದಾಯ ರೇಡಿಯೊವನ್ನು ನಡೆಸಲು ಪರವಾನಗಿ ಪಡೆಯುವ ಪ್ರಕ್ರಿಯೆಗಳನ್ನು ಸರ್ಕಾರವು ಸುಲಭವಾಗಿಸಿದೆ ಎಂದು ಹೇಳಿದರು.

ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಭಾರತದ ಟಾಪ್ 10 ಬಿಲಿಯನೇರ್ ಮಹಿಳಾ ಉದ್ಯಮಿಗಳು!

ಭಾರತದಲ್ಲಿ ಪ್ರಸ್ತುತ 26 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ 113 ನಗರಗಳಲ್ಲಿ 388 FM ರೇಡಿಯೋ ಕೇಂದ್ರಗಳನ್ನು ಹೊಂದಿದೆ. ರೇಡಿಯೋ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಚಿಂತಿಸಿದ್ದು, ಈಗ 284 ನಗರಗಳಲ್ಲಿ 808 ಚಾನೆಲ್‌ಗಳ ಮೂರನೇ ಬ್ಯಾಚ್ ಇ-ಹರಾಜನ್ನು ಯೋಜಿಸುತ್ತಿದೆ ಎಂದು ಠಾಕೂರ್ ಮಾಹಿತಿ ನೀಡಿದ್ದಾರೆ.

ರೇಡಿಯೋ ವ್ಯಾಪ್ತಿಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ದೂರದ ಪ್ರದೇಶಗಳಲ್ಲಿ ರೇಡಿಯೊ ಟವರ್‌ಗಳನ್ನು ಸ್ಥಾಪಿಸುತ್ತಿದೆ. ಟಯರ್‌ 2-3 ನಗರಗಳಲ್ಲಿ ಹಾಗೂ ವಿಶೇಷವಾಗಿ ಎಡ ಪಂಥೀಯ ತೀವ್ರತೆ ಹೆಚ್ಚಿರುವ ಭಾಗಗಳಲ್ಲಿ ಮೇಲೆ ಹೆಚ್ಚು ಕೇಂದ್ರೀಕರಿಸುವ ಮೂಲಕ ಶ್ರೇಣಿ-II ಮತ್ತು ಶ್ರೇಣಿ-III ನಗರಗಳಲ್ಲಿ FM ನೆಟ್ವರ್ಕ್ ಅನ್ನು ವಿಸ್ತರಿಸಲು ಸರ್ಕಾರ ಯೋಜಿಸಿದೆ ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸರ್ಕಾರವು ಬ್ರಾಡ್‌ಕಾಸ್ಟಿಂಗ್ ಇನ್ಫ್ರಾಸ್ಟ್ರಕ್ಚರ್ ಮತ್ತು ನೆಟ್‌ವರ್ಕ್ ಡೆವಲಪ್‌ಮೆಂಟ್ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಇದು ದೇಶದಲ್ಲಿ AIR FM ಟ್ರಾನ್ಸ್‌ಮಿಟರ್‌ಗಳ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶದಿಂದ ಶೇ.59ರಿಂದ ಶೇ. 66 ಪ್ರತಿಶತಕ್ಕೆ ಮತ್ತು ಜನಸಂಖ್ಯೆಯಿಂದ ಶೇ.68 ಪ್ರತಿಶತದಿಂದ ಶೇ. 80 ಪ್ರತಿಶತಕ್ಕೆ  ಹೆಚ್ಚಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಈ ಯಶಸ್ವಿ ಮಹಿಳಾ ಉದ್ಯಮಿ, ವಾರ್ಷಿಕ 148 ಕೋಟಿ ನೆಟ್‌ವರ್ತ್‌!

ಈ ಯೋಜನೆಯು ದೂರದ, ಬುಡಕಟ್ಟು, ಎಲ್‌ಡಬ್ಲ್ಯೂಇ ಪೀಡಿತ ಮತ್ತು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಂಟು ಲಕ್ಷಕ್ಕೂ ಹೆಚ್ಚು ಡಿಡಿ ಉಚಿತ ಡಿಶ್ ಸೆಟ್-ಟಾಪ್ ಬಾಕ್ಸ್‌ಗಳನ್ನು ಉಚಿತವಾಗಿ ವಿತರಿಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ರೇಡಿಯೋ ತೆರೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ’ ಎಂದಿದ್ದಾರೆ.

Follow Us:
Download App:
  • android
  • ios