ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 15 ಜನ ವೈದ್ಯರು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.  ಕಾಂಗ್ರೆಸ್‌ನಿಂದ 11, ಬಿಜೆಪಿಯ 1, ಬಿಆರ್‌ಎಸ್‌ನ 3 ವೈದ್ಯರು. 

ಹೈದಾರಾಬಾದ್‌ (ಡಿ.6): ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 15 ಜನ ವೈದ್ಯರು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಾಜ್ಯದ ವಿಧಾನಸಭೆಯಲ್ಲಿ ಶೇ.12ರಷ್ಟು ಜನ ವೈದ್ಯರೇ ಆಗಿದ್ದು, ಪ್ರತಿ ಶಾಸಕರಲ್ಲಿ ಒಬ್ಬರು ವೈದ್ಯರಾಗಿದ್ದಾರೆ.ಗೊಟ್ಟು 15 ಜನ ವೈದ್ಯರಲ್ಲಿ 11 ಮಂದಿ ಕಾಂಗ್ರೆಸ್‌, 1 ಬಿಜೆಪಿ ಮತ್ತು 3 ಬಿಆರ್‌ಎಸ್‌ ಅಭ್ಯರ್ಥಿಗಳಾಗಿದ್ದಾರೆ.

ಅವರೆಂದರೆ ಕಾಂಗ್ರೆಸ್‌ನಿಂದ ಡಾ. ಭೂಪತಿ ರೆಡ್ಡಿ, ನಿಜಾಮಾಬಾದ್‌ (ಕಾಂಗ್ರೆಸ್‌), ಡಾ. ರಾಮ ಚಂದ್ರ ನಾಯ್ಕ್‌, ಡೋರ್ನಕಲ್‌, ಡಾ. ವಂಶಿ ಕೃಷ್ಣ ಅಚಂಪೇಟೆ, ಡಾ. ಮುರುಳಿ ನಾಯ್ಕ್‌, ಮೆಹಬೂಬಾಬಾದ್‌, ಡಾ. ಕೆ ಸತ್ಯನಾರಾಯಣ, ಮನಕೊಂಡೂರು, ಡಾ. ಪರ್ಣಿಕಾ ರೆಡ್ಡಿ, ನಾರಾಯಣಪೇಟೆ, ಡಾ. ಸಂಜೀವ್‌ ರೆಡ್ಡಿ ನಾರಾಯಣಖೇಡ್‌, ಡಾ. ರಾಜೇಶ್‌ ರೆಡ್ಡಿ, ನಾಗರ್‌ಕರ್‌ನೂಲ್‌, ಡಾ. ಸಂಜಯ್‌ ಕೊರುಟ್ಲ, ಡಾ. ರಾಗಮಯಿ ಸತ್ತುಪಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸದ್ಯ ಇವರಲ್ಲಿ ಯಾರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಲಿದ್ದಾರೆ ಎಂಬುದೇ ಕುತೂಹಲಕಾರಿಯಾಗಿದೆ. ಬಿಜೆಪಿಯ ಡಾ. ಹರೀಶ್‌ ಬಾಬು, ಸಿರ್ಪುರ ಕ್ಷೇತ್ರದಿಂದ ಗೆದ್ದಿದ್ದಾರೆ.

ರೇವಂತ್‌ ರೆಡ್ಡಿ ತೆಲಂಗಾಣದ ಹೊಸ ಸಿಎಂ, ಡಿ.7ಕ್ಕೆ ಪ್ರಮಾಣವಚನ!

ರೇವಂತ್‌ ರೆಡ್ಡಿ ಸಿಎಂ: ತೆಲಂಗಾಣ ರಚನೆಯಾದಾಗಿನಿಂದಲೂ ಅಧಿಕಾರದಲ್ಲಿದ್ದ, ಬಿಆರ್‌ಎಸ್‌ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ರಾಜ್ಯದಲ್ಲಿ ಕಾಂಗ್ರೆಸ್‌ ಜಯಗಳಿಸುವಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರ ಪಾತ್ರ ದೊಡ್ಡದಿದೆ. 2021ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಾಗಿನಿಂದಲೂ ಬಿಆರ್‌ಎಸ್‌ ವಿರುದ್ಧ ಹಲವು ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದ ರೇವಂತ್‌ ಕಾಂಗ್ರೆಸ್‌ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದಾರೆ. ಹೀಗಾಗಿ ಅವರೇ ತೆಲಂಗಾಣದ ಸಿಎಂ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ-ಆರೆಸ್ಸೆಸ್‌ ನಂಟಿನ ಎಬಿವಿಪಿ ನಾಯಕನಾಗಿ ರಾಜಕೀಯಕ್ಕೆ ಧುಮುಕಿದ ರೇವಂತ್‌ 2 ಬಾರಿ ಶಾಸಕ, 1 ಬಾರಿ ಸಂಸದರಾಗಿ ಗೆಲುವು ಸಾಧಿಸಿದ್ದಾರೆ. ಅಖಂಡ ಆಂಧ್ರಪ್ರದೇಶ ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷದಿಂದ 2009ರಲ್ಲಿ ಹಾಗೂ 2014ರಲ್ಲಿ ಕೊಡಂಗಲ್‌ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಶಾಸಕರಾಗಿದ್ದರು. ಬಳಿಕ 2017ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದ ಅವರಿಗೆ 2019ರಲ್ಲಿ ಮಲ್ಕಾಜ್‌ಗಿರಿ ಕ್ಷೇತ್ರದಿಂದ ಲೋಕಸಭೆಗೆ ಟಿಕೆಟ್‌ ನೀಡಲಾಯಿತು. ಇದರಲ್ಲಿ ಅವರು ಜಯಗಳಿಸಿದರೂ ಸಹ ಪಕ್ಷದ ಇತರ ನಾಯಕರಿಂದಲೇ ಟೀಕೆ ಎದುರಿಸಿದ್ದರು.

ಕನುಗೋಲು ಮಾತು ಕೇಳದೆ 2 ರಾಜ್ಯ ಸೋತ ಕಾಂಗ್ರೆಸ್‌: ಕಮಲನಾಥ್‌, ಗೆಹ್ಲೋಟ್‌ರಿಂದ ನಿರ್ಲಕ್ಷ್ಯ

ಇದಾದ ಬಳಿಕ 2021ರಲ್ಲಿ ಅವರನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ವೇಳೆಯೂ ಸಹ ಸಾಕಷ್ಟು ವಿರೋಧ ವ್ಯಕ್ತವಾಯಿತು, ಆದರೂ ಪಕ್ಷಕ್ಕಾಗಿ ಸಾಕಷ್ಟು ದುಡಿದ ಅವರು, ಬಿಆರ್‌ಎಸ್‌ನ ಅಕ್ರಮಗಳ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಇದೆಲ್ಲವೂ ಈಗ ಅವರ ಕೈಹಿಡಿದಿದೆ.