ನವದೆಹಲಿ(ಸೆ.29): ಕೊರೋನಾ ರೋಗಿಗಳಿಗೆ ದೇಶದಲ್ಲೆಡೆ ಸರ್ಕಾರದ ನಿರ್ದೇಶನದ ಪ್ರಕಾರ ನೀಡುತ್ತಿರುವ ಅಲೋಪಥಿ ಔಷಧಗÜಳ ಜೊತೆ ಆಯುರ್ವೇದ ಔಷಧವನ್ನೂ ಸೇರಿಸಿದರೆ ಅದು ಹೆಚ್ಚು ಪರಿಣಾಮಕಾರಿ ಎಂಬ ವಿಷಯ ಬೆಳಕಿಗೆ ಬಂದಿದೆ. ಜೊತೆಗೆ ಆಯುರ್ವೇದದ ಔಷಧ ಪಡೆದವರು ಬೇಗ ಗುಣಮುಖರಾಗುತ್ತಿದ್ದಾರೆ ಎಂಬ ಸಂಗತಿ, ಕೇಂದ್ರ ಸರ್ಕಾರದ ನಿಗಾದಲ್ಲಿ ದೇಶದ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಸಾಬೀತಾಗಿದೆ.

ಆಯುರ್ವೇದ ಅತಿ ಬಳಕೆ; ಜನರೇ ಎಚ್ಚರ..!

ಈ ಮೂರು ಆಸ್ಪತ್ರೆಗಳಲ್ಲಿ ಕೇವಲ ಅಲೋಪಥಿ ಔಷಧ ಸೇವಿಸಿದವರಿಗಿಂತ ಆಯುರ್ವೇದ ಮತ್ತು ಅಲೋಪಥಿ ಔಷಧದ ಮಿಶ್ರ ಚಿಕಿತ್ಸೆ ಪಡೆದವರು ಬೇಗ ಗುಣಮುಖರಾಗಿದ್ದಾರೆ. ಆಯುರ್ವೇದದ ಔಷಧ (ಮಿಶ್ರ ಚಿಕಿತ್ಸೆ) ಪಡೆದವರಲ್ಲಿ 5ನೇ ದಿನಕ್ಕೆ ಶೇ.86.6 ರೋಗಿಗಳಲ್ಲಿ ಕೊರೋನಾ ನೆಗೆಟಿವ್‌ ಬಂದಿದ್ದರೆ, ಅಲೋಪಥಿ ಔಷಧ ಸೇವಿಸಿದವರಲ್ಲಿ 5ನೇ ದಿನಕ್ಕೆ ಶೇ.60ರಷ್ಟುರೋಗಿಗಳಿಗೆ ಮಾತ್ರ ನೆಗೆಟಿವ್‌ ಬಂದಿದೆ. ಆಯುರ್ವೇದದ ಔಷಧ ಸೇವಿಸಿದವರಲ್ಲಿ 10ನೇ ದಿನಕ್ಕೆ ಎಲ್ಲರಲ್ಲೂ ನೆಗೆಟಿವ್‌ ಬಂದಿದೆ.

ಈ ಸಂಗತಿಗಳನ್ನು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಕ್ಲಿನಿಕಲ್‌ ಟ್ರಯಲ್‌ ರಿಜಿಸ್ಟ್ರಿ ಆಫ್‌ ಇಂಡಿಯಾ (ಸಿಟಿಆರ್‌ಐ)ದ ಅಧ್ಯಯನದ ಮಧ್ಯಂತರ ವರದಿಯಲ್ಲಿ ದಾಖಲಿಸಲಾಗಿದೆ. ಆಂಧ್ರಪ್ರದೇಶದ ಶ್ರೀಕಾಕುಳಂನ ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ಗುಜರಾತ್‌ನ ವಡೋದರಾದ ಪಾರುಲ್‌ ಸೇವಾಶ್ರಮ ಆಸ್ಪತ್ರೆ ಮತ್ತು ಮಹಾರಾಷ್ಟ್ರದ ಪುಣೆಯ ಲೋಕಮಾನ್ಯ ಆಸ್ಪತ್ರೆಯಲ್ಲಿ ಈ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಅಲ್ಲಿ ಸಾಮಾನ್ಯ ಪ್ರಮಾಣದ ಕೊರೋನಾ ಸೋಂಕಿತರಿಗೆ ಕೋರಿವಲ್‌ ಲೈಫ್‌ ಸೈನ್ಸಸ್‌ನ ಇಮ್ಯುನೋಫ್ರೀ ಮತ್ತು ಬಯೋಜೆಟಿಕಾ ಕಂಪನಿಯ ರೆಜಿನ್‌ಮ್ಯೂನ್‌ ಎಂಬ ಔಷಧ ನೀಡಲಾಗುತ್ತಿದೆ. ಈ ಔಷಧ ಪಡೆದವರಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ ಅಲೋಪಥಿ ಔಷಧ ಪಡೆಯುತ್ತಿರುವ ರೋಗಿಗಳಿಗಿಂತ ಅದ್ಭುತವಾದ ಫಲಿತಾಂಶ ಕಂಡುಬಂದಿದೆ.

ನಮಗೆ ಕೊರೋನಾ ಪ್ರಭಾವ ಬೀರದಿರಲು ಆಯುರ್ವೇದ ಕಾರಣ: ಸಚಿವ ಈಶ್ವರಪ್ಪ

ಅಷ್ಟೇ ಅಲ್ಲ, ಆಯುರ್ವೇದದ ಚಿಕಿತ್ಸೆ ಪಡೆದ ರೋಗಿಗಳನ್ನು ಸಿ ರಿಯಾಕ್ಟಿವ್‌ ಪ್ರೊಟೀನ್‌, ಪ್ರೊಕ್ಯಾಲ್ಸಿಟೋನಿನ್‌, ಡಿ ಡೈಮರ್‌ ಹಾಗೂ ಆರ್‌ಟಿ-ಪಿಸಿಆರ್‌ ಮುಂತಾದ ಕೊರೋನಾ ಸಂಬಂಧಿ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲೂ ಅಲೋಪಥಿ ಚಿಕಿತ್ಸೆ ಪಡೆದವರಿಗಿಂತ ಶೇ.20ರಿಂದ 60ರಷ್ಟುಉತ್ತಮ ಫಲಿತಾಂಶ ಕಂಡುಬಂದಿದೆ. ಕೊರೋನಾದ ಲಕ್ಷಣಗಳಾದ ಮೈಕೈ ನೋವು, ಸುಸ್ತು ಮುಂತಾದವು ಕೂಡ ಆಯುರ್ವೇದ ಚಿಕಿತ್ಸೆಯಲ್ಲೇ ಬೇಗ ಗುಣವಾಗಿವೆ ಎಂದು ಮಧ್ಯಂತರ ವರದಿಯಲ್ಲಿ ಹೇಳಲಾಗಿದೆ.

ಯಾವ ಔಷಧ ಎಷ್ಟುಪರಿಣಾಮಕಾರಿ?

1.ಅಲೋಪಥಿ+ಆಯುರ್ವೇದ ಮಿಶ್ರ ಔಷಧಿ 5ನೇ ದಿನಕ್ಕೆ ಶೇ.86.6 ಜನಕ್ಕೆ ನೆಗೆಟಿವ್‌

2. ಅಲೋಪಥಿ 5ನೇ ದಿನಕ್ಕೆ ಶೇ.60 ಜನಕ್ಕೆ ನೆಗೆಟಿವ್‌

3. ಆಯುರ್ವೇದ 10ದಿನಕ್ಕೆ ಎಲ್ಲರಿಗೂ ನೆಗೆಟಿವ್‌

ಎಲ್ಲೆಲ್ಲಿ ಅಧ್ಯಯನ?

ಶ್ರೀಕಾಕುಳಂನ ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ವಡೋದರಾದ ಪಾರುಲ್‌ ಸೇವಾಶ್ರಮ ಆಸ್ಪತ್ರೆ, ಪುಣೆಯ