ಗೊಂದಲ ಹುಟ್ಟಿಸೋದು ಬಿಡಿ, ಲಸಿಕೆ ಹಾಕಿಸ್ಕೊಳ್ಳಿ: ರಾಹುಲ್‌ಗೆ ಸ್ಮೃತಿ ಇರಾನಿ ಕಿವಿಮಾತು!
* ಮತ್ತೆ ಕೇಂದ್ರದ ವಿರುದ್ಧ ಕಿಡಿ ಕಾರಿದ ರಾಹುಲ್
* ಕೇಂದ್ರಕ್ಕೆ ಬರೋರೆಲ್ಲರಿಗೂ ಲಸಿಕೆ ನೀಡಿ ಎಂದ ಕಾಂಗ್ರೆಸ್ ನಾಯಕ
* ವರದಿಗಳ ಸಮೇತ ಉತ್ತರಿಸಿದ ಸಂಸದೆ ಸ್ಮೃತಿ ಇರಾನಿ
ನವದೆಹಲಿ(ಜೂ.10): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಸಿಕೆ ಅಭಿಯಾನದ ವಿಚಾರವಾಗಿ ಮತ್ತೊಮ್ಮೆ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಆದರೆ ಈ ಬಾರಿ ಅಮೇಠಿಯ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್‌ಗೆ ತಿರುಗೇಟು ನೀಡಿದ್ದಾರೆ. ಭಯ, ಗೊಂದಲ ಸೃಷ್ಟಿಸೋದನ್ನು ಬಿಟ್ಟು ಲಸಿಕೆ ಹಾಕಿಸ್ಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.
ಹೌದು ಲಸಿಕೆ ಅಭಿಯಾನದ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಲಸಿಕೆಗೆ ಕೇವಲ ಆನ್‌ಲೈನ್ ನೋಂದಾವಣೆ ಸಾಕಾಗುವುದಿಲ್ಲ. ಲಸಿಕೆ ಕೆಂದ್ರದಲ್ಲಿ ವಾಕ್ ಇನ್ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕಿಸಬೇಕು. ಇಂಟರ್ನೆಟ್ ಬಳಕೆ ತಿಳಿಯದವರಿಗೂ ಬದುಕುವ ಹಕ್ಕಿದೆ ಎಂದಿದ್ದರು.
ತಿರುಗೇಟು ಕೊಟ್ಟ ಸ್ಮೃತಿ ಇರಾನಿ
ರಾಹುಲ್ ಗಾಂಧಿಯ ಟ್ವಿಟ್‌ಗೆ ತಿರುಗೇಟು ನೀಡಿದ ಸ್ಮೃತಿ ಇರಾನಿ, ಕೆಲ ವರದಿಗಳನ್ನು ಶೇರ್ ಮಾಡುತ್ತಾ ಕೇಂದ್ರ ಸರ್ಕಾರ ಈ ಮೊದಲೇ Walk in ರಿಜಿಸ್ಟ್ರೇಶನ್‌ಗೆ ರಾಜ್ಯಗಳಿಗೆ ಅನುಮತಿ ನೀಡಿದೆ. ಗೊಂದಲ ಹುಟ್ಟಿಸದೇ, ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದಾರೆ.