Asianet Suvarna News

ರಾಷ್ಟ್ರೀಯತೆಯ ಹರಿಕಾರ ಶ್ಯಾಮ್‌ ಪ್ರಸಾದ್ ಮುಖರ್ಜಿ!

* ‘ಒಂದು ಸಂವಿಧಾನ, ಒಬ್ಬ ಪ್ರಧಾನಿ ಮತ್ತು ಒಂದು ಲಾಂಛನ’ ಮೋದಿಯಿಂದ ಸಾಕಾರ

* ರಾಷ್ಟ್ರೀಯತೆಯ ಹರಿಕಾರ ಶ್ಯಾಮ್‌ಪ್ರಸಾದ್‌ ಮುಖರ್ಜಿ: ಇಂದು ಡಾ| ಮುಖರ್ಜಿ ಪುಣ್ಯತಿಥಿ

* ಭಾರತದಲ್ಲಿ ಸ್ವಾತಂತ್ರ್ಯಾನಂತರ ರಾಷ್ಟ್ರೀಯತೆಯ ಕಲ್ಪನೆಯನ್ನು ಉತ್ತೇಜಿಸಿದವರು ಶ್ಯಾಮ್‌ಪ್ರಸಾದ್‌ ಮುಖರ್ಜಿ

Dr Mukherjee A Torch Bearer of Indian Nationalism By BJP President JP Nadda pod
Author
Bangalore, First Published Jun 23, 2021, 8:28 AM IST
  • Facebook
  • Twitter
  • Whatsapp

ಜೆ.ಪಿ.ನಡ್ಡಾ: ಬಿಜೆಪಿ ರಾಷ್ಟ್ರಾಧ್ಯಕ್ಷ

ಭಾರತದಲ್ಲಿ ಸ್ವಾತಂತ್ರ್ಯಾನಂತರ ರಾಷ್ಟ್ರೀಯತೆಯ ಕಲ್ಪನೆಯನ್ನು ಉತ್ತೇಜಿಸಿದವರು, ದೇಶದ ಏಕೀಕರಣಕ್ಕಾಗಿ ಸತತ ದುಡಿದವರು ಮತ್ತು ದೇಶದಲ್ಲಿ ಬಲಿಷ್ಠವಾದ ರಾಜಕೀಯ ಪರಾರ‍ಯಯದ ಬೀಜವನ್ನು ಬಿತ್ತಿದವರೆಂದರೆ ಮೊದಲು ನೆನಪಿಗೆ ಬರುವುದೇ ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿ. ಸ್ವಾತಂತ್ರ್ಯಾನಂತರ ಮುಖರ್ಜಿ ಹೆಚ್ಚುಕಾಲ ಬದುಕುಳಿಯದಿದ್ದರೂ ಅವರ ಸಿದ್ಧಾಂತ ಮತ್ತು ಹೋರಾಟಗಳು ಭಾರತದ ರಾಜಕೀಯ ಇತಿಹಾಸದಲ್ಲಿ ಹಾಸುಹೊಕ್ಕಾಗಿವೆ.

ಸೈದ್ಧಾಂತಿಕ ಬದ್ಧತೆ

ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಎಲ್ಲರಿಗಿಂತ ಮೊದಲೇ ಅರ್ಥೈಸಿಕೊಂಡ ಮುಖರ್ಜಿ ಅದರ ವಿಮೋಚನೆಗಾಗಿ ಬಲವಾಗಿ ಧ್ವನಿ ಎತ್ತಿದ್ದರು. ಬಂಗಾಳ ವಿಭಜನೆ ಸಂದರ್ಭದಲ್ಲೂ ಭಾರತದ ಹಕ್ಕು ಮತ್ತು ಹಿತಾಸಕ್ತಿ ಪರ ಯಶಸ್ವಿ ಹೋರಾಟ ನಡೆಸಿದ್ದರು. ಸ್ವಾತಂತ್ರ್ಯಾನಂತರದಲ್ಲೂ ಭಾರತೀಯರ ಮೇಲೆ ಆಮದು ಸಿದ್ಧಾಂತ ಮತ್ತು ತತ್ವಗಳನ್ನು ಹೇರುತ್ತಿದ್ದ ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸುವುದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ, ಭಾರತೀಯ ಮತ್ತು ಭಾರತೀಯತೆ ಎಂಬ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳನ್ನು ಉತ್ತೇಜಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಸ್ವಾತಂತ್ರ್ಯಾನಂತರದ ನೆಹರು ನೇತೃತ್ವದ ಸರ್ಕಾರದಲ್ಲಿ ಡಾ.ಮುಖರ್ಜಿ ಭಾರತದ ಮೊಟ್ಟಮೊದಲ ಕೈಗಾರಿಕೆ ಮತ್ತು ಪೂರೈಕೆ ಸಚಿವರಾಗಿದ್ದರು. ಆದರೆ ನೆಹರು ಲಿಯಾಖತ್‌ ಒಪ್ಪಂದದಲ್ಲಿ ಕಾಂಗ್ರೆಸ್‌ ಹಿಂದೂಗಳ ಹಿತಾಸಕ್ತಿಯನ್ನು ಕಡೆಗಣಿಸಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರು ಸೈದ್ಧಾಂತಿಕ ಬದ್ಧತೆಯ ಜತೆ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ನೆಹರು ಸಂಪುಟಕ್ಕೆ ಅವರ ರಾಜೀನಾಮೆಯು ದೇಶದಲ್ಲಿ ರಾಜಕೀಯ ಪರಾರ‍ಯಯ ಹೊರಹೊಮ್ಮುವಿಕೆಯ ಮುನ್ಸೂಚನೆಯಾಗಿತ್ತು.

ಸಿಎಂಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಮಹತ್ವದ ಸೂಚನೆ..!

ಜನಸಂಘದ ರಚನೆ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕಾಂಗ್ರೆಸ್‌ ನಾಯಕತ್ವದಲ್ಲಿ ಎಲ್ಲ ರಾಜಕೀಯ ನಾಯಕರು ಮತ್ತು ಜನರು ಒಗ್ಗೂಡಿದ್ದರು. ಆದರೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ಗೆ ಪರಾರ‍ಯಯವಾಗಿ ರಾಜಕೀಯ ನಿರ್ವಾತವನ್ನು ತುಂಬಬಲ್ಲ ಪಕ್ಷದ ಬಗ್ಗೆ ಚರ್ಚೆ ಆರಂಭವಾಯಿತು. ರಾಜಕೀಯ ಓಲೈಕೆಗೆ ಪ್ರತಿಸ್ಪರ್ಧೆ ಒಡ್ಡುವ, ಸಾಂಸ್ಕೃತಿಕ ರಾಷ್ಟ್ರೀಯತೆಯ ಮೂಲಕ ರಾಷ್ಟ್ರೀಯ ಏಕೀಕರಣ ಮಾಡಬಲ್ಲ ರಾಜಕೀಯ ಸಿದ್ಧಾಂತವನ್ನು ಭಾರತ ಕುತೂಹಲದಿಂದ ಹುಡುಕುತ್ತಿತ್ತು. ಈ ಚರ್ಚೆಯ ಧ್ವಜಾರೋಹಣಕಾರರಾಗಿ ಹೊರಹೊಮ್ಮಿದ ಡಾ.ಮುಖರ್ಜಿ ಅಂತಿಮವಾಗಿ ಜನಸಂಘದ ರಚನೆಗೆ ಕಾರಣೀಕರ್ತರಾದರು.

ಇವರ ಸತತ ಪ್ರಯತ್ನದ ಫಲವಾಗಿ ಅಕ್ಟೋಬರ್‌ 21, 1951ರಂದು ಜನಸಂಘ ರಚನೆಯಾಯಿತು. ಅದರಲ್ಲಿ ರಾಷ್ಟ್ರೀಯತೆ ಮತ್ತು ಭಾರತೀಯತೆಯ ಗುಣಗಳನ್ನು ಬಿತ್ತಲಾಯಿತು. ಜನಸಂಘ ಅಥವಾ ಬಿಜೆಪಿ ಈ ಹಂತವನ್ನು ತಲುಪಲು ಕಳೆದ ಕೆಲವು ದಶಕಗಳಲ್ಲಿ ನಾವು ಹಲವು ಮೈಲುಗಲ್ಲುಗಳನ್ನು ದಾಟಿದ್ದೇವೆ, ಅನೇಕ ಯುದ್ಧಗಳನ್ನು ಮಾಡಿದ್ದೇವೆ, ಕ್ರಾಂತಿ ನಡೆಸಿದ್ದೇವೆ.

ಕೊರೋನಾ ನಿರ್ವಹಣೆಯಲ್ಲಿ ವಿಫಲ: ಮೋದಿ ತಿವಿದ ಸೋನಿಯಾಗೆ, ಬಿಜೆಪಿ ಅಧ್ಯಕ್ಷನ ಗುದ್ದು!

3 ಸೀಟು ಗೆದ್ದಿದ್ದ ಜನಸಂಘ!

1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನಸಂಘ ಕೇವಲ 3 ಸೀಟುಗಳನ್ನು ಗೆಲ್ಲುವಲ್ಲಿ ಶಕ್ತವಾಗಿತ್ತು. ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿ ಕೋಲ್ಕತ್ತಾದಿಂದ ಸ್ಪರ್ಧಿಸಿ ಸಂಸತ್‌ ಮೆಟ್ಟಿಲು ಹತ್ತಿದ್ದರು. ಅವರ ಸ್ಪಷ್ಟಯೋಚನೆ, ಸೈದ್ಧಾಂತಿಕ ಬದ್ಧತೆ, ದೂರದೃಷ್ಟಿಯನ್ನು ಕಂಡ ವಿರೋಧ ಪಕ್ಷಗಳು ಒಗ್ಗೂಡಿ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದವು. ಪ್ರತಿಪಕ್ಷ ನಾಯಕರಾಗಿ ಮುಖರ್ಜಿ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರು. ಮತ್ತು ಪ್ರತಿಪಕ್ಷದ ಅತ್ಯಂತ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದರು.

ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್‌ 370 ಅಡಿ ವಿಶೇಷ ಸ್ಥಾನಮಾನ ನೀಡುವುದು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅತಿ ದೊಡ್ಡ ತೊಡಕು ಎಂದು ಅವರು ಭಾವಿಸಿದ್ದರು. ಇದರ ವಿರುದ್ಧ ಸಂಸತ್‌ನಲ್ಲಿ ಹಲವು ಸಂದರ್ಭಗಳಲ್ಲಿ ಧ್ವನಿ ಎತ್ತಿದ್ದರು. ಜೂ.26, 1952ರಂದು ಜಮ್ಮು-ಕಾಶ್ಮೀರದ ವಿಷಯವಾಗಿ ಚರ್ಚೆಯಲ್ಲಿ ಭಾಗಿಯಾಗಿದ್ದ ಅವರು, ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ಭಾರತದಲ್ಲಿ ಒಂದು ರಾಜ್ಯದ ನಾಗರಿಕರ ಹಕ್ಕುಗಳು ಮತ್ತು ಸವಲತ್ತುಗಳು ಬೇರೆ ಯಾವುದೇ ರಾಜ್ಯಗಳಿಗಿಂತ ಭಿನ್ನವಾಗಿರಲು ಹೇಗೆ ಸಾಧ್ಯ? ಇದು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಡ್ಡಿ ಎಂದಿದ್ದರು. ಹಾಗೆಯೇ ಜಮ್ಮು-ಕಾಶ್ಮೀರ ಪ್ರವೇಶಕ್ಕೆ ಅನುಮತಿ ನೀಡುವ ವ್ಯವಸ್ಥೆಯನ್ನೂ ವಿರೋಧಿಸಿದ್ದರು.

ಮುಖರ್ಜಿ ನಿಗೂಢ ಸಾವು

ಜಮ್ಮುವಿಗೆ ಪ್ರವೇಶಿಸಿದಾಗ ಡಾ.ಮುಖರ್ಜಿ ಅವರನ್ನು ಬಂಧಿಸಲಾಗಿತ್ತು. ಇದರಿಂದ ಭಾರತದಾದ್ಯಂತ ಬೃಹತ್‌ ಪ್ರತಿಭಟನೆ ನಡೆದವು. ಬಂಧನದ 40 ದಿನಗಳ ನಂತರ ಜೂ.23, 1953ರಂದು ಭಾರತ ಮಾತೆಯ ಪುತ್ರ ಮುಖರ್ಜಿ ಜಮ್ಮುವಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಗೂಢವಾಗಿ ಮೃತಪಟ್ಟರು. ಅವರ ಸಾವಿನ ಬಗ್ಗೆ ಅನೇಕ ಉತ್ತರವಿಲ್ಲದ ಪ್ರಶ್ನೆಗಳು ಹುಟ್ಟಿಕೊಂಡವು. ಆದರೆ ಅಂದಿನ ನೆಹರು ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಂಡಿತು. ಮುಖರ್ಜಿ ಅವರ ತಾಯಿ ಯೋಗ್ಮಯಾ ದೇವಿ ಅವರು ಪಂಡಿತ್‌ ನೆಹರು ಅವರಿಗೆ ಪತ್ರ ಬರೆದು, ತಮ್ಮ ಮಗನ ನಿಗೂಢ ಸಾವಿನ ಬಗ್ಗೆ ತನಿಖೆಗೆ ಕೋರಿದ್ದರು. ಆ ಮನವಿಯನ್ನೂ ತಿರಸ್ಕರಿಸಲಾಯಿತು. ಮುಖರ್ಜಿ ಅವರ ಬಂಧನ ಮತ್ತು ಸಾವಿಗೆ ಸಂಬಂಧಿಸಿದ ಎಲ್ಲ ರಹಸ್ಯಗಳು ಇಂದಿಗೂ ಬಗೆಹರಿಯದೇ ಉಳಿದಿವೆ.

ಮುಖರ್ಜಿ ಕನಸು ಸಾಕಾರ

‘ಭಾರತ ಎರಡು ಸಂವಿಧಾನ, ಇಬ್ಬರು ಪ್ರಧಾನಿ ಮತ್ತು ಎರಡು ರಾಷ್ಟ್ರೀಯ ಲಾಂಛನವನ್ನು ಹೊಂದಬಾರದು’ ಎಂದು ಮುಖರ್ಜಿ ಯಾವಾಗಲೂ ಹೇಳುತ್ತಿದ್ದರು. ಈ ಘೋಷಣೆ ಮೊದಲು ಜನಸಂಘ, ನಂತರ ಭಾರತೀಯ ಜನತಾ ಪಕ್ಷದ ನಿರ್ಣಯ ಮತ್ತು ಮಾರ್ಗದರ್ಶಿ ಸೂತ್ರವಾಯಿತು. ಮುಖರ್ಜಿ ಅವರ ಈ ಕನಸು ಎಂದಾದರೂ ಈಡೇರುತ್ತದೆಯೇ ಎಂಬ ಪ್ರಶ್ನೆ ಭಾರತೀಯರಲ್ಲಿ ಹಾಗೆಯೇ ದಶಕಗಳಿಂದ ಉಳಿದುಕೊಂಡಿತ್ತು.

'ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?'

ಇದು ಸೈದ್ಧಾಂತಿಕ ಯುದ್ಧವಾಗಿತ್ತು. ಒಂದು ಕಡೆ ಕಾಂಗ್ರೆಸ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಯಾವಾಗಲೂ ರಾಜಕೀಯ ಓಲೈಕೆ ಮಾಡುತ್ತಿದ್ದವು. ಇನ್ನೊಂದು ಕಡೆ ಬಿಜೆಪಿ ಆರ್ಟಿಕಲ್‌ 370 ರದ್ದತಿಗೆ ಬದ್ಧವಾಗಿತ್ತು. ಜನಸಂಘವಾಗಿರಲಿ, ಬಿಜೆಪಿಯಾಗಿರಲಿ ಅದರ ಸಿದ್ಧಾಂತದಲ್ಲಿ ಹಾಗೂ ಬದ್ಧತೆಯಲ್ಲಿ ಬದಲಾವಣೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿ, ಶ್ರದ್ಧೆ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಯೋಜನೆ, ದಕ್ಷ ಕಾರ‍್ಯತಂತ್ರದ ಫಲವಾಗಿ ಆಗಸ್ಟ್‌ 2019ರಲ್ಲಿ ಭಾರತವು ಆರ್ಟಿಕಲ್‌ 370ಯನ್ನು ಶಾಶ್ವತವಾಗಿ ರದ್ದುಪಡಿಸುವಲ್ಲಿ ಸಫಲವಾಯಿತು. ಈ ಮೂಲಕ ಮುಖರ್ಜಿ ಅವರ ‘ಒಂದು ಸಂವಿಧಾನ, ಒಬ್ಬ ಪ್ರಧಾನಿ ಮತ್ತು ಒಂದು ಲಾಂಛನ’ ಕನಸನ್ನು ಪ್ರಧಾನಿ ಮೋದಿ ಈಡೇರಿಸಿದರು.

ಆರ್ಟಿಕಲ್‌ 370 ರದ್ದುಪಡಿಸಿ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಏಕೀಕರಿಸುವ ಮೂಲಕ ಭಾರತವನ್ನು ಒಂದು ಬಲಿಷ್ಠ ಮತ್ತು ಏಕೀಕೃತ ರಾಷ್ಟ್ರವಾಗಿ ನೋಡುವ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರಿಂದ ಮುಖರ್ಜಿ ಅವರ ತ್ಯಾಗ ವ್ಯರ್ಥವಾಗಲಿಲ್ಲ. ಮುಖರ್ಜಿ ಭಾರತಾಂಬೆಯ ನಿಜವಾದ ಪುತ್ರನೆಂದು ಎಂದೆಂದಿಗೂ ನೆನಪಿಸಿಕೊಳ್ಳುತ್ತೇವೆ. ಅವರು ಸ್ಥಾಪಿಸಿರುವ ರಾಜಕೀಯ ಪಕ್ಷ ತನ್ನ ಸಿದ್ಧಾಂತಕ್ಕೆ ಬದ್ಧವಾಗಿದೆ. ಏಕೀಕೃತ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದಣಿವರಿಯದೆ ಶ್ರಮಿಸುತ್ತಿದೆ. ಉದಾತ್ತ ಕಾರಣಗಳಿಗಾಗಿ ಹುತಾತ್ಮರಾದ ಮಣ್ಣಿನ ಮಗನಿಗೆ ನಾನು ಮನಸಾರೆ ಗೌರವಾರ್ಪಣೆ ಮಾಡುತ್ತೇನೆ.

Follow Us:
Download App:
  • android
  • ios