ಆರ್‌ಎಸ್‌ಎಸ್‌ ದಲಿತ ವಿರೋಧಿ ನಿಲುವನ್ನು ಹೊಂದಿದೆ ಎನ್ನುವ ಆರೋಪಗಳ ನಡುವೆಯೇ 85 ವರ್ಷಗಳ ಹಿಂದೆ ಅಂದರೆ 1940ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಮಹಾರಾಷ್ಟ್ರದ ಆರ್‌ಎಸ್‌ಎಸ್‌ನ ಶಾಖಾ ಕಚೇರಿಗೆ ಭೇಟಿ ನೀಡಿದ್ದರು.

ನವದೆಹಲಿ (ಜ.03): ಆರ್‌ಎಸ್‌ಎಸ್‌ ದಲಿತ ವಿರೋಧಿ ನಿಲುವನ್ನು ಹೊಂದಿದೆ ಎನ್ನುವ ಆರೋಪಗಳ ನಡುವೆಯೇ ‘85 ವರ್ಷಗಳ ಹಿಂದೆ ಅಂದರೆ 1940ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಮಹಾರಾಷ್ಟ್ರದ ಆರ್‌ಎಸ್‌ಎಸ್‌ನ ಶಾಖಾ ಕಚೇರಿಗೆ ಭೇಟಿ ನೀಡಿದ್ದರು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧ್ಯಮ ವಿಭಾಗ ಹೇಳಿದೆ. ಆರ್‌ಎಸ್‌ಎಸ್‌ನ ಸಂವಹನ ವಿಭಾಗವಾದ ವಿಶ್ವ ಸಂವಾದ ಕೇಂದ್ರದ ವಿದರ್ಭ ಪ್ರಾಂತ ಈ ಬಗ್ಗೆ ಹೇಳಿಕೊಂಡಿದೆ.

‘ಆರ್‌ಎಸ್‌ಎಸ್‌ ದಲಿತ ವಿರೋಧಿ ಎನ್ನುವ ಆರೋಪವಿದೆ. ಡಾ.ಅಂಬೇಡ್ಕರ್‌ ಮತ್ತು ಆರ್‌ಎಸ್‌ಎಸ್‌ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆದರೆ ಅಂಬೇಡ್ಕರ್‌ ಅವರು ಸತಾರಾ ಜಿಲ್ಲೆಯ ಕರಾಡ್‌ನಲ್ಲಿ ಆರ್‌ಎಸ್‌ಎಸ್ ಶಾಖಾಗೆ 1940 ಜ.2ರಂದು ಭೇಟಿ ನೀಡಿದ್ದರು. ಅಲ್ಲಿ ಅವರು ಸಂಘದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ್ದರು. ನಮ್ಮ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಂಘವನ್ನು ಬಾಂಧವ್ಯದಿಂದ ನೋಡುತ್ತೇನೆ’ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ ಎಂದು 1940ರಲ್ಲಿ ‘ಮರಾಠಿ’ ಪತ್ರಿಕೆ ಪ್ರಕಟಿಸಿರುವ ವರದಿಯನ್ನೂ ಅದು ಉಲ್ಲೇಖಿಸಿದೆ.

ಸಂವಿಧಾನ ಆರ್‌ಎಸ್‌ಎಸ್‌ ಪುಸ್ತಕ ಅಲ್ಲ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಚಾಟಿ

ಗಾಂಧಿಗೂ ನಂಟಿತ್ತು: 1934ರಲ್ಲಿ ವಾರ್ಧದಲ್ಲಿ ನಡೆದ ಆರ್‌ಎಸ್‌ಎಸ್‌ ಶಿಬಿರದಲ್ಲಿ ಗಾಂಧೀಜಿ ಪಾಲ್ಗೊಂಡಿದ್ದರು. ಬೇರೆ ಬೇರೆ ಜಾತಿಯವರು ಪಾಲ್ಗೊಂಡಿದ್ದರು. ಅಲ್ಲಿ ಸ್ವಯಂಸೇವಕರ ಒಗ್ಗಟ್ಟು ಮೆಚ್ಚಿದ್ದರು. ಅಲ್ಲದೇ ಆರ್‌ಎಸ್‌ಎಸ್‌ ಸ್ಥಾಪಕ ಹೆಡ್ಗೆವಾರ್‌ ಅವರಿಗೆ ಅಸ್ಪ್ರಶ್ಯತೆ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಭಿನಂಧಿಸಿದ್ದರು ಎಂದಿದ್ದಾರೆ.

ಹಿಂದೂ ಧರ್ಮದ್ದಲ್ಲ: ದೇಶದಲ್ಲಿ ಹೆಚ್ಚುತ್ತಿರುವ ದೇವಸ್ಥಾನ-ಮಸೀದಿ ವಿವಾದಗಳಿಗೆ ಸಂಬಂಧಿಸಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಆಕ್ಷೇಪ ವ್ಯಕ್ತಪಡಿಸಿದಕ್ಕೆ ಧಾರ್ಮಿಕ ನಾಯಕ, ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಸೇರಿದಂತೆ ಹಲವು ಸಂತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಹನ್‌ ಭಾಗವತ್‌ ಅವರು ಸಂಘಟನೆಯೊಂದರ ಮುಖ್ಯಸ್ಥರಾಗಿರಬಹುದು. ಆದರೆ ಭಾಗವತ್‌ ಹೇಳಿದ್ದು ಕೇಳಲು ಅವರೇನು ಹಿಂದೂ ಧಾರ್ಮಿಕ ಮುಖಂಡರೇನಲ್ಲ ಎಂದು ಈ ತಿರುಗೇಟು ನೀಡಿದ್ದಾರೆ.

ಮಂಗಳಸೂತ್ರ ಕಸಿಯುತ್ತಿರುವ ಕೇಂದ್ರ ಸರ್ಕಾರ: ಕಾಂಗ್ರೆಸ್‌ ಕಿಡಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಭದ್ರಾಚಾರ್ಯ, ‘ಹಿಂದೂಗಳಿಗೆ ಅವರ ಐತಿಹಾಸಿಕ ಆಸ್ತಿ ಸಿಗಬೇಕಿದೆ. ನಮ್ಮ ಐತಿಹಾಸಿಕ ಆಸ್ತಿಗಳೇನಿವೆಯೋ ಅವೆಲ್ಲ ನಮ್ಮದೇ. ನಾವು ಹೇಗಾದರೂ ಮಾಡಿ ಅದನ್ನು ವಾಪಸ್‌ ಪಡೆಯಲೇಬೇಕು. ನಮ್ಮ ಐತಿಹಾಸಿಕ ಆಸ್ತಿಯನ್ನು ಬೇರಿನ್ಯಾರಿಗೂ ನೀಡಬಾರದು’ ಎಂದು ಹೇಳಿದ್ದಾರೆ. ಮತ್ತೊಂದೆಡೆ ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಮಹಾಂತ, ‘ತನಿಖೆಯಲ್ಲಿ ಹಿಂದೂಗಳನ್ನು ಓಡಿಸಿ ಮಸೀದಿ ನಿರ್ಮಿಸಲಾಗಿತ್ತು ಎಂದಾದಲ್ಲಿ ಅದನ್ನು ಹಿಂದೂಗಳಿಗೆ ಮರಳಿಸಬೇಕು. ಇಂಥ ಸ್ಥಳಗಳ ಗುರುತಿಸುವಿಕೆ ಮತ್ತು ಅದನ್ನು ಮರಳಿ ಪಡೆಯುವ ಪ್ರಯತ್ನ ಮಾಡಬೇಕು’ ಎಂದು ಹೇಳಿದ್ದಾರೆ.