ಮೇಕೆದಾಟು; BSYಗೆ ಸ್ಟಾಲಿನ್ ಉತ್ತರ, ಮತ್ತೆ ತಮಿಳುನಾಡು ಕ್ಯಾತೆ!

* ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು
* ಮೇಕೆದಾಟು ಯೋಜನೆ ಕೈಗೆತ್ತುಕೊಳ್ಳಬೇಡಿ ಬಿಎಸ್‌ವೈಗೆ ತಮಿಳುನಾಡು ಸಿಎಂ ಸ್ಟಾಲಿನ್ ಆಗ್ರಹ
* ಯೋಜನೆಯಿಂದ ತಮಿಳುನಾಡಿನ ರೈತರಿಗೆ ಅನ್ಯಾಯ 
* ಅಂತಾರಾಜ್ಯ ನೀರಾವರಿ ಹಂಚಿಕೆಯ ನಿಯಮಾವಳಿ ಉಲ್ಲಂಘನೆಯಾಗುತ್ತದೆ

Do not pursue Mekedatu project Stalin to CM BS Yediyurappa mah

ಚೆನ್ನೈ/ ಬೆಂಗಳೂರು(ಜು. 04)  ಮೇಕೆದಾಟು ಯೋಜನೆಗೆ ಹಸಿರು ನ್ಯಾಯಾಧೀಕರಣ ಹಸಿರು ನಿಶಾನೆ ತೋರಿದ್ದರೂ ತಮಿಳುನಾಡು ಮಾತ್ರ ತನ್ನ ಕ್ಯಾತೆಯನ್ನು ಬಿಟ್ಟಿಲ್ಲ.  
ಮೇಕೆದಾಟು ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪತ್ರ ಬರೆದಿದ್ದು ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಗೆತ್ತಿಕೊಳ್ಳಬೇಡಿ  ಎಂದಿದ್ದಾರೆ

ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೆ ಅನ್ಯಾಯವಾಗುತ್ತದೆ ಎನ್ನುವುದು ಸ್ಟಾಲಿನ್ ಆರೋಪ.  ಕಾವೇರಿ ನದಿ ಪಾತ್ರದಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ 2 ಜಲವಿದ್ಯುತ್ ಯೋಜನೆಗಳಿಗೂ, ಕರ್ನಾಟಕದ ಮೇಕೆದಾಟು ಯೋಜನೆಗೂ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

ತಮಿಳುನಾಡು ಸಿಎಂಗೆ ಬಿಎಸ್ ಯಡಿಯೂರಪ್ಪ ಪತ್ರ

ಆದರೆ ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯಡಿ 67.16 ಟಿಎಂಸಿ ನೀರಿನ ಸಂಗ್ರಹ ಪ್ರಸ್ತಾಪ ಮಾಡಿರೋದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎನ್ನುವುದು ಸ್ಟಾಲಿನ್ ವಾದ. ಅಂತಾರಾಜ್ಯ ನೀರಾವರಿ ಹಂಚಿಕೆಯ ನಿಯಮಾವಳಿ ಇಲ್ಲಿ ಉಲ್ಲಂಘನೆಯಾಗುತ್ತಿದ್ದು ಸಹಕಾರ ಸಹಬಾಳ್ವೆ ಮುಖ್ಯ ಎಂದು ಹೇಳಿದ್ದಾರೆ. ವಿವಾದಕ್ಕೆ ಈ ವಿಚಾರ ಕಾರಣವಾಗಬಾರದು ಎಂದಿದ್ದಾರೆ.

ಬಹುಕಾಲದ ಚರ್ಚೆ ನಂತರ ಮೇಕೆದಾಟು ಯೋಜನೆಗೆ  ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ತಮಿಳುನಾಡು ಮತ್ತೆ ಕ್ಯಾತೆ ಮುಂದುವರಿಸಿದ್ದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.  ಮೇಕೆದಾಟು ಯೋಜನೆಗೆ ವಿರೋಧ ಮಾಡಬೇಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಟಾಲಿನ್ ಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಟಾಲಿನ್ ಉತ್ತರ ನೀಡಿದ್ದಾರೆ.

 

Latest Videos
Follow Us:
Download App:
  • android
  • ios