ನವದೆಹಲಿ(ಸೆ.01):  ಕೊರೋನಾ ವೈರಸ್‌ನಂತ ಪ್ರಾಕೃತಿ ವಿಕೋಪಗಳು ಭಾರತದ ಆರ್ಥಿಕತೆ ಕುಸಿದಿದೆ ಅನ್ನೋ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿಕೆ ಇದೀಗ ಭಾರಿ ಚರ್ಚಗೆ ಗ್ರಾಸವಾಗಿದೆ. ಇದೀಗ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಿರ್ಮಿಸಿದ ದುರಂತಗಳಿಗೆ, ಆರ್ಥಿಕ ಯಡವಟ್ಟುಗಳಿಗೆ ದೇವರನ್ನು ದೂರಬೇಡಿ ಎಂದು ಚಿದಂಬರಂ ಹೇಳಿದ್ದಾರೆ.

ನಿರ್ಮಲಾಗೆ ಠಕ್ಕರ್, ಅರ್ಥವ್ಯವಸ್ಥೆ ಸುಧಾರಣೆಗೆ ರಾಹುಲ್ ಮಾಸ್ಟರ್!.

ಪ್ರಾಕೃತಿಕ ವಿಕೋಪಗಳನ್ನು, ಮಾನವ ನಿರ್ಮಿತ ವಿಕೋಪಗಳ ಜೊತೆ ಸೇರಿಸಿ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಅನ್ನೋ ಕಾರಣ ನೀಡಬೇಡಿ. ಇದರ ಬದಲು ನಿರ್ಮಲಾ ಸೀತಾರಾಮನ್ ದೇವರಿಗೆ ಧನ್ಯವಾದ ಹೇಳಬೇಕು. ರೈತರು ತಮ್ಮ ಕಾರ್ಯಚಟುವಟಿಕೆ ಆರಂಭಿಸಿದ್ದಾರೆ ಎಂದು ಚಿದಂಬರಂ ಹೇಳಿದ್ದಾರೆ. 

ಎಪ್ರಿಲ್‌ನಿಂದ ಜೂನ್ ತಿಂಗಳ ಭಾರತದ ಜಿಡಿಪಿ ಕುರಿತ ವರದಿ ಬಿಗಡೆಯಾಗಿದೆ. ಇದರಲ್ಲಿ ಶೇಕಡಾ 23.9 ರಷ್ಟು ಕುಸಿತ ಕಂಡಿದೆ. ಈ ವರದಿ ಬಳಿಕ ಮಾತನಾಡಿದ ಚಿದಂಬರಂ ಬಿಜೆಪಿ ಸರ್ಕಾರದ ಸಾಧನೆ ಜಿಡಿಪಿ ವರದಿ ಹೇಳುತ್ತಿದೆ ಎಂದಿದ್ದಾರೆ. ಆರ್ಥಿಕತೆಯನ್ನು ಪಾತಾಳಕ್ಕೆ ಕುಸಿಯಲು ಬಿಟ್ಟು ಇದೀಗ ದೇವರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ ಎಂದಿದ್ದಾರೆ.

ಇದೇ ವೇಳೆ ಕೇಂದ್ರ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಥಿಕತೆ ಚೇತರಿಕೆ ಕಾಣಲಿದೆ ಅನ್ನೋ ಮಾತು ಶುದ್ಧ ಸುಳ್ಳು ಎಂದಿದ್ದಾರೆ. ಈ ಹಿಂದೆ ಭಾರತದ ಆರ್ಥಿಕತೆ ವಿ ಆಕಾರದಲ್ಲಿ ಬೆಳವಣಿಗೆಯಾಗಲಿದೆ ಎಂದಿದ್ದರು. ಇದೀಗ ಜಿಡಿಪಿ ಶೇಕಡಾ 23.9 ರಷ್ಟು ಕುಸಿದಿದೆ ಎಂದಿದ್ದಾರೆ.

ಪ್ರಧಾನಿ ಹಳಿ ಆರ್ಥಿಕ ಸಲಹೆಗಾರ ಮಾತನಾಡಿ ಎಷ್ಟು ದಿನಗಳು ಉರುಳಿದೆಯೋ ಗೊತ್ತಿಲ್ಲ. ಈಗ ಆರ್ಥಿಕತೆ ಕುರಿತು ಬೊಗಳೆ ಬಿಡುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆತ್ನಿರ್ಭರ್ ಭಾರತ್ ಪ್ಯಾಕೇಜ್ ಬೋಗಸ್ ಎಂದಿದ್ದಾರೆ.