ಬೆಂಗಳೂರು[ಜ.27]: ಡಾ.ಬಿ. ಆರ್. ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಭಾನುವಾರದಂದು RSS ಕುರಿತಾಗಿ ನೀಡಿರುವ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ.

ನೀವು ಪಾಕಿಸ್ತಾನದ ನನ್ನ ವಿಡಿಯೋ ನೋಡಿರಬಹುದು. ಅಲ್ಲೂ ನಾನು RSS ಭಾರತದ ಉಗ್ರವಾದಿ ಸಂಘಟನೆ, ಅದನ್ನು ಬ್ಯಾನ್ ಮಾಡಿ ಎಂದಿದ್ದರೆ. RSS ಉಗ್ರ ಸಂಘಟನೆ ಎನ್ನಲು ನನ್ನ ಬಳಿ ಸಾಕ್ಷಿ ಇದೆ. ಪ್ರಧಾನಿ ಮೋದಿ ಪಕ್ಕದಲ್ಲಿ ಕುಳಿತ ಸಾಧ್ವಿ ಒಬ್ಬರು 'ಭಾರತೀಯ ಸೇನೆ ಬಳಿ ಸುಡುಮದ್ದು ಮುಗಿದಾಗ, ಗನ್ ಇಲ್ಲದಾಗ, ವಿಸ್ಫೋಟಕ ಸಾಮಗ್ರಿ ಮುಗಿದಾಗ ಅವೆಲ್ಲವನ್ನೂ RSS ಒದಗಿಸಿತ್ತು' ಎಂದಿದ್ದರು. ಹೀಗಾಗಿ RSS ಬ್ಯಾನ್ ಮಾಡಬೇಕು ಎಂದಿದ್ದಾರೆ.

ಇದೇ ವೇಳೆ ಸವಾಲೊಂದನ್ನು ಎಸೆದ ರಾಜರತ್ನ ಅಂಬೇಡ್ಕರ್ 'RSS ಬಳಿ ಇಷ್ಟು ಪ್ರಮಾಣದ ವಿಸ್ಫೋಟಕ ಸಾಮಗ್ರ ಎಲ್ಲಿಂದ ಬಂತು? ಇಷ್ಟು ಗನ್ ಎಲ್ಲಿಂದ ಬಂತು? ದೇಶದ ಪ್ರಧಾನಿಯ ಪಕ್ಕದಲ್ಲೇ ಕುಳಿತು ಈ ಸಾದರ್ದವಿ ಇಂತಹ ಹೇಳಿಕೆ ನೀಡಿದ್ದಾರೆ. ಯಾವುದಾದರೂ ಮನೆಯಲ್ಲಿ ವಿಸ್ಫಟೊಕ, ಸುಡುಮದ್ದು ಸಿಕ್ಕರೆ, ಆ ಮನೆಯ ಹುಡುಗರನ್ನು ಉಗ್ರರೆಂದು ಕರೆಯುವುದಿಲ್ಲವೇ? ಇಷ್ಟು ಪ್ರಮಾಣದ ವಿಸ್ಫೋಟಕ ಇಟ್ಟುಕೊಂಡಿರುವ ಸಂಘಟನೆಯೊಂದು ಉಗ್ರ ಸಂಘಟನೆಯಾಗುವುದಿಲ್ಲವೇ? ಸಂಘಟನೆಯ ಕಾರ್ಯಕರ್ತರು ಇಂದು ಉಗ್ರ ಚಟುವಟಿಕೆಯಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಇಂತಹ ಸಂಘಟನೆಯನ್ನು ವಿಶ್ವ ಮಟ್ಟದಲ್ಲಿ ಬ್ಯಾನ್ ಮಾಡಬೇಕು' ಎಂದಿದ್ದಾರೆ.