ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಟೆಕ್ಸಾಸ್‌ಗೆ ಭೇಟಿ ನೀಡಿದಾಗ ಲಕ್ಷಾಂತರ ಸಂಖ್ಯೆಯ ಜನರ ಅವರನ್ನು ಸ್ವಾಗತಿಸಿದ್ದರು. ಭಾರತ ಇದೀಗ ಅಂಥದ್ದೇ ಸ್ವಾಗತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನೀಡಲು ಭಾರತ ಸಜ್ಜಾಗಿದೆ.

ಅಮೆರಿಕ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡುವುದು ಇದೇ ಮೊದಲೇನಲ್ಲ. ಈ ಹಿಂದೆ ಅನೇಕ ಅಮೆರಿಕ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಈ ಹಿಂದಿನ ಅಮೆರಿಕ ಅಧ್ಯಕ್ಷರ ಭೇಟಿ ವೇಳೆ ಏನಾಗಿತ್ತು ಎಂ ಮಾಹಿತಿ ಇಲ್ಲಿದೆ.

3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!

ಡ್ವೈಟ್‌ ಡಿ. ಐಸೆನ್ಹೋವರ್‌, 1959

ಸ್ವಾತಂತ್ರ್ಯಾನಂತರ ಅಮೆರಿಕ-ರಷ್ಯಾದೊಂದಿಗೆ ಶೀತಲ ಸಮರ ಉಂಟಾಗಿತ್ತು. ಶೀತಲ ಸಮರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಲು ತೀರ್ಮಾನಿಸಿತ್ತು. ಭಾರತದ ಉಪಸ್ಥಿತಿ ನಡೆದ ಅಲಿಪ್ತ ಚಳವಳಿಯಲ್ಲಿ ಯಾವುದೇ ದೇಶದ ಪರ ವಹಿಸದಿರಲು ತೀರ್ಮಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಡ್ವೈಟ್‌ ಡಿ. ಐಸೆನ್ಹೋವರ್‌. ಭಾರತಕ್ಕೆ 1959ರಲ್ಲಿ ಭೇಟಿ ನೀಡಿದ ಡ್ವೈಟ್‌, ಭಾರತ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

ಬಳಿಕ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅವರೊಟ್ಟಿಗೆ ವಿಶ್ವವಿಖ್ಯಾತ ತಾಜ್‌ ಮಹಲ್‌ಗೆ ಭೇಟಿ ನೀಡಿದ್ದರು. ಭಾರತವು ಕಮ್ಯುನಿಸ್ಟ್‌ ಸೋವಿಯತ್‌ ಯೂನಿಯನ್‌ ಪರವಾಗಿದೆ ಎಂಬ ಭಾವಿಸಿದ ಬಹುತೇಕ ಅಮೆರಿಕನ್ನರ ಅಭಿಪ್ರಾಯವನ್ನು ಈ ಭೇಟಿ ಪರಿವರ್ತಿಸಿತ್ತು.

ಡ್ವೈಟ್‌ ಭೇಟಿ ವೇಳೆ ದೆಹಲಿಯ ಏರ್‌ಪೋರ್ಟ್‌ ಬಳಿ ‘21 ಗನ್‌ ಸೆಲ್ಯೂಟ್‌’ ಮುಖಾಂತರ ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಇದನ್ನು ಅಮೆರಿಕದ ಟೈಮ್‌ ಮ್ಯಾಗಜಿನ್‌ ವರದಿ ಮಾಡಿತ್ತು.

ಕಲಾವಿದನ ಕುಂಚದಲ್ಲಿ ಅರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್: ಗಮನ ಸೆಳೆದ ರೇಖಾಚಿತ್ರ

ರಿಚರ್ಡ್‌ ನಿಕ್ಸನ್‌, 1969

ನಿಕ್ಸನ್‌ ಅವರ ಭಾರತದ ಒಂದು ದಿನದ ಭೇಟಿಯು ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಉಲ್ಬಣಗೊಂಡಿದ್ದ ಭಿನ್ನಮತದ ನಿವಾರಣೆಯ ಉದ್ದೇಶ ಹೊಂದಿತ್ತು. ಭಾರತ ಶೀತಲ ಸಮರದ ಸಮಯದಲ್ಲಿ ತಟಸ್ಥ ಧೋರಣೆ ತಾಳಿದ್ದರಿಂದ ಮತ್ತು 1960ರ ಸಮಯದಲ್ಲಿ ಅಮೆರಿಕ, ಪಾಕಿಸ್ತಾನದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರಿಂದ ಎರಡು ದೇಶದ ನಾಯಕರ ನಡುವೆ ಕಂದಕ ಉಂಟಾಗಿತ್ತು. ಆದರೆ ನಿಕ್ಸನ್‌ ಭಾರತಕ್ಕೆ ಭೇಟಿಯಿಂದ ಈ ಭಿನ್ನಮತ ನಿವಾರಣೆಯಾಗಿದೆ ಎಂದೇ ಭಾವಿಸಲಾಗಿತ್ತು.

ಆದರೆ ನಂತರದ ಎರಡೇ ವರ್ಷದಲ್ಲಿ ಅಂದರೆ 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನಿಕ್ಸನ್‌ ಪಾಕಿಸ್ತಾನವನ್ನು ಬೆಂಬಲಿಸಿದ್ದರು. ಇದೇ ಸಂದರ್ಭದಲ್ಲಿ ಭಾರತ ತಟಸ್ಥ ನೀತಿಯನ್ನು ಬದಲಿಸಿ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತು.

ಜಿಮ್ಮಿ ಕಾರ್ಟರ್‌, 1978

1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಉಂಟಾಗಿದ್ದ ಭಾರತ ಮತ್ತು ಅಮೆರಿಕದ ನಡುವೆ ಉಲ್ಬಣಗೊಂಡಿದ್ದ ಭಿನ್ನಮತ ಹಾಗೂ ಭಾರತ 1974ರಲ್ಲಿ ಮೊದಲ ಬಾರಿಗೆ ನ್ಯೂಕ್ಲಿಯರ್‌ ಪರೀಕ್ಷೆ ಕೈಗೊಂಡಿದ್ದರಿಂದ ಉಂಟಾಗಿದ್ದ ಅಸಮಾಧಾನವನ್ನು ತಣ್ಣಗಾಗಿಸುವ ಉದ್ದೇಶದಿಂದ ಕಾರ್ಟರ್‌ 1978 ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಮೂರು ದಿನದ ಭೇಟಿ ವೇಳೆ ಭಾರತ ಸಂಸತ್ತು ಮತ್ತು ದೆಹಲಿ ಸಮೀಪದ ನಗರದಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿ ಅಲ್ಲಿನ ಜನರಿಗೆ ಟೆಲಿವಿಷನ್‌ ಸೆಟ್‌ ಗಿಫ್ಟ್‌ ನೀಡಿದ್ದರು. ಕಾರ್ಟರ್‌ ಬಂದು ಹೋದ ನಂತರ ಈ ನಗರಕ್ಕೆ ‘ಕಾರ್ಟರ್‌ಪುರಿ’ ಎಂದು ಪುನರ್‌ ನಾಮಕರಣ ಮಾಡಲಾಯಿತು. ಬಾಂಗ್ಲಾ ಯುದ್ಧದ ವೇಳೆ ಉಂಟಾಗಿದ್ದ ಶೀತಲ ಸಮರವನ್ನು ಈ ಭೇಟಿ ತಣ್ಣಗಾಗಿಸಿತ್ತು. ಆದರೆ ಭಾರತದ ಪರಮಾಣು ಬಾಂಬ್‌ ಹೊಂದುವ ನಿರ್ಧಾರದ ಬಗ್ಗೆ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಮನಬದಲಿಸಲು ಸಾಧ್ಯವಾಗಲಿಲ್ಲ. ದೇಸಾಯಿ ಅವರ ಈ ನಡೆಗೆ ಅಮೆರಿಕಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು.

ಬಿಲ್‌ ಕ್ಲಿಂಟನ್‌, 2000

ಸುಮಾರು 20 ವರ್ಷಗಳ ನಂತರ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವಿರುವಾಗ ಭಾರತಕ್ಕೆ ಭೇಟಿ ನೀಡಿದ್ದರು. ಆಗ್ರಾ, ಜೈಪುರ, ಹೈದರಾಬಾದ್‌ ಮತ್ತು ಮುಂಬೈ ದೆಹಲಿಯ ಪ್ರಮುಖ ಸ್ಥಳಗಳಿಗೆ ಕ್ಲಿಂಟನ್‌ ಭೇಟಿ ನೀಡಿದ್ದರು. ಕ್ಲಿಂಟನ್‌ ಅವರ ಈ ಪ್ರವಾಸವು ಭಾರತ-ಅಮೆರಿಕದ ಸ್ನೇಹ ಸಂಬಂಧದಲ್ಲಿ ಹೊಸ ಭಾಷ್ಯ ಬರೆದಿತ್ತು. 1999ರ ಪಾಕಿಸ್ತಾನ-ಭಾರತ ಯುದ್ಧದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಕ್ಲಿಂಟನ್‌ ನೇತೃತ್ವದ ಅಮೆರಿಕ ಸರ್ಕಾರ ಭಾರತಕ್ಕೆ ಬೆಂಬಲ ನೀಡಿತ್ತು. 1991ರಲ್ಲಿ ಭಾರತ ಉದಾರೀಕರಣ ನೀತಿಯನ್ನು ಅಳವಡಿಸಿಕೊಂಡು ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿತು. ವಿದೇಶಿ ಬಂಡವಾಳ ಹೂಡಿಕೆಗೆ ಮುಕ್ತವಾಯಿತು. ಇದು ಅಮೆರಿಕ ಮತ್ತು ಭಾರತದ ಸ್ನೇಹಕ್ಕೆ ಕೊಂಡಿಯಾಗಿ ಮಾರ್ಪಟ್ಟಿತು.

ಜಾರ್ಜ್ ಡಬ್ಲ್ಯು ಬುಷ್‌, 2006

ಜಾಜ್‌ರ್‍ ಡಬ್ಲ್ಯು ಬುಷ್‌ ಭೇಟಿ ವೇಳೆ 2005ರ ಪರಮಾಣು ಒಪ್ಪಂದ ಕುರಿತಾದ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಈ ಒಪ್ಪಂದದ ಪ್ರಕಾರ, ಭಾರತ ತನ್ನ ನಾಗರಿಕ ಮತ್ತು ಮಿಲಿಟರಿ ಪರಮಾಣು ಕಾರ್ಯಕ್ರಮಗಳನ್ನು ಬೇರ್ಪಡಿಸಿತು ಮತ್ತು ಅಂತಾರಾಷ್ಟ್ರೀಯ ಪರಿಶೀಲನೆಗಾಗಿ ಪರಮಾಣು ವಿದ್ಯುತ್‌ ಸ್ಥಾವರಗಳು ಸೇರಿದಂತೆ ನಾಗರಿಕ ಸೌಲಭ್ಯಗಳನ್ನು ಮುಕ್ತಗೊಳಿಸಿತು. ಅಮೆರಿಕ ಭಾರತದ ಪರಮಾಣು ವ್ಯಾಪಾರದ ಮೇಲೆ ಹೇರಿದ್ದ ನಿಷೇಧವನ್ನು ರದ್ದು ಮಾಡಿತು.

ಟ್ರಂಪ್, ಮೆಲೇನಿಯಾ ಜೊತೆ ಭಾರತಕ್ಕೆ ಬರುವ ಈ ಮಹಿಳೆ ಯಾರು?

ಈ ನಿರ್ಧಾರವು ಎರಡೂ ದೇಶದ ಆರ್ಥಿಕತೆಗೆ ಮತ್ತು ಭದ್ರತೆಗೆ ಪೂಕರವಾಗಿ ಪರಿಣಮಿಸಿತು. ಅಲ್ಲದೆ 9/11 ರ ಭಯೋತ್ಪಾದನಾ ದಾಳಿ ಮತ್ತು ಇರಾಕ್‌ ಆಕ್ರಮಣ ಭಾರತ- ಅಮೆರಿಕ ಸಂಬಂಧವನ್ನು ಗಟ್ಟಿಮಾಡಿತು. ಇದು ಜಾಜ್‌ರ್‍ ಬುಷ್‌ ಅವರ ವಿದೇಶಾಂಗ ವ್ಯವಹಾರದ ಮಹತ್ವದ ಸಾಧನೆ ಎಂದೇ ಬಣ್ಣಿಸಲಾಗಿದೆ. ಅಮೆರಿಕ ಮತ್ತು ಭಾರತದೊಂದಿಗೆ ಭದ್ರತಾ ವ್ಯವಹಾರಗಳು ಆರಂಭವಾಗಲು ಬುಷ್‌ ನೇರ ಕಾರಣ ಎಂದೇ ಬಣ್ಣಿಸಲಾಗಿದೆ.

ಬರಾಕ್‌ ಒಬಾಮಾ 2010, 2015

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಭಾರತಕ್ಕೆ ಎರಡು ಭಾರಿ ಭೇಟಿ ನೀಡಿದ್ದಾರೆ. ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭೇಟಿ ನೀಡಿದ್ದ ಒಬಾಮಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ 10 ಬಿಲಿಯನ್‌ ಡಾಲರ್‌ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಎರಡೂ ದೇಶಗಳ ನಾಯಕರು ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದರು. ಎರಡನೇ ಬಾರಿ 2015ರ ಭೇಟಿ ವೇಳೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇತ್ತು. ಭಾರತದ ಗಣರಾಜ್ಯೋತ್ಸದ ಮುಖ್ಯ ಅಥಿತಿಯಾಗಿ ಒಬಾಮಾ ಅವರನ್ನು ಆಹ್ವಾನಿಸಲಾಗಿತ್ತು.

ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಒಬಾಮಾ ಮಾತನಾಡುವವರೆಗೆ ಈ ಪ್ರವಾಸವು ಸುಗಮವಾಗಿತ್ತು. ಧಾರ್ಮಿಕ ನಂಬಿಕೆಯ ಹಾದಿಯಲ್ಲಿ ವಿಭಜನೆಯಾಗದಿದ್ದಲ್ಲಿ ಭಾರತವು ಯಶಸ್ವಿ ರಾಷ್ಟ್ರಗಳಲ್ಲಿ ಒಂದಾಗುತ್ತದೆ ಎಂದು ಒಬಾಮಾ ಹೇಳಿದ್ದರು. ಆದರೆ ವಾಷಿಂಗ್ಟನ್‌ಗೆ ಹಿಂದಿರುಗಿದ ನಂತರ, ಅವರು ಭಾರತದಲ್ಲಿನ ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.