ಪ್ರಧಾನಿ ಮೋದಿ ಹೊಗಳಿದ್ದ ಶಾಸಕನಿಗೆ ಉಚ್ಚಾಟನೆ ಶಿಕ್ಷೆ/ ಡಿಎಂಕೆ ಶಾಸಕ ಕು.ಕ. ಸೆಲ್ವಂ ಗೆ ಡಿಎಂಕೆ ಗೇಟ್ ಪಾಸ್ / ಸೆಲ್ವಂ ಬಿಜೆಪಿ ಸೇರುತ್ತಾರೆ ಎಂದು ಕೇಳಿಬರುತ್ತಿದೆ ಮಾತು

ಚೆನ್ನೈ(ಆ. 06) ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದ ಡಿಎಂಕೆ ಶಾಸಕ ಕು.ಕ. ಸೆಲ್ವಂ ಗೆ ಡಿಎಂಕೆ ಗೇಟ್ ಪಾಸ್ ನೀಡಿದೆ. ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು ಶೋಕಾಸ್‌ ನೋಟಿಸ್‌ ಕೂಡ ಜಾರಿ ಮಾಡಲಾಗಿದೆ.

ಚೆನ್ನೈನ ತೌಸಂಡ್‌ ಲೈಟ್‌ ಕ್ಷೇತ್ರದ ಶಾಸಕ ಕು.ಕ. ಸೆಲ್ವಂ ನಡ್ಡಾರನ್ನು ಭೇಟಿಯಾಗಿದ್ದರಿಂದ ತಮಿಳುನಾಡು ರಾಜಕಾರಣದದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಇದಾದ ಬೆನ್ನಿಗೆ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು.. ಇದೆಲ್ಲವನ್ನು ಅರಿತ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಡ್ಯಾಮೇಜ್ ಕಂಟ್ರೋಲ್ ಮಾಡಲು ನೋಟಿಸ್ ನೀಡಿದ್ದಾರೆ.

ಅಯೋಧ್ಯೆ ರಾಜಕುಮಾರಿ ಕೊರಿಯಾ ರಾಣಿಯಾದ ಕತೆ

ಕ್ಷೇತ್ರದಲ್ಲಿರುವ ನಂಗಂಬಕ್ಕಮ್‌ ರೈಲ್ವೇ ನಿಲ್ದಾಣದಲ್ಲಿ ಲಿಫ್ಟ್‌ ಅಳವಡಿಸುವಂತೆ ಮನವಿ ಸಲ್ಲಿಸಲು ನಾನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಭೇಟಿಯಾಗಲು ಹೋಗಿದ್ದೆ. ಇನ್ನು ಅಯೋಧ್ಯೆ ರೀತಿಯಲ್ಲಿ ರಾಮೇಶ್ವರಂ ಅಭಿವೃದ್ಧಿಗೊಳಿಸುವಂತೆ ನಡ್ಡಾರನ್ನು ಕೇಳಲು ಹೋಗಿದ್ದೆ ಎಂದು ಸೆಲ್ವಂ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಹೊಗಳಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೋದಿ ನಡೆಸುತ್ತಿರುವ ಪ್ರಯತ್ನಗಳಿಗೆ ಶುಭ ಹಾರೈಸಿದ್ದಕ್ಕೆ ಅವರಿಗೆ ಗೇಟ್ ಪಾಸ್ ಸಿಕ್ಕಿದೆ.

ಜನರ ಸೇವೆ ಮಾಡಲು ನಾನು ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಹಿತ ನನಗೆ ಮುಖ್ಯ, ಅದಕ್ಕಾಗಿ ಯಾರನ್ನು ಬೇಕಾದರೂ ಭೇಟಿ ಮಾಡುತ್ತೇನೆ ಎಂದಿದ್ದಾರೆ. ಆದರೆ ಸೆಲ್ವಂ ಬಿಜೆಪಿ ಕಚೇರಿಗೆ ಬಂದಿಲ್ಲ ಎಂದು ಭಾರತೀಯ ಜನತಾ ಪಾರ್ಟಿ ಹೇಳಿದೆ.