ಮನೆಯಲ್ಲಿನ ಸಾಕು ನಾಯಿಯ ಸಮಯಪ್ರಜ್ಞೆಯಿಂದ 67 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಯಿಯ ಆ ಒಂದು ಕೂಗಿನಿಂದ ಜನರು ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ.
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಈವರೆಗಿನ ಮಾಹಿತಿ ಪ್ರಕಾರ ಭೂಕುಸಿತ ಮತ್ತು ಪ್ರವಾಹದಲ್ಲಿ 80 ಜನರು ಮೃತರಾಗಿದ್ದಾರೆ. ಆದ್ರೆ ಒಂದು ನಾಯಿ 67 ಜನರ ಪ್ರಾಣ ಉಳಿಸಿದೆ. ಮಾಂಡ್ಯ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಾಯಿ ಕೂಗಿದ್ದರಿಂದ 20 ಕುಟುಂಬಗಳ 67 ಜನ ತಮ್ಮ ಪ್ರಾಣ ಉಳಿಸಿಕೊಂಡರು. ಜೂನ್ 30ರ ಮಧ್ಯರಾತ್ರಿ ಶುರುವಾದ ಮಳೆಯಿಂದಾಗಿ ಧರಂಪುರದ ಹಳ್ಳಿ ಸಂಪೂರ್ಣ ನಾಶವಾಯಿತು. ಭಾರೀ ಮಳೆಯಲ್ಲಿ ಎರಡನೇ ಮಹಡಿಯಲ್ಲಿ ಮಲಗಿದ್ದ ನಾಯಿ ಜೋರಾಗಿ ಕೂಗಿದ್ದರಿಂದ 20 ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ 1 ಗಂಟೆಗೆ ನಾಯಿ ಬೊಗಳಲು ಆರಂಭಿಸಿತು!
ನರೇಂದ್ರ ಎಂಬ ವ್ಯಕ್ತಿ ನಾಯಿ ಕೂಗಿದ್ದರಿಂದ ಎಚ್ಚರಗೊಂಡು ಮೇಲೆ ಹೋದಾಗ ಅಪಾಯದ ಅರಿವಾಯಿತು. ರಾತ್ರಿ ಸುಮಾರು ಒಂದು ಗಂಟೆಗೆ ನಾಯಿ ಕೂಗಿದ್ದರಿಂದ ನಾನು ಎಚ್ಚರವಾದೆ. ನಾಯಿ ಇದ್ದಲ್ಲಿಗೆ ಹೋದಾಗ ಗೋಡೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಆ ಗೋಡೆಯಲ್ಲಿಂದ ಹನಿ ಹನಿ ನೀರು ಬರುತ್ತಿತ್ತು. ನಾನು ನಾಯಿನ ಜೊತೆ ಕೆಳಗೆ ಓಡಿ ಎಲ್ಲರನ್ನೂ ಎಬ್ಬಿಸಿದೆ ಅಂತ ನರೇಂದ್ರ ಹೇಳಿದರು.
ಅಪಾಯದ ಅರಿವಾದ ನಂತರ ನರೇಂದ್ರ ಹಳ್ಳಿಯ ಎಲ್ಲರನ್ನೂ ಎಬ್ಬಿಸಿ ಸುರಕ್ಷಿತ ಸ್ಥಳಕ್ಕೆ ಹೋಗಲು ಹೇಳಿದರು. ಎಲ್ಲರೂ ಮನೆಯಿಂದ ಹೊರಬಂದ ನಂತರ ಭೂಕುಸಿತವಾಯಿತು ಮತ್ತು ಸಾಕಷ್ಟು ಮನೆಗಳು ನಾಶವಾದವು. ಭೂಕುಸಿತ ಮತ್ತು ಪ್ರವಾಹದಿಂದಾಗಿ ಹಳ್ಳಿಯಲ್ಲಿ ಕೇವಲ ನಾಲ್ಕೈದು ಮನೆಗಳು ಮಾತ್ರ ಉಳಿದಿವೆ. ಈ ದುರಂತದಿಂದ ಪಾರಾದವರು ಕಳೆದ ಏಳು ದಿನಗಳಿಂದ ತ್ರಿಯಾಂಬಲ್ ಗ್ರಾಮದ ನೈನಾ ದೇವಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದಾರೆ.
ಮಾಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವು-ನೋವು
ಮಾಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಜೂನ್ 20 ರಿಂದ ಮಳೆಗಾಲ ಶುರುವಾದಾಗಿನಿಂದ ಹಿಮಾಚಲ ಪ್ರದೇಶದಲ್ಲಿ 80 ಜನ ಸತ್ತಿದ್ದಾರೆ. 50 ಜನ ಭೂಕುಸಿತ, ಪ್ರವಾಹದಿಂದ ಸತ್ತರೆ, 30 ಜನ ರಸ್ತೆ ಅಪಘಾತಗಳಲ್ಲಿ ಸತ್ತಿದ್ದಾರೆ.
ರಾಜ್ಯದಲ್ಲಿ 23 ಪ್ರವಾಹಗಳು, 19 ಮೇಘಸ್ಫೋಟಗಳು ಮತ್ತು 16 ಭೂಕುಸಿತಗಳು ಸಂಭವಿಸಿವೆ. ಮಾಂಡ್ಯದಲ್ಲಿ 156 ಸೇರಿದಂತೆ 280 ರಸ್ತೆಗಳನ್ನು ಮುಚ್ಚಲಾಗಿದೆ.
ಮಂಡಿಯಿಂದ ಕುಲು ಸಂಪರ್ಕಿಸುವ ಹೆದ್ದಾರಿ ಸಂಚಾರ ಪೂರ್ಣ ಬಂದ್ ಆಗಿದೆ. ಪರಿಣಾಮ ಸುಮಾರು 15 ಕಿ.ಮೀ. ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಿಲುಕಿವೆ. ಹೋಟೆಲ್ ರೂಂ ಲಭಿಸದ ಕಾರಣ 200 ಪ್ರವಾಸಿಗರು ನಡುರಸ್ತೆಯಲ್ಲೇ ರಾತ್ರಿಯನ್ನು ಕಳೆದಿದ್ದಾರೆ.
ಅಸ್ಸಾಂನಲ್ಲಿ ಉಕ್ಕಿದ 10 ನದಿ
ಜೂನ್ ತಿಂಗಳ ಆರಂಭದಲ್ಲಿ ಅಸ್ಸಾಂನ 10 ನದಿಗಳು ಉಕ್ಕೇರಿ 10 ಜಿಲ್ಲೆಗಳ ಬಹುತೇಕ ಪ್ರದೇಶಗಳು ಈಗಾಗಲೇ ಜಲಾವೃತಗೊಂಡಿದ್ದವು. ಭೂಕುಸಿತದಿಂದ 5, ಪ್ರವಾಹಕ್ಕೆ ಸಿಲುಕಿ 3 ಮಂದಿ ಅಸುನೀಗಿದ್ದರು. ಲಖಿಂಪುರ ಜಿಲ್ಲೆಗೆ ಅತಿ ಹೆಚ್ಚು ಹಾನಿಯಾಗಿದೆ. 78,000 ಜನರಿಗೆ ಅಪಾಯ ಎದುರಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಸಾಲದ್ದಕ್ಕೆ ಅರುಣಾಚಲ ಮತ್ತು ಮೇಘಾಲಯದಿಂದಲೂ ಪ್ರವಾಹ ನುಗ್ಗಿ ಬಂದಿತ್ತು.
ಸಿಕ್ಕಿಂನಲ್ಲಿ ಒಡಿಶಾ, ತ್ರಿಪುರ ಮತ್ತು ಉತ್ತರ ಪ್ರದೇಶದ 11 ಪ್ರವಾಸಿಗರಿದ್ದ ವಾಹನವೊಂದು ತೀಸ್ತಾ ನದಿಗೆ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, 8 ಮಂದಿ ಕಾಣೆಯಾಗಿದ್ದಾರೆ. ವಿವಿಧೆಡೆಗಳಲ್ಲಿ ಸಿಲುಕಿರುವ ಪ್ರವಾಸಿಗರು ಅತಂತ್ರರಾಗಿದ್ದಾರೆ.
ಮಣಿಪುರದಲ್ಲಿ 883 ಮನೆಗೆ ಹಾನಿ:
ಮಣಿಪುರದ ಮಳೆಗೆ 883 ಮನೆಗಳಿಗೆ ಹಾನಿಯಾಗಿದ್ದು, 3,802 ಜನರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಈವರೆಗೆ 12 ಭೂಕುಸಿತಗಳು ಸಂಭವಿಸಿವೆ.
