ಚೆನ್ನೈ(ನ.17): ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಬಿಜೆಪಿ ಎದುರಿಸಿ ಭಾರೀ ಸೋಲು ಅನುಭವಿಸುವಂತಾಗಿದೆ ಎಂದು ಪ್ರಾದೇಶಿಕ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ತಮಿಳುನಾಡಿನ ಡಿಎಂಕೆ ತನ್ನ ಹಳೆಯ ಸ್ನೇಹಿತನೊಂದಿಗೇ ಚುನಾವಣೆ ಎದುರಿಸಲು ಮುಂದಾಗಿದೆ. ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿದೆ ಎಂದು ಹೇಳಿದೆ. ಡಿಎಂಕೆಯ ರಾಷ್ಟ್ರೀಯ ವಕ್ತಾರ ಸರವನಾನನ್ Asianet Newsableನ ಮೊಹಮ್ಮದ್ ಯಾಕೂಬ್ ನಡೆಸಿದ ಸಂದರ್ಶನದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ.

* ಬಿಹಾರದ ಬಳಿಕ ಬಿಹಾರದ ಮುಂದಿನ ಗುರಿ ತಮಿಳುನಾಡು?

ಅನುಮಾನವೇ ಇಲ್ಲ. ಆದರೆ ಬಿಹಾರದಲ್ಲಿ ನಡೆದಿರುವುದನ್ನು ದಕ್ಷಿಣ ಭಾರತದಲ್ಲಿ ಮರುಕಳಿಸಲು ಸಾಧ್ಯವಿಲ್ಲ. ಇಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ಯಾವ ವಿಚಾರ ಉತ್ತರ ಭಾರತದಲ್ಲಿ ಮಹತ್ವ ಪಡೆಯುತ್ತದೋ ಅದು ದಕ್ಷಿಣ ಭಾರತದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ. ಇಲ್ಲಿ ಒಡೆದು ಆಳುವ ನೀತಿ ಬದಲು ಪ್ರಗತಿಶೀಲತೆ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡಲಾಗುತ್ತದೆ.

* ಬಿಹಾರ ಚುನಾವಣೆ ಬಳಿಕ ಮಹಾಘಟಬಂಧನದ ನಾಯಕರು ತಮ್ಮ ಸೋಲಿಗೆ ಕಾಂಗ್ರೆಸ್ ಕಾರಣ ಎನ್ನುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಹೀಗೇ ಆರೋಪಿಸಿತ್ತು. ಡಿಎಂಕೆಯೂ ಹೀಗೇ ಮಾಡುತ್ತಾ?

ತಮಿಳುನಾಡಿನ ವಿಚಾರದಲ್ಲಿ ಕಾಂಗ್ರೆಸ್ ಜೊತೆಗಿನ ನಮ್ಮ ನಂಟು ಸರಿಯಾಗಿದೆ. ಇಡೀ ದೇಶವೇ ಬಿಜೆಪಿ ಹಾಗೂ ಮೋದಿಗೆ ಮತ ನೀಡುತ್ತಿದ್ದ ಸಂದರ್ಭದಲ್ಲೂ ನಾಮಗೆ ಜನಮತ ಸಿಕ್ಕಿತ್ತು. ನಮ್ಮ ಮೈತ್ರಿ 38 ರಲ್ಲಿ ಹೆಚ್ಚಿನ ಸ್ಥಾನ ಗಳಿಸಿತು. ಇಲ್ಲಿನ ಸ್ಥಿತಿ ಭಿನ್ನವಾಗಿದೆ.

* ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಪಿ ಸೇರಿದ್ದಾರೆ. ಖುಷ್ಬೂ ಕೂಡಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದನ್ನು ನೀವು ಹೇಗೆ ಪರಿಗಣಿಸುತ್ತೀರಿ?

ತಮಿಳುನಾಡಿನ ವಿಚಾರ ಬಂದಾಗ ಇಲ್ಲಿ ಕೇವಲ ಡಿಎಂಕೆ ಹಾಗೂ ಎಐಡಿಎಂಕೆಯನ್ನಷ್ಟೇ ಪರಿಗಣಿಸಲಾಗುತ್ತದೆ. ಅದೆಷ್ಟೇ ಪಕ್ಷ ಬಂದರೂ ಈ ಎರಡು ಪಕ್ಷಗಳಷ್ಟೇ ಮಹತ್ವ ಪಡೆದುಕೊಳ್ಳುತ್ತವೆ. ಒಂದು ವೇಳೆ ಪಕ್ಷಗಳು ಡಿಎಂಕೆ ಸಿದ್ಧಾಂತದಂತೆ ನಡೆದುಕೊಂಡರಷ್ಟೇ ಅವರಿಗೆ ಲಾಭವಾಗುತ್ತದೆ. ಆದರೆ ಬಿಜೆಪಿ ಡಿಎಂಕೆ ಸಿದ್ಧಾಂತ ವಿರೋಧಿಸುತ್ತದೆ. ಹೀಗಿರುವಾಗ ಇಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಸಾಧ್ಯ.

* ತಮಿಳುನಾಡು ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಭಾವ ಬೀರಬಹುದೇ?

ತಮಿಳುನಾಡಿನಲ್ಲಿ ಕೇವಲ ಡ್ರಾವಿಡರ ವಿಚಾರ ಹಾಗೂ ರಾಜಕೀಯ ಫಲ ಕೊಡಲಿದೆ. ಜನರ ಬಳಿ ನೀವು ಅವರಿಗೇನು ಮಾಡುತ್ತೀರೆಂದು ಹೇಳಬೇಕು. ನೀವು ಹೇಗೆ ಅಭಿವೃದ್ಧಿ ಮಾಡುತ್ತೀರಿ ಎಂದು ಅವರಿಗೆ ಹೇಳಬೇಕು. ಬಿಜೆಪಿ ಯಾವ ಬಗ್ಗೆ ಹೇಳುತ್ತದೋ ಜನರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಬಿಜೆಪಿ ಇಲ್ಲಿ ಕೇವಲ ನೋಟಾ ಜೊತೆ ಸ್ಪರ್ಧಿಸಲಿದೆ ಎಂದಿದ್ದಾರೆ.