ಸೀತಾ ಮಾತೆಯನ್ನು ನಾಯಿ ನೆಕ್ಕಿದ ತುಪ್ಪಕ್ಕೆ ಹೋಲಿಸಿದ್ದ ದೃಷ್ಟಿ ಐಎಎಸ್ ಕೋಚಿಂಗ್ ಸೆಂಟರ್‌ನ ಫ್ರೊಫೆಸರ್ ಡಾ. ವಿಕಾಸ್ ದಿವ್ಯಕೃತಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಕೋಚಿಂಗ್ ಸೆಂಟರ್‌ಅನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗಿದೆ.
ನವದೆಹಲಿ (ನ.12): ಸೋಷಿಯಲ್ ಮೀಡಿಯಾದಲ್ಲಿ ದೃಷ್ಟಿ ಐಎಎಸ್ ಕೋಚಿಂಗ್ ಸೆಂಟರ್‌ನ ಮಾಲೀಕ ಹಾಗೂ ನಿರ್ದೇಶಕ ಡಾ. ವಿಕಾಸ್ ದಿವ್ಯಕೃತಿ ಅವರ ವೈರಲ್ ವಿಡಿಯೋಗೆ ಆಕ್ರೋಶ ವ್ಯಕ್ತವಾಗಿದೆ. 'ರಾಮಾಯಣದಲ್ಲಿ ಇಡೀ ಯುದ್ಧವೆಲ್ಲಾ ಮುಗಿದ ಬಳಿಕ ಸೀತೆಯ ಜೊತೆ ಮಾತನಾಡುವ ರಾಮ, ರಾವಣನ ಜೊತೆಗಿನ ಯುದ್ಧವನ್ನು ನಿನಗಾಗಿ ಮಾಡಿದ್ದಲ್ಲ ಎಂದು ರಾಮ ಹೇಳುತ್ತಾನೆ. ಯಾಕೆಂದರೆ, ಸೀತೆ ಈಗ ನಾಯಿ ನೆಕ್ಕಿದ ತುಪ್ಪ ಹಾಗೂ ತನಗೆ ಅರ್ಹಳಲ್ಲ ಎನ್ನುವ ಮಾತನ್ನಾಡುತ್ತಾನೆ' ಎಂದು ಪ್ರೊಫೆಸರ್ ಕೂಡ ಅಗಿರುವ ವಿಕಾಸ್ ದಿವ್ಯಕೃತಿ ಹೇಳಿರುವ ವಿಡಿಯೋ ಈಗ ವೈರಲ್ ಆಗಿದ್ದು, ಹಿಂದು ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ದೃಷ್ಟಿ ಐಎಎಸ್, ಐಎಎಸ್ ಆಕಾಂಕ್ಷಿಗಳಿಗೆ ಟ್ಯೂಷನ್ ನೀಡುವ ಸಂಸ್ಥೆಯಾಗಿದೆ. ಟ್ವಿಟರ್‌ನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಡಾ ದಿವ್ಯಕೃತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು ಮತ್ತು ಕೋಚಿಂಗ್ ಸಂಸ್ಥೆಯನ್ನು ನಿಷೇಧಿಸುವಂತೆ ಒತ್ತಾಯಿಸಿದರು.ಸಾಧ್ವಿ ಪ್ರಾಚಿಯಂತಹ ಹಿಂದುತ್ವವಾದಿ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಟ್ವಿಟ್ಟರ್ ಅಭಿಯಾನವು ಬಲಗೊಳ್ಳುತ್ತಿದ್ದಂತೆ, ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಬೆಂಬಲವಾಗಿ ನಿಂತಿದ್ದು ಇದರ ಪೂರ್ಣ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
ಇದರಲ್ಲಿ ದಿವ್ಯಕೃತಿ ಇದರ ವಿವರಣೆ ನೀಡುತ್ತಿರುವುದುನ್ನು ಕಾಣಬಹುದು, ' ಹಿಂದಿ ಚಿತ್ರದ ಕ್ಲೈಮಾಕ್ಸ್‌ಗಳಲ್ಲಿ ಹೀರೋ ಹಾಗೂ ಹೀರೋಯಿನ್ ಓಡಿ ಒಂದು ಮುಖಾಮುಖಿಯಾಗುತ್ತಾರೆ. ಇಲ್ಲಿಯೂ ಕೂಡ ಸೀತೆಯು, ತನ್ನ ಪತಿ ರಾಮ, ರಾವಣನನ್ನು ಸೋಲಿಸಿದ್ದಕ್ಕೆ ಖುಷಿಯಾಗಿದ್ದಳು. ಹಲವು ದಿನಗಳ ಬಳಿಕ ಮನೆಗೆ ಹೋಗುವ ಸಂತಸ ಆಕೆಯಲ್ಲಿತ್ತು. ರಾಮನಿಗೂ ಕೂಡ ಸೀತೆಗೆ ಬಹಳಷ್ಟು ಸಂಭ್ರಮವಾಗಿದೆ ಎನ್ನುವುದು ತಿಳಿದಿತ್ತು. ಆದರೆ, ರಾಮ ಆಕೆಯನ್ನು ತಡೆದಿದ್ದ. ರಾಮ, ನಿಲ್ಲು ಸೀತೆ ಎಂದಿದ್ದ. ಆಗ ರಾಮ ಸೀತೆಗೆ ಏನನ್ನೋ ಹೇಳಿದ. ಅದನ್ನು ಹೇಳುವುದು ನನಗೆ ಬಹಳ ಕೆಟ್ಟದೆನಿಸುತ್ತದೆ. ಈ ಮಾತನ್ನು ಹೇಳುತ್ತಿದ್ದರೆ ನನ್ನ ನಾಲಿಗೆ ಉದುರಿದಂತೆ ಅನಿಸುತ್ತದೆ. ಆದರೆ, ನಾನು ಅದನ್ನು ಇಲ್ಲಿ ಹೇಳಲೇಬೇಕಾಗಿದೆ. ನಾನೇನು ಮಾಡಲು ಸಾಧ್ಯ ಎಂದು ದಿವ್ಯಕೃತಿ ಮಾತನಾಡಿದ್ದಾರೆ.
ವಿವಾದದ ಸುತ್ತ ಆದಿಪುರುಷ್ ಸಿನಿಮಾ!
ಆ ಬಳಿಕ ಮಾತು ಮುಂದುವರಿಸುವ ದಿವ್ಯಕೃತಿ, 'ಸೀತೆಗೋಸ್ಕರ ನಾನು ಈ ಯುದ್ಧವನ್ನು ಮಾಡಿದ್ದಲ್ಲ ಎಂದು ರಾಮನು ಸೀತೆಗೆ ಹೇಳಿದ್ದ. ನಾನು ವಂಶಕ್ಕಾಗಿ ಮಾಡಿದ ಯುದ್ಧವಿದು ಎನ್ನುತ್ತಾನೆ. ನಾಯಿಯು ತುಪ್ಪವನ್ನು ನೆಕ್ಕಿದಾಗ, ಆ ತುಪ್ಪವನ್ನು ಯಾರೂ ತಿನ್ನೋದಿಲ್ಲ. ಹಾಗಾಗಿ ಈಗ ನೀನು ಕೂಡ ನನಗೆ ಅರ್ಹಳಲ್ಲ ಎನ್ನುತ್ತಾನೆ' ಎಂದು ದಿವ್ಯಕೃತಿ ಹೇಳುತ್ತಾರೆ.
ತಾವು ಹೇಳಿರುವ ಮಾತುಗಳು ವಿವಾದಕ್ಕೀಡಾದ ಬೆನ್ನಲ್ಲಿಯೇ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಡಾ.ದಿವ್ಯಕೃತಿ, ನಾನು ವಿಡಿಯೋದಲ್ಲಿ ಏನನ್ನು ಹೇಳಿದ್ದೇನೋ ಅದೆಲ್ಲದಕ್ಕೂ ದಾಖಲೆಗಳಿವೆ ಎಂದಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ಪುರುಷೋತ್ತಮ್ ಅಗರ್ವಾಲ್ ಬರೆದಿರುವ ಪುಸ್ತಕದ ಮಾಹಿತಿಯನ್ನು ನೀಡಿದರು. 'ಅವರು ಯುಪಿಎಸ್‌ಸಿ ಸದಸ್ಯರಾಗಿದ್ದಾರೆ ಅಂದರೆ ನಾವು ನಮ್ಮ ಅಧ್ಯಯನದಲ್ಲಿ ಅವರನ್ನು ಉಲ್ಲೇಖ ಮಾಡಬಹುದು. ನಾನು ಸಂಸ್ಕೃತದಲ್ಲಿ ರಾಮಾಯಣ ಅಥವಾ ಮಹಾಭಾರತವನ್ನು ಓದಿಲ್ಲ. ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸುವ ಈ ಪುಸ್ತಕದಲ್ಲಿ ನಾನು ಇದನ್ನು ಗಮನಿಸಿದ್ದೇವೆ" ಎಂದು ಡಾ. ದಿವ್ಯಕೃತಿ ಹೇಳಿದ್ದಾರೆ.
ಸಾಲಿಗ್ರಾಮದ ಶಿಲೆ ಸಿಗುವ ಗಂಡಕಿ ನದಿಯಿಂದ ಅಯೋಧ್ಯೆಗೆ ಬರಲಿದೆ ರಾಮನ ವಿಗ್ರಹ?
ನಾನು ಸಾಕ್ಷ್ಯಗಳಿಲ್ಲದೆ ಏನನ್ನು ಮಾತನಾಡುವುದಿಲ್ಲ. ನಾನು ಟ್ವಿಟರ್‌ನಲ್ಲಿ ಕಡಿಮೆ ಸಮಯ ಕಳೆಯುತ್ತೇನೆ ಹಾಗೂ ಅಧ್ಯಯನದಲ್ಲಿ ಹೆಚ್ಚಿನ ಸಮಯ ಹಾಕುತ್ತೇನೆ. ಹಾಗಾಗಿ ನಾನು ಹೆಚ್ಚು ಆರಾಮವಾಗಿರುತ್ತೇನೆ ಎಂದು ಹೇಳುವ ಡಾ.ದಿವ್ಯಕೃತಿ, ತಾನು ಪಡೆದುಕೊಂಡಿರುವ ಮಾಹಿತಿ ಹಾಗೂ ಆ ವಿಚಾರ ಯಾವ ಪುಟದಲ್ಲಿದೆ ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ. "ಈಗ ನಾವು ಏನು ಮಾಡುತ್ತೇವೆ ಎಂಬುದು ಪ್ರಶ್ನೆಯಾಗಿದೆ ಏಕೆಂದರೆ ಯುಪಿಎಸ್‌ಸಿಯಲ್ಲಿ ತುಳಸಿದಾಸರ ಸಂದರ್ಭದಲ್ಲಿ ಸ್ತ್ರೀವಾದವನ್ನು ಮೌಲ್ಯಮಾಪನ ಮಾಡುವಂತಹ ಪ್ರಶ್ನೆಗಳು ಬರುತ್ತವೆ. ಮತ್ತು ತುಳಸಿದಾಸರು ತಮ್ಮ ರಾಮಚರಿತಮಾನಸ್‌ನಲ್ಲಿ ಆ ಭಾಗಗಳನ್ನು ಬಿಟ್ಟುಬಿಟ್ಟರು ಮತ್ತು ಪ್ರಗತಿಪರರು ಎಂದು ಸಾಬೀತುಪಡಿಸಿದರು," ಡಾ.ದಿವ್ಯಕೃತಿ ಹೇಳಿದ್ದಾರೆ.
'ಇದು ರಾಮ ಹೇಳಿದಲ್ಲ. ಬರಹಗಾರ ರಾಮನ ಮೂಲಕ ಇದನ್ನು ಹೇಳಿದ್ದಾರೆ. ಬರಹಗಾರರು ತಮ್ಮ ಪದಗಳನ್ನು ತಮ್ಮ ಪಾತ್ರಗಳ ಬಾಯಿಯಿಂದ ಹೇಳಿಸುತ್ತಾರೆ. ಆದರೆ ತುಳಸಿದಾಸರು ಆಧುನಿಕರಾಗಿದ್ದರು, ಅವರು ಸ್ತ್ರೀವಾದದ ಆಗಮನವನ್ನು ಕಂಡು ಅದನ್ನು ತಮ್ಮ ಪುಸ್ತಕದಲ್ಲಿ ಸೇರಿಸಲಿಲ್ಲ," ಡಾ ದಿವ್ಯಕೃತಿ ತರಗತಿಯ ಪೂರ್ಣ ವಿಡಿಯೋದಲ್ಲಿ ಹೇಳುವುದನ್ನು ಕಾಣಬಹುದು.
