ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರ ಅಂದ್ರೆ ಒಂದು ಥರಾ ಭಯ ಆಗುತ್ತೆ. ಅದೇ ಕೋಣೆಯಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿ ಗಡಾಧ್ ಆಗಿ ನಿದ್ದೆ ಮಾಡಿದ್ದರೆ ಹೇಗಿರುತ್ತೆ? ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂಥ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

ಮುಂಬೈ (ಅಕ್ಟೋಬರ್ 18): ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರ ಅಂದ್ರೆ ಒಂದು ಥರಾ ಭಯ ಆಗುತ್ತೆ. ಅದೇ ಕೋಣೆಯಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿ ಗಡಾಧ್ ಆಗಿ ನಿದ್ದೆ ಮಾಡಿದ್ದರೆ ಹೇಗಿರುತ್ತೆ? ಅಲ್ಲಿ ನಡೆದಿರೋದು ಕೂಡ ಅದೇ.

ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂಥ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ)ನ ಆಸ್ಪತ್ರೆಯಲ್ಲಿ ಪ್ರಕರಣ ನಡೆದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವಿಡಿಯೋ ಭಾರೀ ಚರ್ಚೆಯನ್ನ ಹುಟ್ಟಿಹಾಕಿದೆ.

ಇನ್ನು ವಿಡಿಯೋದಲ್ಲಿ ಏನಿದೆ ಅಂತಾ ನೋಡೋದಾದರೆ.. ಮರಣೋತ್ತರ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಟೇಬಲ್‌ ಮೇಲೆ ಭರ್ಜರಿ ಎಣ್ಣೆ ಪಾರ್ಟಿ ಮಾಡಲಾಗಿದೆ. ಅದಾದ ಬಳಿಕ ವೈದ್ಯರು ಅಲ್ಲೇ ಇರುವ ಮಂಚದ ಮೇಲೆ ಮಲಗಿ ಹಾಯಾಗಿ ನಿದ್ರಿಸಿದ್ದಾರೆ. ಸದ್ಯ ಟೇಬಲ್ ಮೇಲೆ ಇರುವ ನಾನ್ ವೆಜ್ ಆಹಾರ ಮತ್ತು ಎಣ್ಣೆಯನ್ನ ನೋಡಿದ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಇನ್ನು ಪ್ರಕರಣದ ಮುಂದುವರಿದ ಭಾಗವಾಗಿ ಡಾ.ವೈಭವ್ ಅವಿನಾಶ್ ಮಾಸ್ಕೆ ಅವರು ಕರ್ತವ್ಯದಲ್ಲಿರುವಾಗ ಮದ್ಯ ಸೇವಿಸಿರುವುದು ಕಂಡುಬಂದ ನಂತರ ಶುಕ್ರವಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?

ಕಳೆದ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಅದೇ ವೈದ್ಯರಿಂದ ನಾಗರಿಕರೊಬ್ಬರು ಮರಣ ಪ್ರಮಾಣಪತ್ರ ಪಡೆಯಲು ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದರು. ಎಷ್ಟೇ ಕಾದರೂ ಮರಣೋತ್ತರ ಪರೀಕ್ಷೆಯ ಪ್ರಮಾಣಪತ್ರ ಸಿಗದೇ ಇರೋದ್ರಿಂದ ಆ ಕೊಠಡಿಯ ಒಳಗೆ ಎಂಟ್ರಿಕೊಟ್ಟಾಗ ಅಸಲಿ ವಿಚಾರ ಗೊತ್ತಾಗಿದೆ. ವೈದ್ಯರು ಕುಡಿದ ಮತ್ತಿನಲ್ಲಿರುವುದನ್ನು ಕಂಡುಬಂದಿದೆ. ಸದ್ಯ ಘಟನೆಯ ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗುವಂತೆ ಮಾಡಿದೆ.

ಘಟನೆಯು ಆಸ್ಪತ್ರೆ ಸಿಬ್ಬಂದಿಯಲ್ಲಿ ಜವಾಬ್ದಾರಿ ಮತ್ತು ಶಿಸ್ತಿನ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಧಿಕೃತ ವಿಚಾರಣೆಯ ಭಾಗವಾಗಿ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣದ ಬಗ್ಗೆ ಪಿಸಿಎಂಸಿ ವೈದ್ಯರು ಮತ್ತು ಸಿಬ್ಬಂದಿಯಿಂದ ವಿವರಣೆ ಕೇಳಿದೆ. ವೈದ್ಯಕೀಯ ನೀತಿಶಾಸ್ತ್ರ ಮತ್ತು ರೋಗಿಗಳ ಸುರಕ್ಷತೆಯ ಬಗ್ಗೆ ಆರೋಪಗಳ ಗಂಭೀರತೆ ಮತ್ತು ಕಳವಳಗಳು ವ್ಯಕ್ತವಾಗಿತ್ತು. ಹೀಗಾಗಿ ಶುಕ್ರವಾರ ತಕ್ಷಣದಿಂದ ಜಾರಿಗೆ ಬರುವಂತೆ ಡಾ.ಮಾಸ್ಕೆಯನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.

View post on Instagram