BUSINESS

1.ರೋಶನಿ ನಾಡರ್

ಭಾರತದ ನಾಲ್ಕನೇ ಅತಿದೊಡ್ಡ ಐಟಿ ಕಂಪನಿಯಾದ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷೆ 40 ವರ್ಷದ ರೋಶನಿ ನಾಡಾರ್ ದೇಶದ ಅತ್ಯಂತ ಶ್ರೀಮಂತ ಮಹಿಳೆ.  ಇವರ ಸಂಪತ್ತು 84,330 ಕೋಟಿ ರೂ.

Image credits: our own

2.ಫಲ್ಗುಣಿ ನಾಯರ್

ನೈಕಾ ಕಂಪೆನಿಯ ಒಡತಿ. ಇವರ ಬ್ಯಾಂಕರ್‌ನ ಸಂಪತ್ತು 2021ರಲ್ಲಿ 963% ಹೆಚ್ಚಳವಾಗಿದೆ. ಕಿರಣ್ ಮಜುಂದಾರ್-ಶಾ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇವರ ಸಂಪತ್ತು  57,520 ಕೋಟಿ ರೂ.

Image credits: our own

3.ಕಿರಣ್ ಮಜುಂದಾರ್-ಶಾ

ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಈ ಸಂಸ್ಥೆಯನ್ನು ಕೇವಲ 10ಸಾವಿರ ರೂ  ಬಂಡವಾಳದ ಮೂಲಕ ಸ್ಥಾಪಿಸಿದರು. ಇವರ ಸಂಪತ್ತು 29,030 ಕೋಟಿ ರೂ.

Image credits: our own

4.ನಿಲಿಮಾ ಮೊಟಪರ್ತಿ

ದಿವೀಸ್ ಲ್ಯಾಬೋರೇಟರೀಸ್ ಸ್ಥಾಪಕ ಮುರಳಿ ಕೃಷ್ಣ ಪುತ್ರಿ. ಗ್ಲ್ಯಾಸ್ಗೋ ಯೂನಿವರ್ಸಿಟಿಯ  ಸ್ನಾತಕೋತ್ತರ ಪದವೀದರೆ. ಪ್ರಸ್ತುತ ದಿವೀಸ್‌ನ ವ್ಯವಹಾರ ನೋಡಿಕೊಳ್ಳುತ್ತಾರೆ. ಸಂಪತ್ತು 28,180 ಕೋಟಿ. ರೂ.

Image credits: our own

5.ರಾಧಾ ವೆಂಬು

ವೆಬ್-ಆಧಾರಿತ ಉಪಕರಣ&ಸಾಫ್ಟ್‌ವೇರ್ ರಚಿಸುವ ಚೆನ್ನೈ ಮೂಲದ ತಂತ್ರಜ್ಞಾನ ಕಂಪನಿಯಾದ ಜೊಹೊದ ಸಹ-ಸಂಸ್ಥಾಪಕರಲ್ಲಿ ಒಬ್ಬರು. 2021ರಲ್ಲಿ ಕಂಪನಿಯು 1ಶತಕೋಟಿ ಡಾಲರ್‌ ಆದಾಯ ದಾಟಿದ ಕಾರಣ ಇವರ ಸಂಪತ್ತು 26,260 ಕೋಟಿ ರೂ.

Image credits: our own

6.ಲೀನಾ ಗಾಂಧಿ ತಿವಾರಿ

ಯುಎಸ್‌ವಿ ಅಧ್ಯಕ್ಷೆ, ಅಜ್ಜ ವಿಠಲ್ ಬಾಲಕೃಷ್ಣ ಗಾಂಧಿ ಸ್ಥಾಪಿಸಿದ ಫಾರ್ಮಾ ಕಂಪನಿ ಹೊಂದಿದ್ದಾರೆ.  ಅಜ್ಜನ ಜೀವನಚರಿತ್ರೆ 'ಬಿಯಾಂಡ್ ಪೈಪ್ಸ್ ಅಂಡ್ ಡ್ರೀಮ್ಸ್' ಎಂಬ ಪುಸ್ತಕ ಬರೆದಿದ್ದಾರೆ.  ಸಂಪತ್ತು 24,280 ಕೋಟಿ ರೂ.

Image credits: our own

7.ಅನು ಅಗಾ

ಪತಿಯೊಂದಿಗೆ 1980 ರ ದಶಕದಲ್ಲಿ ಥರ್ಮಾಕ್ಸ್ ಎಂಬ ಕಂಪನಿಯಲ್ಲಿದ್ದರು. ಪತಿ ನಿಧನದ ನಂತರ 1996ರಲ್ಲಿ ಅದರ ಆಡಳಿತ ವಹಿಸಿಕೊಂಡರು. 2004ರಲ್ಲಿ ಮಗಳು ಮೆಹರ್ ಪುದುಮ್ಜೀಗೆ ಅಧಿಕಾರ ಬಿಟ್ಟುಕೊಟ್ಟರು. ಸಂಪತ್ತು 14,530ಕೋ.ರೂ.

Image credits: our own

8.ನೇಹಾ ನಾರ್ಖೆಡೆ

ಈಕೆ ಪುಣೆ ಹುಡುಗಿ ಕ್ಲೌಡ್, Confluent ಕಂಪನಿ ಸಹ ಸಂಸ್ಥಾಪಕಿ. 2021ರಲ್ಲಿ ಕಂಪೆನಿ ಬಹಳಷ್ಟು ಜನಪ್ರಿಯವಾಗಿ ನೇರವಾಗಿ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಸಂಪತ್ತು 13,380 ಕೋಟಿ ರೂ.

Image credits: our own

9.ವಂದನಾ ಲಾಲ್

ಡಾ ಲಾಲ್ ಪಾಥ್‌ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ. ಟಾಪ್ 10 ಪಟ್ಟಿಗೆ ಹೊಸ ಮಹಿಳೆ, ಇವರು ಫಾರ್ಮಾ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸೇರಿದ ಪಟ್ಟಿಯಲ್ಲಿ 4ನೇ ಮಹಿಳೆಯಾಗಿದ್ದಾರೆ. ಇವರ ಸಂಪತ್ತು 6,810 ಕೋಟಿ ರೂ. 

Image credits: our own

10.ರೇಣು ಮುಂಜಾಲ್

ದಿವಂಗತ ರಾಮನ್ ಮುಂಜಾಲ್ ಪತ್ನಿ. ಪತಿ ನಿಧನದ ಬಳಿಕ ಹೀರೋ ಫಿನ್‌ಕಾರ್ಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. BML ಮುಂಜಾಲ್ ವಿಶ್ವವಿದ್ಯಾಲಯದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರ ಸಂಪತ್ತು 6,620  ಕೋಟಿ ರೂ.
 

Image credits: our own

ಧೀರುಭಾಯ್ ಅಂಬಾನಿ ಪುಣ್ಯತಿಥಿ: ಭಾವುಕ ಬರಹದ ಮೂಲಕ ಮಾವನ ನೆನೆದ ಸೊಸೆ ಟೀನಾ ಅಂಬಾನಿ

ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ಹುಡುಗಿ ಈಗ ಕೋಟ್ಯಾಧಿಪತಿ

ಇಲ್ಲಿವೇ ನೋಡಿ ವಿಶ್ವದ 10 ಐಷಾರಾಮಿ ಮನೆಗಳು, ಅಂಬಾನಿಯ Antilia ಸ್ಥಾನವೆಷ್ಟು?

ಮುಕೇಶ್ ಅಂಬಾನಿ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?