ಕೃಷಿ ಕಾಯ್ದೆ ವಿರುದ್ಧ ಹರ್ಯಾಣ ರೈತರು ಭಾರೀ ಪ್ರತಿಭಟನೆ ನಡೆಸುತ್ತಿರುವುದು ಹರ್ಯಾಣದ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದಲ್ಲಿ ಒಡಕು?| ಹರ್ಯಾಣ ಡಿಸಿಎಂ ರಾಜೀನಾಮೆ ನನ್ನ ಕಿಸೆಯಲ್ಲಿ: ತಂದೆ ಅಜಯ್ ಚೌಟಾಲಾ
ಚಂಡೀಗಢ(ಫೆ.15): ಕೃಷಿ ಕಾಯ್ದೆ ವಿರುದ್ಧ ಹರ್ಯಾಣ ರೈತರು ಭಾರೀ ಪ್ರತಿಭಟನೆ ನಡೆಸುತ್ತಿರುವುದು ಹರ್ಯಾಣದ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದಲ್ಲಿ ಒಡಕು ಸೃಷ್ಟಿಸಿದೆ ಎಂಬ ವಾದಕ್ಕೆ ಈಗ ಪುಷ್ಟಿಸಿಕ್ಕಿದೆ.
‘ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ರಾಜೀನಾಮೆ ಪತ್ರ ನನ್ನ ಕಿಸೆಯಲ್ಲಿದೆ. ಅದರಿಂದ ಕೆಲಸ ಆಗುತ್ತದೆ ಎಂದರೆ ತಕ್ಷಣವೇ ಸಲ್ಲಿಸಲಾಗುತ್ತದೆ’ ಎಂದು ದುಷ್ಯಂತ್ ತಂದೆ ಅಜಯ್ ಚೌಟಾಲಾ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕತ್ವಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಟ್ರಾಕ್ಟರ್‌ನಲ್ಲಿ ಬಂದು ಹರ್ಯಾಣದ INLD ಶಾಸಕ ರಾಜೀನಾಮೆ!
‘ನನ್ನ ಸೋದರ ಅಭಯ್ ಚೌಟಾಲಾ ಇತ್ತೀಚೆಗೆ ಕೃಷಿ ಕಾಯ್ದೆ ವಿರೋಧಿಸಿ ರಾಜೀನಾಮೆ ನೀಡಿದರು. ಅದರಿಂದ ಯಾವುದೇ ಉದ್ದೇಶ ಸಫಲ ಆಗಲಿಲ್ಲ. ದುಷ್ಯಂತ್ ರಾಜೀನಾಮೆ ಕೂಡ ನನ್ನ ಕಿಸೆಯಲ್ಲಿದೆ. ಇದರಿಂದ ಉದ್ದೇಶ (ಕೃಷಿ ಕಾಯ್ದೆ ವಿಚಾರ) ಈಡೇರುತ್ತದೆ ಎಂದರೆ ತಕ್ಷಣವೇ ಸಲ್ಲಿಕೆ ಆಗಲಿದೆ’ ಎಂದು ಅಭಯ್ ಸೋದರರೂ ಆದ ಅಜಯ್ ನುಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 15, 2021, 12:31 PM IST