ಲಕ್ಷಾಂತರ ಜನ ತಮ್ಮ ದೈನಂದಿನ ಪ್ರಯಾಣಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ ಬೀದಿ ನಾಯಿಯೊಂದು ದಿನವೂ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುವಿರಾ ನಂಬಲೇಬೇಕು. ಇಂಡಿಯನ್ ಕಲ್ಚರ್ ಕ್ಲಬ್ ಎಂಬ ಇನ್ಸ್ಟಾಗ್ರಾಮ್‌ನ ಪೇಜ್‌ನಿಂದ ಈ ವಿಶೇಷ ವೀಡಿಯೋವೊಂದು ಪೋಸ್ಟ್ ಆಗಿದೆ.
ಮುಂಬೈ: ಮೆಟ್ರೋ ಸಿಟಿಗಳಲ್ಲಿ ವಾಸವಿರುವವರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋ ರೈಲುಗಳಲ್ಲಿ, ಲೋಕಲ್ ರೈಲುಗಳಲ್ಲಿ ಸಂಚರಿಸುವುದು ಸಾಮಾನ್ಯ. ಲಕ್ಷಾಂತರ ಜನ ತಮ್ಮ ದೈನಂದಿನ ಪ್ರಯಾಣಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ ಬೀದಿ ನಾಯಿಯೊಂದು ದಿನವೂ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುವಿರಾ ನಂಬಲೇಬೇಕು. ಇಂಡಿಯನ್ ಕಲ್ಚರ್ ಕ್ಲಬ್ ಎಂಬ ಇನ್ಸ್ಟಾಗ್ರಾಮ್‌ನ ಪೇಜ್‌ನಿಂದ ಈ ವಿಶೇಷ ವೀಡಿಯೋವೊಂದು ಅಪ್‌ಲೋಡ್ ಆಗಿದ್ದು, ಶ್ವಾನವೊಂದು ಪ್ರತಿದಿನವೂ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತದೆಯಂತೆ..!
ಮುಂಬೈನ ಲೋಕಲ್ ಟ್ರೈನ್‌ನಲ್ಲಿ (Mumbai Local Train) ದಿನವೂ ಪ್ರಯಾಣಿಸುವ ಪ್ರಯಾಣಿಕನ ಭೇಟಿಯಾಗಿ ಎಂದು ಬರೆದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ವೀಡಿಯೋದಲ್ಲಿ ಶ್ವಾನವೂ ರೈಲು ಏರಿ ರೈಲಿನಲ್ಲಿ ಕುಳಿತು ಪ್ರಯಾಣಿಸಿ ಮತ್ತೊಂದೆಡೆ ಇಳಿಯುವ ದೃಶ್ಯವಿದೆ. ಅವರು ,ಮುಂಬೈನ ಬೊರಿವಲಿ (Borivali) ಲೋಕಲ್‌ನಿಂದ ದಿನವೂ ಪ್ರಯಾಣಿಸುವ ಪ್ರಯಾಣಿಕ ಈತನಾಗಿದ್ದು, ಅಂಧೇರಿಯಲ್ಲಿ ರೈಲಿನಿಂದ ಇಳಿಯುತ್ತಾನೆ. ನಂತರ ಸಂಜೆ ಮತ್ತೆ ತನ್ನ ಮೂಲ ಪ್ರದೇಶ ಬೊರಿವಲಿಗೆ ತೆರಳುತ್ತಾನೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾಯಿಯ ಈ ವರ್ತನೆ ಅಚ್ಚರಿ ಮೂಡಿಸಿದೆ.
ಕುಡಿದು ಬಿದ್ದ ಮಾಲೀಕನ ಟಚ್ ಮಾಡೋಕು ಬಿಡದ ನಾಯಿ: ಫೋಟೋಸ್ ವೈರಲ್
ಇನ್ನು ರೈಲೊಳಗೆ ಬರುವ ಪ್ರಯಾಣಿಕರು ಕೂಡ ನಾಯಿ (Dog) ಇದೆ ಎಂದು ಅಂಜದೇ ಸಾಮಾನ್ಯ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ವೀಡಿಯೋ ನೋಡಿದ ಒಬ್ಬರು ಹೌದು ಇದು ನಿಜ ನಾನು ಈ ಶ್ವಾನವನ್ನು ರೈಲಿನಲ್ಲಿ ಗಮನಿಸಿದ್ದೇನೆ. ಆತ ರಾತ್ರಿ ಮತ್ತೆ ರೈಲಿನಲ್ಲಿ ಮರಳುತ್ತಾನೆ. ಎಂಥಾ ಸ್ಮಾರ್ಟ್ ಹುಡುಗ ಅವನು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತ ಯಾವ ರೈಲಿನಲ್ಲಿ ಪ್ರಯಾಣಿಸುತ್ತಾನೆ. ಯಾವ ಸಮಯದಲ್ಲಿ ಪ್ರಯಾಣಿಸುತ್ತಾನೆ. ನನಗೂ ಆತನನ್ನು ಭೇಟಿಯಾಗುವ ಆಸೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ನಾಯಿಯು ನಿಜವಾಗಿ ಸೆಂಟ್ರಲ್ ಲೈನ್‌ನಿಂದ ಬಂದಿದ್ದು, ಅವನು ಕುರ್ಲಾ ಘಾಟ್‌ಕೋಪರ್‌ನಲ್ಲಿ (Kurla till Ghatkopar) ರೈಲೇರುತ್ತಾನೆ. ನಾನು ಅವನನ್ನು ಸಾಕಷ್ಟು ಬಾರಿ ನೋಡಿದ್ದೇನೆ ಮತ್ತು ಯಾವಾಗ ಹತ್ತಬೇಕು ಮತ್ತು ಯಾವಾಗ ಇಳಿಯಬೇಕು ಎಂಬುದನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ. ಕೇವಲ ಒಂದು ವಿನಂತಿ, ಶ್ವಾನ ಇದೆ ಎಂದು ಯಾರೂ ಉದ್ರಿಕ್ತರಾಗಬೇಡಿ ರೈಲ್ವೆ ಸಂಪರ್ಕವನ್ನು ಅವರು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ನೀವು ಆನಂದಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೋರಿವಿಲಿಯಲ್ಲಿ ಉಳಿದುಕೊಂಡಿರುವ ಆತ ಕಾಂದಿವಲಿಯಲ್ಲಿ ಕೆಲಸಕ್ಕೆ ಹೋಗುತ್ತಾನೆ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಆತ ಹೀಗೆ ಸ್ವಾತಂತ್ರವಾಗಿ ಓಡಾಡುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಶ್ವಾನವೊಂದರ ರೈಲು ಪ್ರಯಾಣ ಜನರಲ್ಲಿ ಅಚ್ಚರಿ ಮೂಡಿಸಿರುವುದಂತು ಸುಳ್ಳಲ್ಲ.
ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ
