Asianet Suvarna News Asianet Suvarna News

ಯುಪಿ, ಬಿಹಾರದ ಹಿಂದಿ ಭಾಷಿಕರು ತಮಿಳುನಾಡಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡ್ತಾರೆ: ವಿವಾದದ ಕಿಡಿ ಹೊತ್ತಿಸಿದ ದಯಾನಿಧಿ ಮಾರನ್

ದಯಾನಿಧಿ ಮಾರನ್‌ ಹೇಳಿಕೆ ಬಗ್ಗೆ ಬಿಹಾರದ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದು, ಹಿಂದಿ ಮಾತನಾಡುವ ಜನರ ಬಗ್ಗೆ ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ತಮ್ಮ ಮೈತ್ರಿಕೂಟದ ಪಾಲುದಾರರ ಅಭಿಪ್ರಾಯವನ್ನು ಒಪ್ಪುತ್ತಾರೆಯೇ ಎಂದು ಟ್ವೀಟ್‌ ಮಾಡಿದ್ದಾರೆ.

dmk s dayanidhi maran says hindi speakers from uttar pradesh bihar clean toilets in tamil nadu bjp shares video ash
Author
First Published Dec 24, 2023, 1:51 PM IST

ನವದೆಹಲಿ (ಡಿಸೆಂಬರ್ 24, 2023): ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಚರ್ಚೆಗೆ ಡಿಎಂಕೆ ನಾಯಕ ದಯಾನಿಧಿ ಮಾರನ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ನಿರ್ಮಾಣ ಕೆಲಸ, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಕೀಳು ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.

ದಯಾನಿಧಿ ಮಾರನ್‌ ಹೇಳಿಕೆಯ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದ್ದು, ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಉತ್ತರ ಭಾರತದ ರಾಜ್ಯಗಳ ಬಗ್ಗೆ ಸಂಸತ್ತಿನಲ್ಲಿ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (ಸಿಎಂ ಆಗುವ ಮುನ್ನ) ಬಿಹಾರದ ಡಿಎನ್‌ಎಗಿಂತ ತೆಲಂಗಾಣ ಡಿಎನ್‌ಎ ಉತ್ತಮವಾಗಿದೆ ಎಂದು ಹೇಳಿದ ನಂತರ ಮತ್ತೊಮ್ಮೆ ಡಿಎಂಕೆ ನಾಯಕ ದಯಾನಿಧಿ ಮಾರನ್ ಉತ್ತರ - ದಕ್ಷಿಣ ಚರ್ಚೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.

 

'ಯಾರಪ್ಪನ ಮನೆಯ ಹಣ ಕೇಳ್ತಿಲ್ಲ' ಎಂದ ಉದಯನಿಧಿ, ನಾಲಿಗೆಯ ಮೇಲೆ ಹಿಡಿತವಿರಲಿ, ಎಚ್ಚರಿಸಿದ ವಿತ್ತ ಸಚಿವೆ!

ಡಿಎಂಕೆ I.N.D.I.A ಬಣದ ಭಾಗವಾಗಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಯು, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷವನ್ನು ಒಳಗೊಂಡಿರುವ ವಿರೋಧ ಪಕ್ಷದ ಮೈತ್ರಿಕೂಟಕ್ಕೆ ಸೇರಿದೆ. ಇನ್ನು, ದಯಾನಿಧಿ ಮಾರನ್‌ ಹೇಳಿಕೆ ಬಗ್ಗೆ ಬಿಹಾರದ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದು, ಹಿಂದಿ ಮಾತನಾಡುವ ಜನರ ಬಗ್ಗೆ ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ತಮ್ಮ ಮೈತ್ರಿಕೂಟದ ಪಾಲುದಾರರ ಅಭಿಪ್ರಾಯವನ್ನು ಒಪ್ಪುತ್ತಾರೆಯೇ? ಡಿಎಂಕೆ ಮತ್ತು  I.N.D.I.A ಒಕ್ಕೂಟ ಹಿಂದಿ ಮಾತನಾಡುವ ಜನರ ವಿರುದ್ಧ ಏಕೆ ಇಷ್ಟು ದ್ವೇಷವನ್ನು ಹೊಂದಿದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದೂ ಬಿಹಾರದ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

 ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!

ಹಿಂದಿ ಬಗ್ಗೆ ದಯಾನಿಧಿ ಮಾರನ್ ಅವರ ಕಾಮೆಂಟ್ ಇಂಗ್ಲೀಷ್‌ ಕಲಿಯುವ ಮತ್ತು ಹಿಂದಿಯನ್ನು ಮಾತ್ರ ಕಲಿಯುವ ಜನರ ಹೋಲಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಇಂಗ್ಲೀಷ್‌ ಕಲಿಯುವವರಿಗೆ ಐಟಿಯಲ್ಲಿ ಉತ್ತಮ ಉದ್ಯೋಗಗಳು ಸಿಗುತ್ತವೆ, ಆದರೆ ಹಿಂದಿಯನ್ನು ಮಾತ್ರ ಕಲಿಯುವವರು - ಉತ್ತರ ಪ್ರದೇಶ ಮತ್ತು ಬಿಹಾರದ ಜನರು ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಡಿಎಂಕೆ ನಾಯಕ ಹೇಳಿದರು. ಹಿಂದಿಯನ್ನು ಮಾತ್ರ ಕಲಿತರೆ ಹೀಗಾಗುತ್ತದೆ ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ ಮತ್ತು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ನಂತರ ಉತ್ತರ - ದಕ್ಷಿಣ ಭಾರತ ಚರ್ಚೆ ಹೆಚ್ಚಾಯಿತು. ಮತದಾನದ ಮಾದರಿಯ ಬಗ್ಗೆ ಹಲವಾರು ಕಾಮೆಂಟ್‌ಗಳನ್ನು ಮಾಡಲಾಗಿದ್ದು, ಈ ಸಂದರ್ಭದಲ್ಲಿ ಡಿಎಂಕೆಯ ಸೆಂಥಿಲ್ ಕುಮಾರ್ ಉತ್ತರ ಭಾರತದ ರಾಜ್ಯಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ. 

ಇತ್ತೀಚೆಗೆ I.N.D.I.A ಒಕ್ಕೂಟದ ಸಭೆಯಲ್ಲಿ ನಿತೀಶ್ ಕುಮಾರ್ ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಇತ್ತೀಚೆಗೆ ಹಿಂದಿ - ಹಿಂದಿಯೇತರ ಭಾಷೆಯ ಚರ್ಚೆ ನಡೆಯಿತು ಮತ್ತು ಡಿಎಂಕೆ ನಾಯಕ ಟಿಆರ್ ಬಾಲು ಅವರ ಭಾಷಣದ ಇಂಗ್ಲೀಷ್‌ ಅನುವಾದವನ್ನು ಕೋರಿದರು. ಆ ವೇಳೆ ಆರ್‌ಜೆಡಿ ಸಂಸದ ಮನೋಜ್ ಝಾ ಅನುವಾದಿಸಲು ಮುಂದಾದರು. ಆದರೆ, ಇದನ್ನು ನಿರಾಕರಿಸಿದ ನಿತೀಶ್‌ ಕುಮಾರ್‌, ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ ಮತ್ತು ಹಿಂದಿಯನ್ನು ನಮ್ಮ ರಾಷ್ಟ್ರೀಯ ಭಾಷೆ ಎಂದು ಕರೆಯುತ್ತೇವೆ. ನಮಗೆ ಭಾಷೆ ತಿಳಿದಿರಬೇಕು ಎಂದು ಬಿಹಾರ ಸಿಎಂ ಹೇಳಿದ್ದರು. 

Latest Videos
Follow Us:
Download App:
  • android
  • ios