Asianet Suvarna News Asianet Suvarna News

ಹರ್ನಿಯಾ ಅಂತ ಬಂದ ಪುರುಷನಲ್ಲಿ ಕಂಡಿದ್ದು ಮಹಿಳೆಯರ ಅಂಗಗಳು, ವೈದ್ಯರು ಶಾಕ್!

ಮಹಿಳೆಯರ ದೇಹದಲ್ಲಿರುವ ಗರ್ಭಕೋಶ ಮತ್ತು ಅಂಡಾಣು ಪುರುಷನಲ್ಲಿ ಕಂಡು ಬಂದಿವೆ. ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವೈದ್ಯರು ಒಂದು ಕ್ಷಣ ಈ ಎರಡು ಭಾಗಗಳನ್ನು ಕಂಡು ಶಾಕ್ ಆಗಿದ್ದರು.

doctors find ovary uterus inside 46 year old man body Uttar Pradesh Gorakhpur mrq
Author
First Published Aug 13, 2024, 4:05 PM IST | Last Updated Aug 13, 2024, 4:05 PM IST

ಲಕ್ನೊ: ಉತ್ತರ ಪ್ರದೇಶದ ವ್ಯಕ್ತಿಯ ದೇಹದಲ್ಲಿ ಗರ್ಭಾಶಯ ಮತ್ತು ಅಂಡಾಶಯ ಪತ್ತೆಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸ್ಕ್ಯಾನಿಂಗ್ ಮಾಡಿಸಿದಾಗ ಹರ್ನಿಯಾ ಸಮಸ್ಯೆ ಇರೋದು ಗೊತ್ತಾಗಿತ್ತು. ಹಾಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಉತ್ತರಪ್ರದೇಶದ ಗೊರಖ್‌ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿಯನ್ನು 42 ವರ್ಷದ ರಾಜ್ಗಿರ್ ಮಿಶ್ರಾ ಎಂದು ಗುರುತಿಸಲಾಗಿದೆ. ಎರಡು ಮಕ್ಕಳ ತಂದೆಯಾಗಿರುವ ರಾಜ್ಗಿರ ಅವರಲ್ಲಿ ಮಹಿಳೆಯ ಭಾಗಗಳನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.

ರಾಜ್ಗಿರ್ ಮಿಶ್ರಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಅಲ್ಟ್ರಾ ಸೌಂಡ್‌ ಗೆ ಒಳಗಾಗಿದ್ದರು. ಅಲ್ಟ್ರಾ ಸೌಂಡ್‌ನಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಸಣ್ಣದಾದ ಮಾಂಸದ ತುಂಡು ಕಂಡು ಬಂದಿತ್ತು. ಇದು ಹರ್ನಿಯಾ ಸಮಸ್ಯೆ ಎಂದು ವರದಿಯಲ್ಲಿ ದೃಢವಾಗಿತ್ತು. 

ಮಾತಾಡೋದಕ್ಕೂ, ಸೆಕ್ಸ್‌ಗೂ ಹಣ ಕೇಳ್ತಿದ್ದ ಪತ್ನಿಗೆ ಪತಿ ವಿಚ್ಛೇದನ

ಹೆಚ್ಚಿನ ಚಿಕಿತ್ಸೆಗಾಗಿ ಮಿಶ್ರಾ ಅವರು ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ತೆರಳಿದ್ದರು. ಈ ಶಿಬಿರಾ ಕೇಂದ್ರದ ವೈದ್ಯರಾದ ಡಾ.ನರೇಂದ್ರ ದೇವ್, ಅಲ್ಟ್ರಾ ಸೌಂಡ್‌ನಲ್ಲಿ ಹರ್ನಿಯಾ ಎಂದು ದಾಖಲಾಗಿತ್ತು. ಹಾಗಾಗಿ ಸರ್ಜರಿ ನಡೆಸಲು ಅನುಮತಿ ನೀಡಲಾಯ್ತು. ಶಸ್ತ್ರಚಿಕಿತ್ಸೆ ವೇಳೆ ಕಿಬ್ಬೊಟ್ಟೆಯ ಕೆಳಭಾಗದಲ್ಲಿರುವ ಮಾಂಸದ ತುಂಡು ಅದು ಬೆಳವಣಿಗೆಯಾದ ಗರ್ಭಾಶಯ ಮತ್ತು ಅಂಡಾಶಯ ಕಾಣಿಸಿತು ಎಂದು ಡಾ.ನರೇಂದ್ರ ದೇವ್ ಹೇಳಿದ್ದಾರೆ. 

ಶಸ್ತ್ರಚಿಕಿತ್ಸೆ ಬಳಿಕ ರಾಜ್ಗಿರ್ ಮಿಶ್ರಾ ಆರೋಗ್ಯವಾಗಿದ್ದಾರೆ. ಮಹಿಳೆಯರ ದೇಹದಲ್ಲಿರುವ ಭಾಗಗಳಿದ್ರೂ ರಾಜ್‌ಗಿರ್ ಮಿಶ್ರಾ ಅವರಲ್ಲಿ ಯಾವುದೇ ಹೆಣ್ಣಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಡಾ.ನರೇಂದ್ರ ದೇವ್ ಸ್ಪಷ್ಟಪಡಿಸಿದ್ದಾರೆ.

ಹೆಣ್ಣು ಸಿಗದ ಗಂಡಸರೇ ಈಕೆಯ ಟಾರ್ಗೆಟ್; ಒಂದೇ ಮದುಮಗಳು, ಮೂರು ವರ್ಷಕ್ಕೆ ನಾಲ್ಕು ಮದುವೆ

Latest Videos
Follow Us:
Download App:
  • android
  • ios